ರಾಗ ಚಂದ್ರಕೌನ್ಸ್
ರಾಗ ಕಾಪಿ ಛಾಪುತಾಳ
2nd Audio by Mrs. Nandini Sripad
ಕಣ್ಣಿನಿಂದ ನೋಡೋ ಹರಿಯ ||ಪ||
ಒಳಗಣ್ಣಿನೊಳಗಿಂದ ನೋಡೋ ಮೂಜಗದೊಡೆಯನ ||ಅ||
ಆಧಾರ ಮೊದಲಾದ ಆರು ಚಕ್ರ
ಶೋಧಿಸಿ ಬಿಡಬೇಕು ಈಷಣ ಮೂರು
ಸಾಧಿಸಿ ಸುಷುಮ್ನಾ ಏರು , ಅಲ್ಲಿ
ಭೇದಿಸಿ ನೀ ಪರಬ್ರಹ್ಮನ ಸೇರು ||
ಎವೆ ಹಾಕದೆ ಮೇಲೆ ನೋಡಿ , ಬೇಗ
ಪವನನಿಂದಲಿ ವಾಯುಬಂಧನ ಮಾಡಿ
ಸವಿದು ನಾದವ ಪಾನಮಾಡಿ , ಅಲ್ಲಿ
ನವವಿಧಭಕ್ತಿಲಿ ನಲಿನಲಿದಾಡಿ ||
ಅಂಡಜದೊಳಾಡುತಾನೆ , ಭಾನು-
ಮಂಡಲ ನಾರಾಯಣನೆಂಬೋವನೆ
ಕುಂಡಲಿತುದಿಯೊಳಿದ್ದಾನೆ , ಶ್ರೀಪು-
ರಂದರವಿಠಲ ಪಾಲಿಸುತಾನೆ ||
***
pallavi
kaNNinoLage nODo hariya
anupallavi
oLa kaNNInoLaginda nODO mujjagadoDeyana
caraNam 1
AdhAra modalAda Aru cakra shOdhisi biDa bEku IsaNa mUru
sADhisi suSumnA Eru alli bhEdisi nI parabrahmana sEru
caraNam 2
eve hAkade mEle nODi bEga pavananindali vAyu bandhana mADi
savidu nAdava pAna mADi alli nava vidha bhaktili nalinalidADi
caraNam 3
aNDajadoLADutAne bhAnu maNDala nArAyaNanembOvane
kuNDali tudiyoLiddAne shrI purandara viTTala pAlisutAne
***
ರಾಗ ಹಿಂದೋಳ ಆದಿತಾಳ
ಕಣ್ಣಿನಿಂದಲಿ ನೋಡೋ ಹರಿಯ । ಒಳ
ಗಣ್ಣಿನಿಂದಲಿ ನೋಡೋ ಮೂರ್ಜಗದೊಡೆಯನ ॥
ಆಧಾರ ಮೊದಲಾದ ಆರು ಚಕ್ರ
ಶೋಧಿಸಿ ಬಿಡಬೇಕು ಈ ಕ್ಷಣ ಮೂರು
ಸಾಧಿಸಿ ಸುಷಮ್ನ ಏರು ಅಲ್ಲಿ
ಬೇಧಿಸಿ ನೀ ಪರಬ್ರಹ್ಮನ ಸೇರು ॥ 1 ॥
ಎವೆ ಹಾಕದೆ ಮೇಲೆ ನೋಡಿ ಬೇಗ
ಪವನ ನಿಂತಲ್ಲಿ ವಾಯು ಬಂಧನ ಮಾಡಿ
ಒಲಿದು ನಾದವ ಪಾನ ಮಾಡಿ ಅಲ್ಲಿ
ನವವಿಧ ಭಕ್ತಿಲಿ ನಲಿನಲಿದಾಡಿ ॥ 2 ॥
ಅಂಡದೊಳಗೆ ಆಡುತಾನೆ ಭಾನು
ಮಂಡಲ ನಾರಾಯಣನೆಂಬುವನು
ಕುಂಡಲ ತುದಿಯೊಳಿದ್ದಾನೆ ನಮ್ಮ
ಪುರಂದರವಿಠಲನು ಪಾಲಿಸುತಾನೆ ॥ 3 ॥
***
Excellent collection
ReplyDelete