ಹರಿಯ ಬಿಟ್ಟರೆ ಗತಿಯಿಲ್ಲ
ಮಾರುತಿ ಮರೆತಗೆ ಸಾಧನವಿಲ್ಲ ||ಪ||
ಹರಿ ಒಲಿದವರಿಗೆ ಹನುಮ ಒಲಿವ
ಹನುಮ ಒಲಿಯದಿರೆ ಹರಿ ಒಲಿಯಲಿಲ್ಲ
ಹರಿಸಂಕಲ್ಪವೆಲ್ಲ ಹನುಮ ಬಲ್ಲ
ಹನುಮ ಬಿಟ್ಟುದನು ಹರಿ ತಾನೊಲ್ಲ ||
ಮೂರವತಾರದಿ ಬಂದು, ಮುಕ್ತಿ
ದಾರಿಗಳೆಲ್ಲ ತೋರಿದನಿಂದು
ಸಾರಿ ಜನರಿಗೆ ಅಂದು, ಮುಕ್ತಿ
ಸೇರೋ ಮಾರ್ಗವ ತೋರಿದನಿಂದು ||
ಶತಕಲ್ಪಗಳಲಿ ಸದಾ ಈತ, ಹಂಸ
ಮಂತ್ರಗಳೆಲ್ಲ ಜಪಿಸುವ ಖ್ಯಾತ
ತತ್ವೇಶರಿಗನುಕೂಲನೀತ, ಗುರು
ಪುರಂದರವಿಠಲನ ನಿಜದೂತ ||
***
pallavi
hariya bittare gatiyilla mAruti maretage sADhaavilla
caraNam 1
hari olidavarige hanumana oliva hanuma oliyadire hari oliyalilla
hari sankalpavella hanuma balla hanuma biTTudanu hari tanolla
caraNam 2
mUravatAradi bandu mukti dArgaLella tOridanindu
sAri janarige andu mukti sErO mArgava tOridanindu
caraNam 3
shata kalpagaLali sadA iTa hamsa mantragaLella japisuva khyAta
tatvEsharig-anukUlanIta guru purandra viTTalana nija dUta
***
No comments:
Post a Comment