1st Audio by Amruta Bai
ಹರಿನಾರಾಯಣ ಹರಿನಾರಾಯಣ
ಹರಿನಾರಾಯಣ ಎನು ಮನವೆ ||ಪ||
ನಾರಾಯಣನೆಂಬ ನಾಮದ ಬೀಜವ
ನಾರದ ಬಿತ್ತಿದ ಧರೆಯೊಳಗೆ ||ಅ||
ತರಳ ಧ್ರುವನಿಂದ ಅಂಕುರಿಸಿತು ಅದು
ವರ ಪ್ರಹ್ಲಾದನಿಂದ ಮೊಳಕೆ ಆಯ್ತು
ಧರಣೀಶ ರುಕ್ಮಾಂಗದನಿಂದ ಚಿಗುರಿತು
ಗುರುಪಿತಾಮಹನಿಂದ ಹೂವಾಯಿತು ||
ವಿಜ್ಯನ ಸತಿಯಿಂದ ಫಲವಾಯಿತು ಅದು
ಗಜರಾಜನಿಂದ ದೊರೆ ಹಣ್ಣಾಯಿತು
ದಿವಿಜ ಶುಕಮುನಿಯಿಂದ ಫಲ ಪಕ್ವವಾಯಿತು
ಅಜಮಿಳ ತಾನುಂಡು ರಸ ಸವಿದ ||
ಕಾಮಿತ ಫಲವೀವ ನಾಮವೊಂದಿರಲಿಕೆ
ಹೋಮನೇಮ ಜಪತಪವೇಕೆ
ಸ್ವಾಮಿ ಪುರಂದರವಿಠಲನಾಮವ
ನೇಮದಿಂದ ನೆನೆ ಮನವೆ ||
***
ರಾಗ ಶಂಕರಾಭರಣ. ಆದಿ ತಾಳ (raga tala may differ in audio)
shankarabharana - Aadi
Hari naaraayana hari naaraayana |
Harinaaraayana ene manave ||
Naaraayananemba naamada beejava |
Naarada bittida dhareyolage ||
Tarala druvaninda ankurisitu adu |
Vara pralhaadaninda molakaaytu |
Dharaneesha rukumaangadaninda chiguritu |
Kuru pitaamahaninda hoovaaytu || 1 ||
Vijayana stutiyinda kaayaayitu adu |
Gajaraajaninda dore hannaaytu |
Dhrudha shukamuniyinda paripakvavaayitu |
Ajaamila taanundu rasava savidaa || 2 ||
Kaamita phalaveeva naamavondiralikke |
Homa nema japa tapaveke |
Swaami shreepurandaravittalana |
Naamava nemadinda nee nene manave || 3 ||
***
pallavi
hari nArAyaNa hari nArAyaNa hari nArAyaNa enu manave
anupallavi
nArAyaNanemba nAmada bIjava nArada bittida dhareyoLage
(hari)
caraNam 1
taraLa dhruvaninda angurisitu adu vara prahlAdaninda moLage Aitu
dharaNIsha rukmAngadaninda ciguridu gurupitA mahaninda huvAitu
caraNam 2
vijyana satiyinda phalavAyitu adu gajarAjaninda dore haNAidu
divija shukamuniyinda bala pakvIyitu ajamiLa tAnuNDu rasa savida
caraNam 3
kAmita phalavIva nAmavondiralike hOma nEma japa tapavEke
svAmi purandara viTTala nAm,ava nEmadinda nene manave
***
P: hari nArAyaNa hari nArAyaNa hari nArAyaNa enu manave
A: nArAyaNanemba nAmada bIjava nArada bittida dhareyoLage
C1: taraLa dhruvaninda angurisitu adu vara prahlAdaninda moLake Aitu
dharaNIsha rukmAngadaninda ciguritu gurupitA mahaninda huvAitu
2: vijyana satiyinda phalavAyitu adu gajarAjaninda dore haNAitu
dwija shukamuniyinda pari pakvIyitu ajAmiLa tAnuNDu rasa savida
3: kAmita phalavIva nAmavondiralAgi hOma nEma japa tapavEke
svAmi shri purandara viTTala nAmava nEmadindali nene manave
***
Meaning: O mind (manave) say Hari narayana repeatedly.
A: Narada sowed (bittida) the seed (bIja) called the name of nArAyaNa on this earth(dhare)
C1: It (the name - NArAyaNa) started germinating (angurisu) from the boy Dhruva, and became a sapling (moLake); It got its foliage(chiguritu) from King Rukmangada, and bloosomed (huvAitu) because of Guru Pitamaha.
C2: It (the name nArAyaNa) became a fruit because of the wife(sati) of Vijaya, and became a half-ripe(dore) fruit(hannu) because of gajaraja, the elephant king; became ripe(paripakva) because of the twice born(dwija) saint Shuka, and AjamiLa brought it (tandu), ate and enjoyed(rasa savida)
C3: What is the need of homa, Nema and japa, when the nAma (nArAyaNa) itself is capable of fulfilling all the wishes, (therefore) remember the name of Swami purandaravithala unfailingly(nema).
***
******
ಹರಿ ನಾರಾಯಣ ಹರಿ ನಾರಾಯಣ
ಹರಿನಾರಾಯಣ ಎನು ಮನವೆ
ಹರಿ ನಾರಾಯಣ ಹರಿ ನಾರಾಯಣ
ಹರಿನಾರಾಯಣ ಎನು ಮನವೆ
ನಾರಾಯಣನೆಂಭೋ ನಾಮದ ಬೀಜವ
ನಾರದ ಭಿತ್ತಿದ ಧರೆಯೊಳಗೆ ||ಹರಿ||
ನಾರದ ಭಿತ್ತಿದ ಧರೆಯೊಳಗೆ ||ಹರಿ||
ಸರಳ ಧ್ರುವನಿಂದ ಅಂಕುರಿಸಿತು
ಅದು ವರ ಪ್ರಹ್ಲಾದನಿಂದ ಮೊಳೆಯಾಯ್ತು
ಧರಣೀಶ ರುಕುಮಾಂಗದನಿಂದ ಚಿಗುರಿತು
ಕುರು ಪಿತಾಮಹನಿಂದ ಹೂವಾಯ್ತು ||ಹರಿ||
ಕುರು ಪಿತಾಮಹನಿಂದ ಹೂವಾಯ್ತು ||ಹರಿ||
ವಿಜಯನ ಸತಿಯಿಂದ ಕಾಯಾಯ್ತು
ಅದು ದೊರೆ ಗಜೇಂದ್ರನಿಂದ ದೊರೆ ಹಣ್ಣಾಯ್ತು
ದ್ವಿಜ ಶುಕ ಮುನಿಯಿಂದ ಪರಿಪಕ್ವವಾಯಿತು
ಅಜಮಿಳ ತಾನುಂಡು ರಸ ಸವಿದ||ಹರಿ||
ಅಜಮಿಳ ತಾನುಂಡು ರಸ ಸವಿದ||ಹರಿ||
ಕಾಮಿತ ಫಲವೆಂಬ ನಾಮವೊಂದಿರಲಾಗಿ
ಹೋಮ ನೇಮ ಜಪ ತಪವ್ಯಾಕೆ
ಸ್ವಾಮಿ ಶ್ರೀ ಪುರಂದರವಿಠ್ಠಲನ
ನಾಮವ ನೇಮದಿಂದಲಿ ನೆನೆ ಮನವೆ ||ಹರಿ||
**********
ನಾರಾಯಣನೆಂಬ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ
ತರ್ಲ ಧ್ರುವನಿಂದ ಅನ್ಗುರಿಸಿತು ಅದು ವರ ಪ್ರಹ್ಲಾದನಿನ್ದ ಮೊಳಗೆ ಆಯಿತು
ವಿಜಯನ ಸತಿಯಿಂದ ಫಲವಾಯಿತು ಅದು ಗಜರಾಜನಿನ್ದ ದೊರೆ ಹನಿದು
ಕಮಿಟ ಫಲವೀವ ನಾಮವೊನ್ದಿರಲಿಕೆ ಹೋಮ ನೇಮ ಜಪ ತಪವೇಕೆ
ಹರಿ ನಾರಾಯಣ ಹರಿ ನಾರಾಯಣ ಹರಿ ನಾರಾಯಣ ಏನು ಮನವೇ
ನಾರಾಯಣನೆಂಬ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ
ತರ್ಲ ಧ್ರುವನಿಂದ ಅನ್ಗುರಿಸಿತು ಅದು ವರ ಪ್ರಹ್ಲಾದನಿನ್ದ ಮೊಳಗೆ ಆಯಿತು
ಧರಣೀಶ ರುಕ್ಮಾಂಗದನಿನ್ದ ಸಿಗುರಿದು ಗುರುಪಿತಾ ಮಹಾನಿಂದ ಹುವಾಇತು
ವಿಜಯನ ಸತಿಯಿಂದ ಫಲವಾಯಿತು ಅದು ಗಜರಾಜನಿನ್ದ ದೊರೆ ಹನಿದು
ಡಿವಿಜ ಶುಕಮುನಿಯಿಂದ ಬಲ ಪಕ್ವೀಯಿತು ಅಜಮಿಳ ತಾನುಣ್ಡು ರಸ ಸವಿದ
ಕಮಿಟ ಫಲವೀವ ನಾಮವೊನ್ದಿರಲಿಕೆ ಹೋಮ ನೇಮ ಜಪ ತಪವೇಕೆ
ಸ್ವಾಮಿ ಪುರಂದರ ವಿಟ್ಟಲ ನಾಮ್ ಆವಾ ನೇಮದಿನ್ದ ನೆನೆ ಮನವೇ
******
another version
another version
ಹರಿನಾರಾಯಣ ಹರಿನಾರಾಯಣ
ಹರಿನಾರಾಯಣ ಎನು ಮನವೆ ||ಪ||
ದುರಿತಶರಧಿಯನುತ್ತರಿಸಬೇಕಾದರೆ
ಸಿರಿಯರಸನ ನುತಿಸಿರು ಮನವೆ||ಅ||
ಘೋರತರದ ಸಂಸಾರವು ದುಃಖದ ವಾರಿಧಿ ಇದರೊಳಗೇನುಂಟು
ಮೂರುದಿನದ ಬಾಳಿಕೆ ಇದರೊಳಗಾರೈಸುವುದೇತರ ನಂಟು
ತೋರುವ ಸಿರಿಸಂಪತ್ತಿನ ನೆಲೆಯು ವಿಚಾರಿಸಲದು ಕನಸಿನ ಗಂಟು
ಮಾರಮಣನ ಮನಮುಟ್ಟಿ ಭಜಿಸಿದರೆ ಕಾರಣ ಮುಕುತಿಗೆ ಕಡೆವುಂಟು ||
ಲೆತ್ತಪಗಡೆ ಚತುರಂಗ ಜೂಜಾಟದಿ ಹೊತ್ತು ಕಳೆವುದೇಕೆ ನೀನು
ಸುತ್ತಿ ಸುತ್ತಿ ಸುಳಿದು ಬಳಲುತ್ತ ಮಾಡಿದ ಗೃಹಕೃತ್ಯದಿ ನಿನಗಿಹ ಫಲವೇನು
ಅತ್ಯಾತುರದಿಂದ ಗಳಿಸಿದ ಆರ್ಜನೆ ಹತ್ತಿ ಸಂಗಡ ಬರುವುದೇನು
(ಕತ್ತಲೆಯೊಳು ಕಣ್ಣನು ತೆರೆದಂದದಿ ವ್ಯರ್ಥದಿ ಸಂಗ್ರಹಿಸುವುದೇನು)
ಮೃತ್ಯುಭಯವ ನೀ ಜಯಿಸಬೇಕಾದರೆ ಪುರುಷೋತ್ತಮಗೆ ಶರಣೆನ್ನು ||
ಕೂಳಿನ ಬಲದಲಿ ಬೆಳೆದೀ ಕಾಯವಿದು ಬಾಳುವೆಯೆಂಬುದು ಸ್ಥಿರವಲ್ಲ
ಮಾಳಿಗೆ ಮನೆ ಉಪ್ಪರಿಗೆ ಕೋಣೆಯು ನಾಳೆಗೆ ಅಲ್ಲಿಗೆ ಬರೋದಿಲ್ಲ
ಜಾಳಿಗೆ ತುಂಬಿದ ಹೊನ್ನಾಭರಣವು ನಾಳೆಗೆ ಸಂಗಡ ಬಾಹೋದಲ್ಲ
ಕಾಲನ ಭಯವನು ಕಳೆಯಬೇಕಾದರೆ ನಾಲಿಗೆಯಲಿ ಸ್ಮರಿಸಿರಿ ಸೊಲ್ಲ ||
ಮಡದಿಮಕ್ಕಳು ಮಮಕಾರದಲ್ಲಿ ಮನವಿಡುತಲಿ ನೀನಿರಬೇಡ
ಬಿಡಲಾರದ ಮಾಯಾಪಾಶಕೆ ಸಿಲುಕಿ ಕಡುಲೋಭಿಯಾಗಿ ನೀ ಕೆಡಬೇಡ
ತಡೆಯದೆ ಯಮನ ದೂತರು ಬಂದು ಎಳೆವಾಗ ಅವರಲಿ ಸಿಗಬೇಡ
ಕಡಲಶಯನನ ಭಜಿಸಲು ಮುಕ್ತಿಯ ಪಡೆಯಬಹುದು ನುತಿಸೊ ಗಾಢ ||
ಕುಮತಿಗಳರಿಷಡ್ವರ್ಗ ಪರಾಕ್ರಮ ಗತಿಗಳನೆಲ್ಲವು ನೀ ಕ್ಷಮಿಸೊ
ಭ್ರ್‍ಅಮೆಗೊಳಿಸುವ ಮಾಯೇಂದ್ರಿಯಂಗಳ ತವಕವಿಲ್ಲದಲೆ ನೀ ನಿಲಿಸೊ
ಯಮನಾಳ್ಗಳು ಹಿಮ್ಮೆಟ್ಟುತಲಿಹರೊ ಕ್ರಮಕರ್ಮಗಳ ನಿಲ್ಲದೆ ನಡೆಸೊ
ಅಮಿತಪರಾಕ್ರಮ ಪುರಂದರವಿಠಲನ ಪಾದಧ್ಯಾನದೊಳ್ ಮನವಿರಿಸೊ ||
*********
No comments:
Post a Comment