Saturday, 7 December 2019

ಹಣ್ಣು ಬಂದಿದೆ ಜನರು ಹಣ್ಣು ಕೊಳ್ಳಿರೊ purandara vittala

ರಾಗ ಪಂತುವರಾಳಿ/ಕಾಮವರ್ಧಿನಿ ಛಾಪು ತಾಳ

ಹಣ್ಣು ಬಂದಿದೆ ಜನರು ಹಣ್ಣು ಕೊಳ್ಳಿರೊ ||ಪ||
ಹಣ್ಣು ಎಂಬೊ ಹರಿನಾಮ ಎಂಬೊ ಶ್ರುತಿಯ ನಿಂಬೆಯ ||ಅ||

ಮನದ ಭೂಮಿಯಲಿ ಪುಟ್ಟಿ ಮತಿಗಳಿಂದ ಪಲ್ಲವಿಸಿ
ತಮಗೆ ತಮಗೆ ತಿಳಿದ ಹೊತ್ತು ಭಕುತಿಯಿಂದಲಿ
ಒಲಿದು ಗೊಂಚಲಾದ ಹಣ್ಣು ಜ್ಞಾನವೆಂಬೊ ಪಂಜರದ
ತಿಳಿದು ನಾಲಿಗೆಯೆ ಮೇಲೆ ಬಂದು ಕುಳಿತ ಬಾಳೆಯ ||

ಒಂದು ವರುಷ ಒಂದು ಫಲವು ಬಿತ್ತಿ ಬಂದ ಮಹಾ ರಾಮ-
ಚಂದ್ರನೆಂಬೊ ಕಲ್ಪವೃಕ್ಷ ಕದಳಿ ಸಂತತಿ
ಕುಂದದಿಹುದು ಸಕಲಫಲವು ಅಲ್ಲಿ ಗೊನೆಗೂಡಿ ಗೋ-
ವಿಂದ ರಾಮ ವಾಸುದೇವನೆಂಬೊ ಹಲಸಿನ ||

ಹರಿಯ ನಾಮವನ್ನು ನಿತ್ಯ ಸ್ಮರಿಸಬಲ್ಲ ವಿಪ್ರರಿಗೆ
ಸುರರು ಮುನಿಗಳೆಲ್ಲ ಬಾಗುವರಲ್ಲಯ್ಯ
ಗಿರಿಯ ಮೇಲಿಪ್ಪ ಅಲಮೇಲುಮಂಗ ಅರಸನಾದ
ಪುರಂದರವಿಠಲನೆಂಬೊ ಜಂಬುನೇರಳೆ ||
***

pallavi

haNNu bandide janaru haNNu koLLiro

anupallavi

haNNu embo harinAma embo shrutiya nimbeya

caraNam 1

manada bhUmiyali puTTi matigaLinda ballavisi tamage tamage tiLida hottu bhakutiyindali
olidu gonjalAda haNNu jnAnavembo panjarada tiLidu nAlikeye mEle bandu kuLita bALeya

caraNam 2

ondu varuSa ondu balavu bitti banda rAma candranembo kalpavrkSa kadaLi santati
kundadihudu sakala balava alli gone gUDi gOvinda rAma vAsudEvanembo halasina

caraNam 3

hariya nAmavannu nitya smarisa balla vipraige suraru munigaLella bAguvarellayya
giriya mElippa alamElumanga arasanAda purandara viTTalanembo jambunEraLe
***

No comments:

Post a Comment