Wednesday 4 December 2019

ಗೋಕುಲದೊಳಗಿರಲಾರೆವಮ್ಮ ಗೋಪಮ್ಮ ಕೇಳೆ purandara vittala GOKULADOLAGIRALAAREVAMMA GOPAMMA KELE

 ರಾಗ ಹಿಂದೋಳ   ಏಕತಾಳ 

Audio by Mrs. Nandini Sripad


ಶ್ರೀ ಪುರಂದರದಾಸರ ಕೃತಿ 

ಗೋಕುಲದೊಳಗಿರಲಾರೆವಮ್ಮ । ಗೋಪ್ಯಮ್ಮ ಕೇಳೆ ।
ಸಾಕು ಸಾಕು ನಮಗೇಕೀ ವ್ರಜವು । ಆ ಕೃಷ್ಣನ ಕಾಟದಿ ॥ ಪ ॥

ಪಾಲು ಮೊಸರು ಕದ್ದರೆ ಕದಿಲಿ । ಗೋಪ್ಯಮ್ಮ ಕೇಳೆ ।
ಮೇಲಿಟ್ಟ ಬೆಣ್ಣೆ ಮೆದ್ದರೆ ಮೆಲಲಿ । ಗೋಪ್ಯಮ್ಮ ಕೇಳೆ ।
ಈರೇಳು ಭುವನದೊಳೋಲಾಡುತ್ತಿರಲಿ ॥
ಆಲಯವನು ಪೊಕ್ಕು ಭಾಳ ಸಂಭ್ರಮದಿ ।
ಬಾಲೆಯರೆಲ್ಲರ ಬೆತ್ತಲೆ ಮಾಡಿಸಿ ।
ಶ್ಯಾಲೆಗಳೆಲ್ಲವ ಮೇಲಕೆ ಹಾರಿಸಿ ।
ಆಲಿಂಗಿಸಿಕೊಂಡು ಬರುತಾನಮ್ಮ ॥ 1 ॥

ಮನೆಗೆ ತಾನಾಗಿ ಬಂದರೆ ಬರಲಿ । ಬಾಹೋ ವೇಳೆಯಲಿ ।
ಗೆಣೆಯರ ಕೂಡಿಕೊಂಡು ಇರಲಿ । ಕರೆತಂದರೆ ತರಲಿ ।
ಅನುಬಂಧನಾಗಿ ಇದ್ದರೆ ಇರಲಿ ॥
ಅನುವು ನೋಡಿಕೊಂಡಾ ವೇಳೆಯಲಿ ।
ಉಣಬಿಟ್ಟುಣಿಸಿ ಆಕಳ ಕರುಗಳ ।
ಮನೆಯವರೆಲ್ಲರ ತಾನೇ ಎಬ್ಬಿಸಿ ।
ಮನೆಯೆಲ್ಲ ಸೂರಾಡಿದನಮ್ಮ ॥ 2 ॥

ಬಾರಿ ಬಾರಿಗೆ ಒಲಿದ ಕಳ್ಳ । ಯಶೋದೆ ಕೇಳೆ ।
ಊರ ಹೆಂಗಳರ ಕೂಡಿದ ಗೊಲ್ಲ । ಗೋಪ್ಯಮ್ಮ ಕೇಳೆ ।
ಯಾರ ಮುಂದ್ಹೇಳುವುದು ಈ ಸೊಲ್ಲ ॥ 
ವಾರಿಗೆಯ ಸಂಸಾರ ಮಾಡುವನು ।
ನಾರಿಯರೆಲ್ಲರ ನಂಬಿಸಿ ಕೆಡಿಪ ವಿ - ।
ಕಾರ ಮಾಡದ ಹಾಗೆ ನೀ ಕರೆಸಿ ।
 ಪುರಂದರವಿಠಲಗೆ ಬುದ್ಧಿ ಹೇಳಮ್ಮ ॥ 3 ॥
***

pallavi

gOkuladoLagiralArevamma gOpyamma kELe

anupallavi

sAku sAku namagEkI prajavu A krSNana kATadi

caraNam 1

hAlu mosaru kaddare kadili gOpyamma kELe mEliTTa beNNe meddare mElali
gOpyamma kELIrELu bhuvanadoLOlADuttirali Alayavanu pokku bALa sambhramadi
bAleyarellara battale mADisi shAlegaLellava mElake hArasi Alingisi koNDu barutAnamma

caraNam 2

manege tAnAgi bandare barali bAho vELeyali keLeyara kUDikoNDu irali
karedandare tarali anubandhanAgi iddare irali anuvu nODikoNDA vELeyali uNabiTTuNisi
AkaLa karugaLa maneyavarellara tAnE ebbisi maneyalla sUrADidanamma

caraNam 3

bAri bArige olidakaLLa yashOde kELE Ura hengaLara kUDina golla gOpyamma
kELE yAra mundhELuvudu I solla vArigeya samsAra mADuvanu nAriyarellara nambisi
keDipa vikAra mADada hAge nI karesi purandara viTTalage buddhiya hELamma
***


ಪುರಂದರದಾಸರು
ರಾಗ ಆನಂದಭೈರವಿ ಅಟ ತಾಳ

ಗೋಕುಲದೊಳಗಿರಲಾರೆವಮ್ಮ ಗೋಪ್ಯಮ್ಮ ಕೇಳೆ
ಸಾಕು ಸಾಕು ನಮಗೇಕೀ ವ್ರಜವು ಆ ಕೃಷ್ಣನ ಕಾಟದಿ ||ಪ ||

ಹಾಲು ಮೊಸರು ಕದ್ದರೆ ಕದಿಲಿ ಗೋಪ್ಯಮ್ಮ ಕೇಳೆ
ಮೇಲಿಟ್ಟ ಬೆಣ್ಣೆ ಮೆದ್ದರೆ ಮೆಲಲಿ ಗೋಪ್ಯಮ್ಮ ಕೇಳೀ-
ರೇಳು ಭುವನದೊಳೋಲಾಡುತ್ತಿರಲಿ
ಆಲಯವನು ಪೊಕ್ಕು ಬಾಳ ಸಂಭ್ರಮದಿ
ಬಾಲೆಯರೆಲ್ಲರ ಬತ್ತಲೆ ಮಾಡಿಸಿ ಶಾಲೆಗಳೆಲ್ಲವ
ಮೇಲಕೆ ಹಾರಿಸಿ ಆಲಿಂಗಿಸಿಕೊಂಡು ಬರುತಾನಮ್ಮ ||

ಮನೆಗೆ ತಾನಾಗಿ ಬಂದರೆ ಬರಲಿ ಬಾಹೋ ವೇಳೆಯಲಿ
ಗೆಳೆಯರ ಕೂಡಿಕೊಂಡು ಇರಲಿ ಕರೆತಂದರೆ ತರಲಿ
ಅನುಬಂಧನಾಗಿ ಇದ್ದರೆ ಇರಲಿ
ಅನುವು ನೋಡಿಕೊಂಡಾ ವೇಳೆಯಲಿ
ಉಣಬಿಟ್ಟುಣಿಸಿ ಆಕಳ ಕರುಗಳ
ಮನೆಯವರೆಲ್ಲರ ತಾನೇ ಎಬ್ಬಿಸಿ ಮನೆಯಲ್ಲ ಸೂರಾಡಿದನಮ್ಮ ||

ಬಾರಿ ಬಾರಿಗೆ ಒಲಿದಕಳ್ಳ ಯಶೋದೆ ಕೇಳೇ
ಊರ ಹೆಂಗಳರ ಕೂಡಿನ ಗೊಲ್ಲ ಗೋಪ್ಯಮ್ಮ ಕೇಳೇ
ಯಾರ ಮುಂದ್ಹೇಳುವುದು ಈ ಸೊಲ್ಲ
ವಾರಿಗೆಯ ಸಂಸಾರ ಮಾಡುವನು
ನಾರಿಯರೆಲ್ಲರ ನಂಬಿಸಿ ಕೆಡಿಪ ವಿ-
ಕಾರ ಮಾಡದ ಹಾಗೆ ನೀ ಕರೆಸಿ ಪುರಂದರವಿಠಲಗೆ ಬುದ್ಧಿಯ ಹೇಳಮ್ಮ ||
*********


ಗೋಕುಲದೊಳಗಿರಲಾರೆವಮ್ಮಗೋಪಮ್ಮ ಕೇಳೆ |ಗೋಕುಲದೊಳಗಿರಲಾರೆವಮ್ಮ ಪ

ಸಾಕು ಸಾಕು ನಮಗೇಕೆ ರಚ್ಚೆಗಳು |ಆ ಕೃಷ್ಣನಪರಿನೀ ಕೇಳಮ್ಮಅ.ಪ

ಹಾಲು-ಮೊಸರು ಕದ್ದರೆ ಕಳಲಿ-ಗೋಪಮ್ಮ ಕೇಳೆ |ಮೇಲಿಟ್ಟ ಬೆಣ್ಣೆ ಮೆದ್ದರೆ ಮೆಲಲಿ-ಗೋಪಮ್ಮ ಕೇಳೀ ||ರೇಳು ಭುವನದೊಳಾಡುತಲಿರಲಿ |ಆಲದೆಲೆಯ ನಮ್ಮಾಲಯವನೆ ಪೊಕ್ಕು-|ಬಾಲೆಯರೆಲ್ಲರ ಬತ್ತಲೆ ಮಾಡಿ ||ಶಾಲೆಗಳೆಲ್ಲ ಮೇಲಕೆ ಹಾರಿಸಿ |ಆಲಂಗಿಸಿಕೊಂಡು ಬರುವನಮ್ಮ 1

ತಾನಾಗಿ ಮನೆಗೆ ಬಂದರೆ ಬರಲಿ-ಬಾಹೊ ವೇಳೆಯಲಿ |ಅಣುಗರ ಕೂಡಿಕೊಂಡು ಬರಲಿ-ಕರೆತಂದರೆ ತರಲಿ |ಅನುಬಂಧನಾಗಿ ಇದ್ದರೆ ಇರಲಿ ||ಅನುವು ಕಂಡುಕೊಂಡಾವೇಳೆಯಲಿ |ಉಣಬಿಟ್ಟಾಕಳ ಕರುಗಳನುಣಿಸಿ ||ಮನೆಯವರೆಲ್ಲರನೆಬ್ಬಿಸಿ ತಾನೇ |ಮನೆಯೆಲ್ಲವ ಸೂರಾಡಿದನಮ್ಮ 2

ಬಾರಿಬಾರಿಗೆ ಮುನಿದ ಕಳ್ಳ-ಪತಿಯಂತೆ ತಾನು |ನೂರಾರು ಹೆಣ್ಣ ಕೂಡಿದನಲ್ಲ-ಗೋಪಮ್ಮ ಕೇಳೆ |ಯಾರ ಮುಂದೆ ಹೇಳಲಿ ಸೊಲ್ಲ? ||ಓರಗೆಯಲಿ ಸಂಸಾರ ಮಾಡುವ |ನಾರಿಯರೆಲ್ಲರ ರಂಬಿಸಿಕರೆದು ವಿ-|ಕಾರ ಮಾಡದಂತೆ ಪುರಂದರವಿಠಲಗೆ |ಸಾರಿಸಾರಿ ನೀ ಬುದ್ಧಿ ಹೇಳಮ್ಮ 3
******

No comments:

Post a Comment