Wednesday 4 December 2019

ಎಂದಪ್ಪಿಕೊಂಬೆ ರಂಗಯ್ಯನ ಎಂದಪ್ಪಿಕೊಂಬೆ purandara vittala ENDAPPIKOMBE RANGAYYANA ENDAPPIKOMBE



ರಾಗ ಭೈರವಿ. ಚಾಪು ತಾಳ

ಎಂದಪ್ಪಿಕೊಂಬೆ ರಂಗಯ್ಯನ, ಎಂದಪ್ಪಿಕೊಂಬೆ ||ಪ||
ಎಂದಪ್ಪಿಕೊಂಬೆ ನಾನೆಂದು ಮುದ್ದಾಡುವೆ
ಎಂದಿಗೆ ಸವಿ ಮಾತನಾಡಿ ನಾ ತಣಿವೆ ||ಅ||

ಅಂದುಗೆ ಪಾಡಗ ಗೆಜ್ಜೆ ಘಲು ಘಲುರೆಂದು
ಚೆಂದಾಗಿ ಕುಣಿವ ಮುಕುಂದನ ಚರಣವ ||

ಹೊನ್ನುಂಗುರುಡಿದಾರ ಹೊಳೆವ ಪೀತಾಂಬರ
ಚೆನ್ನಾಗಿ ನಡುವಿಲಿಟ್ಟ ಜಾಹ್ನವಿಜನಕನ ||

ಅರಳಲೆ ಮಾಗಾಯಿ ಕೊರಳ ಮುತ್ತಿನ ಹಾರ
ತರಳರ ಒಡಗೂಡಿ ಮುರಲಿಯ ಲೋಲನ ||

ಅಪ್ಪಣ್ಣ ಭಾಗವತನ ರೂಪವು ತಾನಾಗಿ
ತುಪ್ಪದ ಬಿಂದಿಗೆ ತಂದ ಸರ್ಪಶಯನನ ||

ಧರೆಯೊಳು ಸುಜನರ ಪೊರೆಯುತ್ತರಿಲುವನ
ಪುರಂದರವಿಠಲನ ಚರಣ ಕಮಲವ ||
***


pallavi

endappi kombe rangayyana endappi kombe

anupallavi

endappi kombe nAnendu muddADuve endige savi mAtanADi nA taNive

caraNam 1

anduge pADaga gejje ghalu ghalurendu cendAgi kuNiva mukundana caraNava

caraNam 2

honnenguruDidAra hoLeva pItAmbara cennAgi naDuviliTTa jAnhavi janakana

caraNam 3

araLale mAgAyi koraLa muttina hAra taraLara oDagUDi muraliya lOlana

caraNam 4

appaNNa bhAgavatana rUpavu tAnAgi tuppada bindige tanda sarpa shayana

caraNam 5

dhareyoLu sujanara poreyuttariluvana purandara viTTalana caraNa kamalavanu
***

ಪುರಂದರದಾಸರು
ಎಂದಪ್ಪಿಕೊಂಬೆ - ರಂಗಯ್ಯ ನಿನ್ನ |ಎಂದಪ್ಪಿಕೊಂಬೆ ಪ

ಎಂದಪ್ಪಿಕೊಂಬೆ ನಾನೆಂದು ಮುದ್ದಾಡುವೆ |ಎಂದಿಗೆ ಸವಿಮಾತನಾಡಿ ನಾ ದಣಿವೆನೊ ಅ.ಪ

ಅರಳೆಲೆಮಾಗಾಯಿ ಕೊರಳ ಪದಕ ಸರ |ತರಳರನೊಡಗೂಡಿ ಬೆಣ್ಣೆಯ ಮೆಲುವನ............... 1

ಅಂದುಗೆಪಾಯ್ವಟ್ಟು ಗೆಜ್ಜೆ ಘಿಲುಘಿಲು ಕೆನೆ |ಚೆಂದದಿ ಕುಣಿವ ಮುಕುಂದನ ಚರಣವ................ 2

ಹೊನ್ನಿನ ಉಡುದಾರ ರನ್ನದ ಚೌಕುಳಿ |ಚಿನ್ನದುಂಗುರವಿಟ್ಟಜಾಹ್ನವಿಜನಕನ.......................3

ಅಪ್ಪಣ್ಣ ಭಾಗವತನ ರೂಪವು ತಾನಾಗಿ |ತುಪ್ಪದ ಬಿಂದಿಗೆ ತಂದ ವಿಠಲನ...................... 4

ಪರಿಪರಿ ಭಕುತರ ಮರೆಯದೆ ಸಲಹುವ |ಪುರಂದರವಿಠಲನ ಸಿರಿಪಾದ ಪದುಮನ 5

*******

No comments:

Post a Comment