Wednesday, 4 December 2019

ಎಚ್ಚರದಲಿ ನಡೆ ಮನವೆ purandara vittala ECHCHARADALI NADE MANAVE


ಪುರಂದರದಾಸರು
ರಾಗ ಆನಂದಭೈರವಿ. ಅಟ ತಾಳ

ಎಚ್ಚರದಲಿ ನಡೆ ಮನವೆ ನಡೆ ಮನವೆ ||ಪ||
ಮುದ್ದು ಅಚ್ಯುತನ ದಾಸರ ಒಡನಾಡು ಮನವೆ ||ಅ||

ಅನ್ನ ದಾನವ ಮಾಡುವುದಿಲ್ಲಿ, ಮೃ-
ಷ್ಟಾನ್ನವ ತಂದು ಮುಂದಿಡುವರು ಅಲ್ಲಿ
ಅನ್ಯಾಯ ನುಡಿವುದು ಇಲ್ಲಿ, ನಿನ್ನ
ಬೆನ್ನ ಚರ್ಮವ ಸೀಳಿ ತಿನಿಸುವರಲ್ಲಿ ||

ಆಲಯ ಧರ್ಮವು ಇಲ್ಲಿ, ವಿ-
ಶಾಲ ವೈಕುಂಠದೊಳಿಡುವರು ಅಲ್ಲಿ
ಆಲಯ ಮುರಿಯುವುದಿಲ್ಲಿ, ನಿನ್ನ
ಶೂಲದ ಮರವನೇರಿಸಿ ಕೊಲ್ಲುವರಲ್ಲಿ ||

ಚಾಡಿಯ ನುದಿಯುವುದಿಲ್ಲಿ, ನೀ-
ನಾಡಿದ ನಾಲಿಗೆ ಸೀಳುವರಲ್ಲಿ
ಬೇಡಬಂದರೆ ಬೈಯುವುದಿಲ್ಲಿ ನಿ-
ನ್ನೋಡಾಟ ಕಾಲ ಕತ್ತರಿಸುವರಲ್ಲಿ ||

ಯಾಚಕರನು ಬೈಯುವುದಿಲ್ಲಿ, ನಿನ್ನ
ನಾಚಿಗೆ ತೆಗೆದು ನಾಲಿಗೆ ಸೀಳುವರಲ್ಲಿ
ಯಾಚಕರ ಪೂಜೆ ಇಲ್ಲಿ, ನಿನಗೆ
ಸ್ವೋಚಿತ ಮಾರ್ಗವನೀಯುವರಲ್ಲಿ ||

ತಂದೆ ತಾಯಿಗಳ ಬಯ್ಯುವುದಿಲ್ಲಿ, ಹಲ್ಲು (ಹುಲ್ಲು?)
ಝಂಡೆಯ ಕಟ್ಟಿ ಸುಡಿಸುವರಲ್ಲಿ
ತಂದೆ ತಾಯ್ಗಳ ಪೂಜೆ ಇಲ್ಲಿ, ದೇ-
ವೇಂದ್ರನ ಸಭೆಯ ತೋರುವರು ಮುಂದಲ್ಲಿ ||

ಅತ್ತೆ ಮಾವನ ಬಯ್ಯುವುದಲ್ಲಿ, ನಿನ್ನ
ಕತ್ತು ಕರಗಸದಲ್ಲಿ ಕೊಯ್ಯುವರಲ್ಲಿ
ಅತ್ತೆ ಮಾವನ ಪೂಜೆ ಇಲ್ಲಿ, ಅವಳ
ಉತ್ತಮ ಪತಿವ್ರತೆಯೆಂಬುವರಲ್ಲಿ ||

ಧರ್ಮವ ಮಾಡುವುದಿಲ್ಲಿ, ನಿನಗೆ ಸು-
ಧರ್ಮ ಸಭೆಯ ತೋರುವರು ಮುಂದಲ್ಲಿ
ಕರ್ಮಮೋಚನೆಗಳು ಇಲ್ಲಿ, ನಿನಗೆ
ನಿರ್ಮಿಸಿಹನು ಕ್ರಿಮಿ ತಿನ್ನುವುದಲ್ಲಿ ||

ವಂಚನೆ ಮಾಡುವುದಿಲ್ಲಿ, ಕಾದ
ಹಂಚಿನ ಪುಡಿಯನು ತಿನಿಸುವರಲ್ಲಿ
ಪಂಚಾಮೃತವ ನೀಡುವುದಿಲ್ಲಿ, ನಿನಗೆ
ಕಂಚುಕಾಳಂದಿಯ ಪಿಡಿದಿಹರಿಲ್ಲಿ ||

ಗಂಡನ ಭಕ್ತಿಯು ಇಲ್ಲಿ, ನಮ್ಮ
ಪುಂಡರೀಕಾಕ್ಷನು ಒಲಿಯುವನಲ್ಲಿ
ಗಂಡನ ನಿಂದಿಪುದಿಲ್ಲಿ, ನಿನ್ನ
ಖಂಡ ಖಂಡವ ಕತ್ತರಿಸುವರಲ್ಲಿ ||

ಮದ್ದಿಟ್ಟು ಕೊಲ್ಲುವುದಿಲ್ಲಿ, ಒ-
ದ್ದೊದ್ದು ಹದ್ದು ಕಾಗೆಗ್ಹಾಕುವರಲ್ಲಿ
ಕ್ಷುದ್ರ ಬುದ್ದಿಯ ಮಾಡುವುದಿಲ್ಲಿ, ದೊಡ್ಡ
ಗುದ್ದಲಿ ಕಾಸಿ ಬೆನ್ನೊಳು ಎಳೆವರಲ್ಲಿ ||

ಹೆಣ್ಣು ಹೊನ್ನನು ಬಯಸುವುದಿಲ್ಲಿ, ನಿನ್ನ
ಕಣ್ಣಿಗೆ ಸುಣ್ಣವ ತುಂಬುವರಲ್ಲಿ
ಕನ್ಯಾ ದಾನವ ಮಾಡುವುದಿಲ್ಲಿ, ನಮ್ಮ
ಪುರಂದರವಿಠಲ ಒಲಿಯುವನಲ್ಲಿ ||
***

pallavi

eccaradali naDe manave naDe manave

anupallavi

muddu acyutana dAsara oDanADu manave

caraNam 1

anna dAnava mDuvidilla mrSTannava tandu mundiDuvaru alli
anyaru nuDivudu illi ninna benna carmava sILi tinisuvaralli

caraNam 2

Alaya dharmavu illi vishAla vaikuNThadoLiDuvaru alli
Alaya muriyuvudilli ninna shUlada maravanErisi kolluvaralli

caraNam 3

cADiya nudiyuvudilli nI nuDida nAlige sILuvaralli
bEDa bandare baiyuvudilli ninnanODa kAla kattarisuvaralli

caraNam 4

yAcakaranu baiyuvudilli ninna nAcige tegedu nAlige sILuvaralli
yAcakara pUje illi ninage sOcita mArgavanIyuvaralli

caraNam 5

tande tAyigaLa bayyuvudilli hallu jhaNDeya kaTTi sUDisuvaralli
tande tAigaLa pUje illi dEvEndrana sabheya tOruvaru mundalli

caraNam 6

atte mAvana bayyuvudalli ninna kattu karagasadalli koyyuvaralli
atte mAvana pUje illi avaLa uttama pativrateyembuvaralli

caraNam 7

dharmava mADuvudilli ninage sudharma sabheya tOruvaru mundalli
karma mOcanegaLu illi ninage nirmisihanu krimi tinnuvudalli

caraNam 8

vancane mADuvudilli kAda hancina puDiyanu tinisuvaralli
pancAmrtavana nIDuvudilli ninage kancukALandiya piDidiharilli

caraNam 9

gaNDana bhaktiyu illi namma puNDarIkAkSanu oliyuvanalli
gaNDana nindipudilli ninna khaNDa khaNDva kattarisuvaralli

caraNam 10

mattiTTu kolluvudilli oddoddu haddu kAgeg-hAkuvaralli
kSEtra buddiya mADuvudilli doDDa guddali kAsi bennoLu eLevaralli

caraNam 11

heNNu honnanu bayasuvudilli ninna kaNNige suNNava tumbuvaralli
kanyA dAnava mADuvudilli namma purandara viTTala oliyuvanalli
***

ಎಚ್ಚರದಲಿ ನಡೆ ಮನವೆ - ನಡೆಮನವೆ - 
ಮುದ್ದುಅಚ್ಯುತನ ದಾಸರ ಒಡಗೂಡಿ ಬರುವೆ ಪ.

ಧರ್ಮವ ಮಾಡುವುದಿಲ್ಲಿ - ಇನ್ನುಬ್ರಹ್ಮನ ಸಭೆಯ ತೋರುವರು ಮುಂದಲ್ಲಿಕರ್ಮಯೋಜನೆಗಳು ಇಲ್ಲಿ - ಬೆನ್ನಚರ್ಮವ ಸುಲಿಸಿ ತಿನ್ನಿಸುವರು ಅಲ್ಲಿ 1

ಅನ್ನದಾನವ ಮಾಳ್ಪುದಿಲ್ಲಿ - ಮೃಷ್ಟಾನ್ನವ ತಂದು ಮುಂದಿಡುವರು ಅಲ್ಲಿಅನ್ಯಾಯ ನುಡಿಯುವುದಿಲ್ಲಿ - ಭಿನ್ನಭಿನ್ನವ ಮಾಡಿ ತಿನ್ನಿಸುವರು ಅಲ್ಲಿ 2

ಮೋಸವ ಮಾಡುವದಿಲ್ಲಿ - ಸೀಸಕಾಸಿ ಬಾಯೊಳಗೆ ಹೊಯ್ಯುವರಲ್ಲಿದಾಸರ ಪೂಜಿಪುದಿಲ್ಲಿ - ಉರ್ವೀಶಾಧಿಪತಿ ಬಂದನೆಂಬರು ಅಲ್ಲಿ 3

ವಂಚನೆ ಮಾಡುವದಿಲ್ಲಿ - ಕಾದಹಂಚಿನ ಪುಡಿಯ ತಿನ್ನಿಸುವರು ಅಲ್ಲಿಪಂಚಾಮೃತದ ಪೂಜೆ ಇಲ್ಲಿ ನಿನಗೆಕಂಚು - ಕಾಳಾಂಜಿಯ ಪಿಡಿದಿಹರಲ್ಲಿ 4

ಚಾಡಿಯ ನುಕಿವುದು ಇಲ್ಲಿ ಅದ -ನಾಡಿದ ನಾಲಗೆ ಸೀಳುವರಲ್ಲಿಬೇಡಬಂದರೆ ಬಯ್ವುದಿಲ್ಲಿ ನಿನ್ನ -ಓಡಾಡುವ ಕಾಲು ಕತ್ತರಿಪರಲ್ಲಿ 5

ಮದ್ದಿಕ್ಕಿ ಕೊಲ್ಲುವುದಿಲ್ಲಿ ಒದ್ದು -ಹದ್ದು ಕಾಗೆಗಳಿಗೆ ಈಯುವರಲ್ಲಿಕ್ಷುದ್ರ ಬುದ್ಧಿಯ ನಡೆಪುದಿಲ್ಲಿ ದೊಡ್ಡ -ಗುದ್ದಲಿ ಬೆನ್ನೊಳು ಎಳೆಯುವರಲ್ಲಿ 6

ಕೊಟ್ಟಭಾಷೆಗೆ ತಪ್ಪುವುದಿಲ್ಲಿ ಕೈಯ -ಕಟ್ಟಿ ಈಟಿಯಿಂದ ಇರಿಯುವರಲ್ಲಿಕೊಟ್ಟ ಧರ್ಮವ ನಡೆಸುವುದಿಲ್ಲಿ ಬಲುಶ್ರೇಷ್ಠ ನೀನೆಂದು ಕೊಂಡಾಡುವರಲ್ಲಿ 7

ಆಲಯದಾನವು ಇಲ್ಲಿ ವಿ -ಶಾಲ ವೈಕುಂಠನ ಮಂದಿರವಲ್ಲಿಆಲಯ ಮುರಿಯುವುದಿಲ್ಲಿ ನಿನ್ನ -ಶೂಲದ ಮೇಲೇರಿಸಿ ಕೊಲುವರಲ್ಲಿ 8

ತಂದೆ ಮಾತನು ಮೀರುವುದಿಲ್ಲಿ ಹುಲ್ಲು -ದೊಂದೆಯಕಟ್ಟಿ ಸುಡಿಸುವರಲ್ಲಿತಂದೆ ತಾಯ್ಗಳ ಪೂಜೆ ಇಲ್ಲಿ ದೇ -ವೇಂದ್ರನ ಸಭೆಯ ತೋರುವರು ಮುಂದಲ್ಲಿ 9

ಗಂಡನ ಬೈಯ್ಯುವುದಿಲ್ಲಿ ಬೆಂಕೆಕೆಂಡವ ತಂದು ಬಾಯಲಿ ತುಂಬುವರಲ್ಲಿಕೊಂಡೆಯ ನಡಿಸುವುದಿಲ್ಲಿ ಬೆಂಕೆಕುಂಡವ ತಂದು ತಲೆಯಲಿಡುವರಲ್ಲಿ 10

ಹೊನ್ನು ಹೆಣ್ಣನು ಬಯಸುವುದಿಲ್ಲಿ ನಿನ್ನಕಣ್ಣಿಗೆ ಸುಣ್ಣವ ತುಂಬುವರಲ್ಲಿಕನ್ಯಾದಾನವ ಮಾಳ್ಪುದಿಲ್ಲಿ ನಮ್ಮಚಿನ್ನಪುರಂದರವಿಠಲನೊಲಿವನು ಅಲ್ಲಿ11
*******

No comments:

Post a Comment