Thursday 16 December 2021

ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಾಂಗೆ ಕೃಷ್ಣ purandara vittala DRUSHTI NINNA PAADADALLI NEDO HAANGE





ದೃಷ್ಟಿ ನಿನ್ನ ಪಾದದಲ್ಲಿ ನೆಡೊ ಹಾಗೆ , ಧರೆ
ದುಷ್ಟಜನಸಂಗಗಳ ಬಿಡೋ ಹಾಗೆ
ಕೆಟ್ಟ ಮಾತು ಕಿವಿಯಿಂದ ಕೇಳದ ಹಾಗೆ ,ಮನ
ಕಟ್ಟಿ ಸದಾ ನಿನ್ನ ಧ್ಯಾನ ಬಿಡದ ಹಾಗೆ ||ಪ||

ದಿಟ್ಟನಾಗಿ ಕೈಯನೆತ್ತಿ ಕೊಡೊ ಹಾಗೆ , ಶ್ರೀ
ಕೃಷ್ಣ ನಿನ್ನ ಪೂಜೆಯನು ಮಾಡೋ ಹಾಗೆ
ಭ್ರಷ್ಟನಾಗಿ ನಾಲ್ವರೊಳು ತಿರುಗದ ಹಾಗೆ ,ಬಲು
ಶಿಷ್ಟ ಜನ ಸೇವೆಯನು ಮಾಡೋ ಹಾಗೆ ||

ಪುಟ್ಟಿಸಿದ ತಾಯಿ ತಂದೇಯಲ್ಲೊ ನೀನು , ಒಂದು
ಹೊಟ್ಟೆಗಾಗಿ ದೈನ್ಯಪಡಬೇಕೆ ನಾನು
ಪಟ್ಟೆ ಪಟ್ಟಾವಳಿ ಬೇಡಲಿಲ್ಲ ನಾನು , ಎನ್ನ
ಗುಟ್ಟು ಅಭಿಮಾನಗಳ ಕಾಯೊ ನೀನು ||

ನಟ್ಟ ನೀರೊಳಗೆ ಈಸಲಾರೆ ನಾನು, ಎತ್ತಿ
ಕಟ್ಟೆ ಸೇರಿಸ ಬೇಕಯ್ಯಾ ನೀನು
ಬೆಟ್ಟದಂಥ ಪಾಪ ಹೊತ್ತಿರುವೆ ನಾನು, ಅದ
ಸುಟ್ಟು ಬಿಡು ಪುರಂದರವಿಠಲ ನೀನು ||
****

ರಾಗ ಶಂಕರಾಭರಣ. ಆದಿ ತಾಳ (raga, taala may differ in audio)

pallavi

drSTi ninna pAdadalli nODo hAge dhare duSTa jana sangagaLa biDO hAge

caraNam 1

keTTa mAtu kiviyinda kELadhAge mana kaTTi sadA ninna dhyAna biDada hAge

caraNam 2

diTTanAgi kaiyanetti koDo hAge shrI krSNa ninna pUjeyanu mADO hAge
bhraSTanAgi nAlvaroLu tirugadhAge balu shiSTa jana sEveyanu mADO hAge

caraNam 3

puTTisida tAyi tandEyallo nInu ondu hoTTrgAgi dainyapaDa bEke nAnu
paTTe paTTAvaLi bEDalilla nAnu enna guTTu abhimAnagaLa kAyo nInu

caraNam 4

naTTa nIroLage IsalarO nAnu etti kaTTe sErisa bEkayyA nInu
beTTadantha pApa hottiruve nAnu ada suTTu biDu purandara viTTala nInu
***

ನಿರ್ಮಥ್ಯೋಗ್ರ ಭವಾರ್ಣವೇ ನಿಜಮನೋಭೀಷ್ಟಂ ದಿಶಾಮೀತಿ ಯಹ:, ಸಮ್ಯಜ್ಞಾಪಯಿತುಂ ಕರೇಣ ವಿಲಸಂಮಂಥಾನಂ ಅನ್ಯೇನಚ | ರಮ್ಯಂ ದಾಮ ದಧಂ ಮಹೇಶ ರಜತಗ್ರಾಮಶ್ರೀಯೋಲಂಕೃತಿ:, ಕರ್ಮಂದೀಶ್ವರ ಭಕ್ತಿ ಬಂಧನ ವಶ:, ಪ್ರೀತೋಸ್ತು ಕೃಷ್ಣ ಪ್ರಭು:,ಪ್ರೀತೋಸ್ತು ಕೃಷ್ಣ ಪ್ರಭು: ||

ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಾಂಗೆ ಕೃಷ್ಣ
ದುಷ್ಟಜನ ಸಂಗವನ್ನು ಬಿಡೋ ಹಾಂಗೆ || ಪ ||

ಕೆಟ್ಟ ಮಾತು ಕಿವಿಗೆ ಕೇಳಿಸದ್ಹಾಂಗೆ
ಮನ ಕಟ್ಟಿಸಯ್ಯಾ ನಿನ್ನ ಪಾದ ಬಿಡದ್ಹಾಂಗೆ || ಅ.ಪ. ||

ದಿಟ್ಟನಾಗಿ ಕೈಯನ್ನೆತ್ತಿ ಕೊಡೋ ಹಾಂಗೆ
ಕೃಷ್ಣ ನಿನ್ನ ಪೂಜೆಯನ್ನು ನಾ ಮಾಡೋ ಹಾಂಗೆ
ಭ್ರಷ್ಟನಾಗಿ ನಾಲ್ವರೊಳು ತಿರುಗದ್ಹಾಂಗೆ
ಶಿಷ್ಟಜನ ಸೇವೆಯನ್ನು ಮಾಡೋ ಹಾಂಗೆ || 1 ||

ಹುಟ್ಟಿಸಿದ ತಾಯಿ ತಂದೆಯಲ್ಲೋ ನೀನು
ಹೊಟ್ಟೆಗಾಗಿ ದೈನ್ಯ ಪಡಲಾರೆ ನಾನು
ಪಟ್ಟೆ ಪಟ್ಟಾವಳಿ ಬೇಡಲಿಲ್ಲ ನಾನು
ಗುಟ್ಟು ಅಭಿಮಾನಗಳ ಕಾಯೋ ನೀನು || 2 ||

ನಟ್ಟ ನಡು ನೀರೊಳಗೆ ಈಸಲಾರೆ ನಾನು
ಕಟ್ಟೆ ಸೇರಿಸಬೇಕಯ್ಯಾ ನೀನು
ಬೆಟ್ಟದಂಥ ಪಾಪಗಳ ಹೊತ್ತಿರುವೆ ನಾನು
ಸುಟ್ಟುಬಿಡು ಪುರಂದರ ವಿಠ್ಠಲ ನೀನು || 3 ||
********

No comments:

Post a Comment