ಆವನಾವನು ಕಾಯ್ದ ಅವನಿಯೊಳಗೆ
ದೇವ ದೇವೇಶ ಶ್ರೀ ಹರಿಯಲ್ಲದೆ ||ಪ||
ಆವ ತಂದೆಯು ಸಲಹಿದನು ಪ್ರಹ್ಲಾದನ
ಆವ ತಾಯಿ ಕಾಯ್ದೆಳು ಧ್ರುವರಾಯನ
ಆವ ಮಗ ಸಲಹಿದನು ಆ ಉಗ್ರ ಸೇನನ
ಜೀವಂಗೆ ಪೋಷಕನು ಶ್ರೀ ಹರಿಯಲ್ಲದೆ ||೧||
ಆವ ಬಾಂಧವರು ಸಲಹಿದರು ಆ ಗಜರಾಜನ
ಆವ ಪತಿ ಕಾಯ್ದ ದ್ರೌಪದಿಯ ಮಾನ
ಆವ ಸೋದರ ಸಲಹಿದನು ಆ ವಿಭೀಷಣನ
ಜೀವರಿಗೆ ದಾತೃ ಶ್ರೀ ಹರಿಯಲ್ಲದೇ ||೨||
ಆವನಾಧಾರ ಅಡವಿಯೊಳಿಪ್ಪ ಮೃಗಗಳಿಗೆ
ಆವ ರಕ್ಷಕನು ಪಶು ಜಾತಿಗಳಿಗೆ
ಆವ ಪೋಷಕನು ಗರ್ಭದಲ್ಲಿಪ್ಪ ಶಿಶುವಿಗೆ
ದೇವ ಸಿರಿ ಪುರಂದರವಿಠಲನಲ್ಲದಲೆ ||೩||
***
ರಾಗ ಕಾಂಭೋಜ. ರೂಪಕ ತಾಳ (raga tala may differ in audio)
Avanavanu kayda avaniyolage
Deva devesa sri hariyallade ||pa||
Ava tandeyu salahidanu prahladana
Ava tayi kaydelu dhruvarayana
Ava maga salahidanu A ugra senana
Jivange poshakanu sri hariyallade ||1||
Ava bandhavaru salahidaru A gajarajana
Ava pati kayda draupadiya mana
Ava sodara salahidanu A vibishanana
Jivarige datru sri hariyallade ||2||
Avanadhara adaviyolippa mrugagalige
Ava rakshakanu pasu jatigalige
Ava poshakanu garbadallippa sisuvige
Deva siri purandaravithalanalladale ||3||
***
pallavi
AvanAvanu kaiva avaniyoLage
anupallavi
jIvarige dhAtru shrI hariyallade
caraNam 1
Ava tandeyu salahidanu prahlAdanna Ava tAyiyu salahidaLu dhruvana
Ava sOdararu IDErisidaru vibhISaNana jIvarige dhAtru shrI hariyallade
caraNam 2
Ava bandhugaLu salahidaru gajarAjanna Ava patiyAda draupadi kAlake
AvAva sakhanAta pANDavara samayakke jIvarige dhAtru shrI hariyallade
caraNam 3
AvanAdhAra aDaviyoLidda mrgagaLige Ava pOSaka garbada shishuvige
Ava pAlipa pashu pakSi mukhya jIvarige dEva shrI purandara viTTalannade
***
ಆವನಾವನು ಕಾಯ್ವ ಅವನಿಯೊಳಗೆ ||ಪ||
ಜೀವರಿಗೆ ಧಾತೃ ಶ್ರೀ ಹರಿಯಲ್ಲದೆ ||ಅ||
ಆವ ತಂದೆಯು ಸಲಹಿದನು ಪ್ರಹ್ಲಾದನ್ನ
ಆವ ತಾಯಿಯು ಸಲಹಿದಳು ಧ್ರುವನ
ಆವ ಸೋದರರು ಈಡೇರಿಸಿದರು ವಿಭೀಷಣನ
ಜೀವರಿಗೆ ಧಾತೃ ಶ್ರೀ ಹರಿಯಲ್ಲದೆ ||
ಆವ ಬಂಧುಗಳು ಸಲಹಿದರು ಗಜರಾಜನ್ನ
ಆವ ಪತಿಯಾದ ದ್ರೌಪದಿಕಾಲಕೆ
ಆವಾವ ಸಖನಾದ ಪಾಂಡವರಸಮಯಕ್ಕೆ
ಜೀವರಿಗೆ ಧಾತೃ ಶ್ರೀ ಹರಿಯಲ್ಲದೆ ||
ಆವನಾಧಾರ ಅಡವಿಯೊಳಿದ್ದ ಮೃಗಗಳಿಗೆ
ಆವ ಪೋಷಕ ಗರ್ಭದ ಶಿಶುವಿಗೆ
ಆವ ಪಾಲಿಪ ಪಶುಪಕ್ಷಿ ಮುಖ್ಯಜೀವರಿಗೆ
ದೇವ ಶ್ರೀ ಪುರಂದರವಿಠಲನ್ನದೆ||
*********
ಶ್ರೀಪತಿಯ ಕಟಾಕ್ಷವೀಕ್ಷಣವು ತಪ್ಪುವಾಗ
ಅನೇಕ ಬಂಧುಗಳು ಲಕ್ಷ ವೈದ್ಯರುಗಳು
ಇರಲಾಗಿ ಕಣ್ಣಕಣ್ಣ ಬಿಡುವರು
ತಾಪಸಿಯರಣ್ಯದೊಳಗೆ ಒಬ್ಬ ಒಂಟಿಯಾಗಿರಲು
ಅಂಜಬೇಡೆಂದು ನಮ್ಮ ಕಂಜನಾಭನೆ ಬಂದು
ಆಪತ್ತುಗಳ ಪರಿಹರಿಸುವ ನಮ್ಮ ಪುರಂದರ ವಿಠಲ.......
ಆವನಾವನ ಕಾಯ್ವ ಅವನಿಯೊಳಗೆ
ದೇವದೇವೇಶ ಶ್ರೀ ಹರಿಯಲ್ಲದೆ.... ಪ
ಆವ ತಂದೆಯು ಸಲಹಿದನು ಪ್ರಹ್ಲಾದನ
ಆವ ತಾಯಿ ಸಲಹಿದಳು ಧ್ರುವರಾಯನ
ಆವ ಸುತ ಸಲಹಿದನು ಆ ಉಗ್ರಸೇನನ
ಜೀವರಿಗೆ ಪೋಷಕನು ಹರಿಯಲ್ಲದೆ...1
ಆವ ಬಂಧುವು ಸಲಹಿದನು ಗಜರಾಜನನು
ಆವ ಪತಿ ಕಾಯ್ದ ದ್ರೌಪದಿಯ ಮಾನ
ಆವ ಸೋದರರು ಸಲುಹಿದರು ವಿಭೀಷಣನ
ಜೀವರಿಗೆ ದಾತೃ ಶ್ರೀ ಹರಿಯಲ್ಲದೆ....2
ಆವನಾಧಾರ ಅಡವಿಯೊಳಿಪ್ಪ ಮೃಗಗಳಿಗೆ
ಆವ ರಕ್ಷಕ ಪಕ್ಷಿಜಾತಿಗಳಿಗೆ
ಆವ ಪೊಷಕನು ಗರ್ಭದಲ್ಲಿದ್ದ ಶಿಶುಗಳಿಗೆ
ದೇವ ಶ್ರೀ ಪುರಂದರವಿಠಲನಲ್ಲದಲೆ..3
*************
No comments:
Post a Comment