Monday 20 December 2021

ಆರಿಗೆ ವಧುವಾದೆ ಅಂಬುಜಾಕ್ಷಿ ಕ್ಷೀರಾಬ್ಧಿ ಕನ್ನಿಕೆ purandara vittala AARIGE VDHUVADE AMBUJAAKSHI KSHEERAABDHI KANNIKE






ಆರಿಗೆ ವಧುವಾದೆ ಅಂಬುಜಾಕ್ಷಿ 
ಕ್ಷೀರಾಬ್ಧಿಕನ್ನಿಕೆ ಶ್ರೀಮಹಾಲಕುಮಿ  ||ಪ||
or
ಕ್ಷೀರಾಬ್ಧಿ ಕನ್ನಿಕೆ ಶ್ರೀಮಹಾಲಕ್ಷ್ಮಿ

ಯಾರಿಗೆ ವಧುವಾಗುವೇ ನೀನು        ||ಪ||

ಶರಧಿಬಂಧನ ರಾಮಚಂದ್ರಮೂರುತಿಗೋ| 
ಪರಮಾತ್ಮ ಶ್ರೀ ಅನಂತಪದ್ಮನಾಭನಿಗೋ|
ಸರಸಿಜನಾಭ ಜನಾರ್ಧನಮೂರುತಿಗೋ| 
ಎರಡು ಹೊಳೆಯ ರಂಗಪಟ್ಟಣವಾಸಗೋ ||

 ಚೆಲುವ ಬೇಲೂರ ಚೆನ್ನಿಗರಾಯನಿಗೋ| 
ಕೆಳದಿ ಹೇಳು ಉಡುಪಿಯ ಕೃಷ್ಣರಾಯನಿಗೋ| 
ಇಳೆಯೊಳು ಪಂಢರಾಪುರನಿಲಯ ವಿಠಲಗೋ| 
ನಳಿನಾಕ್ಷಿ ಹೇಳು ಬದರೀನಾರಾಯಣನಿಗೋ|| 

 ಮಲಯಜಗಂಧಿ ಬಿಂದುಮಾಧವಗೋ| 
ಸುಲಭ ದೇವರ ದೇವ ಪುರುಷೋತ್ತಮಗೋ| 
ಫಲದಾಯಕ ನಿತ್ಯಮಂಗಳನಾಯಕಗೋ|
ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ|| 

ವಾಸವಾರ್ಚಿತ ಕಾಂಚಿ ವರದರಾಜನಿಗೋ| 
ಅಸುರಾರಿ ಶ್ರೀಮುಷ್ಣದಾದಿವರಾಹನಿಗೋ| 
ಶೇಷಶಾಯಿಯಾದ ಶ್ರೀರಂಗನಾಯಕಗೋ 
ಸಾಸಿರನಾಮದೊಡೆಯ ಅಳಗಿರೀಶಗೋ ||

 ಶರಣಾಗತರ ಪೊರೆವ ಸಾರಂಗಪಾಣಿಗೋ| 
ವರಗಳೀವ ಶ್ರೀನಿವಾಸಮೂರುತಿಗೋ| 
ಕುರುಕುಲಾಂತಕ ರಾಜಗೋಪಾಲಮೂರುತಿಗೋ| 
ಸ್ಥಿರವಾದ ಪುರಂದರವಿಠಲರಾಯನಿಗೋ || 
***

ರಾಗ : ಕಲ್ಯಾಣಿ  ತಾಳ : ಆದಿ (raga, taala may differ in audio)


Aarige vadhuvaade ambujaakshi nee || pa ||

Ksheeraabdhi kannike shree mahaalakumi nee || a. Pa ||

Sharadhi bandhana raamachandra moorutigo |
Paramaatma shree ananta padmanaabhanigo ||
Sarasijanaabha janaardhana moorutigo |
Eradu holeya ranga pattanavaasago || 1 ||

Cheluva beloora chennigaraayanigo |
Keladi heludupiya krushnaraayanigo ||
Ileyolu pandharapura nilaya viththalago |
Nalinaakshi helu badari naaraayananigo || 2 ||

Malayaja gandhi bindu maadhava raayago |
Sulabha devara deva purushottamanigo ||
Phaladaayaka nitya mangaladaayakago |
Cheluve naacade helu shreevenkateshago || 3 ||

Vaasavaarcita kanchi varadaraaja moorutigo |
Asuraari shreemushnaadi varahanigo ||
Sheshashaayiyaada shreeranganaayakago |
Saasira naamadodeya alagireeshago || 4 ||

Sharanaagatara poreva saaranga paanigo |
Varagalaneeva shreenivaasa moorutigo ||
Kurukulaantaka namma raajagopaala moorutigo |
Sthiravaada purandaraviththala raayanigo || 5 ||
****

pallavi kurinji

29 shankaraabharaNam janya
Aa: S N3 S R2 G3 M1 P D2
Av: D2 P M1 G3 R2 S N3 S

kshIrAbdi kannige shrI mahAlakSmi
yArigE vaduvAguvE mahAlakSmi (nInu) (yArigE)

anupallavi

kshArAbdi vandana rAmachandra mUrtigo
paramAtma ananta padmanAbhago
sarasija nAbha shrI janArdhana mUrtigo
ubhaya kAvEri ranga paTTanadarasago (yArige)

caraNam 1 yamunaa kalyaaNi

65 mEcakalyaaNi janya
Aa: S R2 G3 P M2 P D2 S
Av: S D2 P M2 P G3 R2 S

celuva muruti belUra kannigarAyanigo
ghelatiyara uDupi shrI KrSNa rAyago
lLayoLu pANDuranga viTTala rAyago
naLinAkshi pElamma badari narAyaNago (yArige)

caraNam 2 darbaari kaanaDa

20 naTabhairavi janya
Aa: N2 S R2 G2 R2 S M1 P D1 N2 S
Av: S D1 N2 P M1 P G2 M1 R2 S

malayahrda vindu mAdhava rAyanigo
sulabhA devaru puruSottamago
phaladAyaka nitya mangaLa dAyakago
celuvenO jatE bEDo shrI venkateshago (yArige)

caraNam 3 sindu bhairavi

10 naaTakapriya janya
Aa: S R2 G2 M1 G2 P D1 N2 S
Av: N2 D1 P M1 G2 R1 S N2 S

vAsavArcita kanci varadarAjanigo
A shrI muSNa dalli Adi varAhanigo
shESashAyi yada srIman narayanago
sAsira nAma doDeya aLagirIshago (yArige)

caraNam 4 maNirangu

22 kharaharapriya janya
Aa: S R2 M1 P N2 S
Av: S N2 P M1 G2 R2 S

sharaNAgata rakSaka sAranga pANigo
maragaLa nIDuva srInivAsago
kurukulAntaka rAja gOpAla mUrtigo
sthiravAgi purandara viTTala rAyago (yArige)
***

ಕ್ಷೀರಾಬ್ಧಿ ಕನ್ನಿಕೆ ಶ್ರೀಮಹಾಲಕ್ಷ್ಮಿ 
ಯಾರಿಗೆ ವಧುವಾಗುವೇ ನೀನು        ||ಪ||

ಶರಧಿ ಬಂಧನ ರಾಮಚಂದ್ರ ಮೂರ್ತಿಗೋ
ಪರಮಾತ್ಮ ಅನಂತ ಪದ್ಮನಾಭಗೋ
ಸರಸಿಜನಾಭ ಶ್ರೀ ಜನಾರ್ಧನ ಮೂರ್ತಿಗೋ
ಉಭಯಕಾವೇರಿ ರಂಗ ಪಟ್ಟಣದರಸಗೋ    ||೧||

ಚೆಲುವ ಮೂರುತಿ ಬೇಲೂರ ಚೆನ್ನಿಗರಾಯನಿಗೋ
ಗೆಳತಿ ಹೇಳು ಉಡುಪಿ ಶ್ರೀ ಕ್ರಿಷ್ಣರಾಯನಿಗೋ
ಇಳೆಯೊಳು ಪಾಂಡುರಂಗ ವಿಠಲ ರಾಯಗೋ
ನಳಿನಾಕ್ಷಿ ಹೇಳಮ್ಮ ಬದರಿ ನಾರಾಯಣಗೋ   ||೨||

ಮಲಯಜ ಗಂಧೀ ಬಿಂದು ಮಾಧವರಾಯಗೋ
ಸುಲಭ ದೇವರು ಪುರುಷೋತ್ತಮಗೋ
ಫಲದಾಯಕ ನಿತ್ಯ ಮಂಗಳದಾಯಕಗೋ
ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ     ||೩||

ವಾಸವಾರ್ಚಿತ ಕಂಚಿ ವರದರಾಜನಿಗೋ
ಆ ಶ್ರೀಮುಷ್ಣದಲ್ಲಿ ಆದೀವರಾಯನಿಗೋ
ಶೇಷಶಾಯಿಯಾದ ಶ್ರೀಮನ್ ನಾರಾಯಣಗೋ
ಸಾಸಿರ ನಾಮದೊಡೆಯ ಅಳಗಿರಿಶಗೋ       ||೪||

ಶರಣಾಗತ ರಕ್ಷಕ ಸಾರಂಗ ಪಾಣಿಗೋ
ವರಗಳ ನೀಡುವ ಶ್ರೀನಿವಾಸಗೋ
ಕುರುಕುಲಾಂತಕ ರಾಜಗೋಪಾಲ ಮೂರ್ತಿಗೋ
ಸ್ಥಿರವಾಗಿ ಪುರಂದರ ವಿಠ್ಠಲರಾಯನಿಗೋ        ||೫||
********

ಆರಿಗೆ ವಧುವಾದೆ - ಅಂಬುಜಾಕ್ಷಿ |ಕ್ಷೀರಾಬ್ಧಿ ಕನ್ನಿಕೆ - ಶ್ರೀ ಮಹಾಲಕುಮೀ ಪಶರಧಿಬಂಧನ ರಾಮಚಂದ್ರ ಮೂರುತಿಗೊ |ಪರಮಾತ್ಮ ಸಿರಿಯನಂತ ಪದ್ಮನಾಭನಿಗೋ ||ಸರಸಿಜಭವ ಜನಾರ್ದನ ಮೂರುತಿಗೋ |ಎರಡು ಹೊಳೆಯ ರಂಗಪಟ್ಟಣವಾಸಗೊ 1ಚೆಲುವ ಬೇಲೂರು ಚೆನ್ನಿಗರಾಯನಿಗೊ |ಕೆಳದಿ ಹೇಳುಡುಪಿಯ ಕೃಷ್ಣರಾಯನಿಗೊ ||ಇಳೆಯೊಳು ಪಂಢರಪುರ ವಿಠಲೇಶಗೊ ||ನಳಿನಾಕ್ಷಿ ಹೇಳು ಬದರೀನಾರಾಯಣನಿಗೊ 2ಮಲಯಜಗಂಧಿ, ಬಿಂದುಮಾಧವರಾಯಗೊ |ಸುಲಭದೇವ ಪುರುಷೋತ್ತಮಗೊ ||ಫಲದಾಯಕನಿತ್ಯಮಂಗಳನಾಯಕಗೊ |ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ 3ವಾಸವಾರ್ಚಿತ ಕಂಚೀವರದರಾಜ ಮೂರುತಿಗೊ |ಆ ಸುರವಂದ್ಯ ಶ್ರೀಮುಷ್ಣದಾದಿ ವರಹನಿಗೊ ||ಶೇಷಶಾಯಿಯಾದ ಶ್ರೀ ರಂಗನಾಯಕಗೊ |ಸಾಸಿರ ನಾಮದೊಡೆಯ ಅಳಗಿರಿಯೀಶಗೋ 4ಶರಣಾಗತರನು ಪೊರೆವ ಶಾರ್ಙಪಾಣಿಗೊ |ವರಗಳನೀವ ಶ್ರೀನಿವಾಸ ಮೂರುತಿಗೋ |ಕುರುಕುಲಾಂತಕ ರಾಜಗೋಪಾಲ ಮೂರುತಿಗೊ |ಸ್ಥಿರವಾದ ಪುರಂದರವಿಠಲರಾಯನಿಗೊ 5
**********

No comments:

Post a Comment