Audio by Mrs. Nandini Sripad
by varadendra teertharu ಶ್ರೀ ವರದೇಂದ್ರತೀರ್ಥರು.
ankita varadendrayati ವರದೇಂದ್ರಯತಿ
click ಪಾಹಿ ಪಂಕೆರು ಹೇ ಕ್ಷಣ ತಂತ್ರಸಾರ
****
ಪಾಹಿ ಪಂಕೇರುಹೇಕ್ಷಣಾ ಸರ್ವಕಾಮದಾ ।
ಪಾಹಿ ಪದ್ಮಾಲಯ ನಿಕೇತನ ಸದಾ ।। ಪಲ್ಲವಿ ।।
.... ವರದೇಂದ್ರಯತಿ ರಚಿತ ತಂತ್ರಸಾರವನು ।
ಬರದೋದಿ ಕೇಳಿ ಮೋದಿಪ ಸುಜನರ ।
ವರ ಮೂಲರಾಮ ವೇದವ್ಯಾಸರಿಹಪರದಿ ।
ಕರುಣಿಪರು ಬೇಡಿದಿಷ್ಟಾರ್ಥಗಳನು ।।
ಮಂಗಳ ರಮಾಪತಿಗೆ ಮಂಗಳ ದೃಹಿಣಪಿತಗೆ ।
ಮಂಗಳ ದಶಪ್ರಮತಿ ಮುನಿ ಮಾನ್ಯಗೆ ।
ಮಂಗಳ ಶಿವೇಂದ್ರಾದಿ ಸುರನಿಕರ ಪೂಜ್ಯಗೆ ।
ಮಂಗಳ ಜಗದ್ವಿಲಕ್ಷಣ ಮೂರ್ತಿಗೆ ।।
ಇಪ್ಪತ್ತರೊಂಭತ್ತು ಪದಗಳೆಂಬತಿ ವಿಮಲ ।
ಪುಷ್ಪ ಮಾಲಿಕೆ ಮೂಲರಾಮನಡಿಗೆ ।
ಅರ್ಪಿಸಿದೆ ವೀಸುಮನ ನಾಮವನುದಿನದಲ್ಲಿ ।
ಒಪ್ಪದಿಹ್ಯದೇ ಬುಧರ ಮಸ್ತಕದಲಿ ।।
ಎಂದು ಪದ ರಚನೆ ಮಾಡಿದರು. ಈ ಪದ್ಯವನ್ನು ಓದಿದರೆ ಶ್ರೀ ಗುರುಗಳು ಎಷ್ಟು ದಾಕ್ಷಿಣ್ಯಶೀಲರೂ; ನಿಗರ್ವಿಗಳೂ; ಕರುಣಾಳುಗಳೂ ಎಂಬುದು ಗೊತ್ತಾಗುತ್ತದೆ.
ಶ್ರೀ ವರದೇಂದ್ರತೀರ್ಥರ ನೈಜ ಸ್ವಭಾವವನ್ನು ಅರಿಯುವಲ್ಲಿ ಸಹಕಾರಿಯಾದ ಈ ಕೃತಿಯು ಸಿಕ್ಕಿರುವುದುದೇ ನಮ್ಮ ಭಾಗ್ಯ!!'
by ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
*********
No comments:
Post a Comment