Sunday, 8 December 2019

ಶ್ರೋತುರ ನಿನ್ನ ಕತೆ mohana vittala ankita suladi ಹರಿಪಾದ ಪ್ರಾರ್ಥನಾ ಸುಳಾದಿ SHROTURA NINNA KATE HARIPAADA PRAARTHANA SULADI

Audio by Mrs. Nandini Sripad

ಶ್ರೀ ಮೋಹನದಾಸಾರ್ಯ ವಿರಚಿತ 

 ಶ್ರೀಹರಿಪಾದ ಪ್ರಾರ್ಥನಾ ಸುಳಾದಿ 
( ಇಂದ್ರಿಯಗಳ ದುರ್ವ್ಯಾಪಾರ ಬಿಡಿಸಿ , ಹರಿಪಾದದಿ ರತಿ ಕೊಡಲು ಪ್ರಾರ್ಥನೆ )

 ರಾಗ ಕಾಂಬೋಧಿ 

 ಧ್ರುವತಾಳ 

ಶ್ರೋತುರ ನಿನ್ನ ಕತೆ ಕೇಳಲೊಲ್ಲದು ಪರ -
ಮಾತುರದಿಂದ ದುರ್ವಾರ್ತಿ ಕೇಳುತಲಿದೆ
ನೇತುರ ನಿನ್ನ ಮೂರ್ತಿಯ ನೋಡದಲೆ ಗಾಡಿ -
ಕಾರ್ತಿಯರನು ಮನದಣಿಯ ನೋಡುತಲಿದೆ
ಗಾತುರ ನಿನ್ನ ದಾಸರನಪ್ಪದೆ ಕಾ -
ಮಾತುರದಿಂದ ಕಂಡವರನಪ್ಪುತಲಿದೆ
ಪೂತ ಪದಾರ್ಥವ ಭುಂಜಿಸದಲೆ ಜಿಂಹ್ವೆ
ಪಾತಕರ ದುಷ್ಟನ್ನ ಕೊಳುತಲಿದೆ
ಶ್ರೀತುಳಸೀ ಆಘ್ರಾಣಿಸದಲೆ ಮೂಗು
ಬಾತಿ ಬಸಿದ ಕೂಗಂಧ ಕೋಡುತಲಿದೆ
ಯಾತರಿಂದಲಿ ನಿನ್ನ ಮನಕೆ ಬಪ್ಪೆನೆ ದೇವ
ಕೋತಿ ಕೊರವಂಗೆ ಸಿಲ್ಕಿದಂತಾಯಿತು
ಜ್ಯೋತಿರ್ಮಯ ನಮ್ಮ ಮೋಹನವಿಠ್ಠಲ ಬೆ -
ನ್ನಾತು ಸಲಹದಿರೆ ಗತಿ ಯಾವುದು ಎನಗೆ ॥ 1 ॥

 ಮಟ್ಟತಾಳ 

ಸಂಸಾರವೆಂತೆಂಬೊ ಸಾಗರದೊಳು ಸಿಲ್ಕಿ
ಹಿಂಸೆ ಬಡುತ ತೇಲಿ ಮುಳುಗುವವನ ಕಂಡು
ಕಂಸಾರಿ ನೀ ಕೈಯ ಆನದಿದ್ದರೆ ಇನ್ನು ಕಡೆ ಹಾಯುವದೆಂತೊ
ಹಂಸವಾಹನನೈಯ್ಯಾ ಮೋಹನ್ನವಿಠ್ಠಲ 
ಸಂಶಯವೆಂತೆಂಬೊ ಸುಳಿಯೊಳು ಶಿಲ್ಕಿದನ 
ಕಡೆ ಹಾಯುವದೆಂತೊ ಕಡೆ ಹಾಯುವದೆಂತೊ ॥ 2 ॥

 ತ್ರಿವಿಡಿತಾಳ 

ವಾಕು ನಿನ್ನನು ಕೊಂಡಾಡಲೊಲ್ಲದೆ ಕೆಟ್ಟ
ಕಾಕು ಪೋಕರ ಕೂಡ ಕೆಲದಾಡುತಲಿದೆ
ಬೇಕೆಂದು ನಿನ್ನ ಪೂಜೆಯ ಮಾಡದಲೆ ಪಾಣಿ
ಕೂಕರ್ಮಕೊಳಗಾಗಿ ಭ್ರಷ್ಟ ಮಾಡುತಲಿದೆ
ಶ್ರೀಕಾಂತನ ಯಾತ್ರೆ ಮಾಡಲೊಲ್ಲದು ಪಾದ
ಬೇಕೆಂದು ಧನದಾಶೆಗೆ ತುಕ್ಕುತಲಿದೆ
ನೀ ಕೇಳೊ ಎರಡೈದೇಂದ್ರಿಯ ವ್ಯಾಪಾರ
ವಾಕಾಮಗೋಚರ ವಶವಾಗದು ಎನಗೆ
ಕಾಕೋದರ ಶಾಯಿ ಮೋಹನ್ನವಿಠ್ಠಲ 
ನೀ ಕೈಯ್ಯ ಹಿಡಿಯದಿರೆ ಗತಿ ಯಾವುದೆನಗೆ ॥ 3 ॥

 ಅಟ್ಟತಾಳ 

ಪಂಚ ಜ್ಞಾನೇಂದ್ರಿಯ ಪಂಚ ಕರ್ಮೇಂದ್ರಿಯ
ಪಂಚಭೂತ ಪಂಚ ತನ್ಮಾತ್ರಗಳು ಪ್ರ -
ಪಂಚಕ ಎಳದೊಯ್ದು ಘಾತಿಸುತಲಿವೆ
ಪಂಚಬಾಣನೈಯ್ಯ ಪಂಚಪ್ರಾಣಪ್ರೀಯ
ಪಂಚ ಪಾಂಡವಪಾಲ ಪಾಂಚಾಲಿ ವರದನೆ
ಪಂಚ ರೂಪಾತ್ಮಕ ಮೋಹನವಿಠ್ಠಲ 
ಮಿಂಚಿನಂದದಿ ಪೊಳೆಯೋ ದೋಷವ ಕಳೆಯೋ ॥ 4 ॥

 ಆದಿತಾಳ 

ವೇದಶಾಸ್ತ್ರವ ಸಾಧು ಪುರಾಣ
ಓದಿದವನಲ್ಲ ಕೇಳಿದವನಲ್ಲ
ಮಾಧವನ ಪೂಜಿ ಮಾಡಿದವನಲ್ಲ
ವಾದಿಸುವೆ ಕುತರ್ಕವನು ಮಾಡಿ
ಬೋಧ ಮೂರುತಿ ನಮ್ಮ ಮೋಹನವಿಠ್ಠಲ 
ನೀ ದಯದಿ ಕೈ ಪಿಡಿಯದೆಂತೊ ॥ 5 ॥

 ಜತೆ 

ತನುವೆ ತೀರಲಿ ನಿಚ್ಚಾ ಗುಣವೆ ತೀರಲಿ ಎನ್ನ
ಮನ ನಿನ್ನಂಘ್ರಿಯಲಿಡೊ ಮೋಹನ್ನವಿಠ್ಠಲ ॥
**********


No comments:

Post a Comment