Friday 27 December 2019

ಸತ್ಯಸಂಕಲ್ಪ ಸ್ವಾತಂತ್ರ ಸರ್ವೇಶ ankita vyasa vittala SATYASANKALPA SWAATANTRA SARVESHA

1st Audio by Mrs. Nandini Sripad



ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರ ಕೃತಿ   ( ವ್ಯಾಸವಿಠಲ ಅಂಕಿತ) 

 ರಾಗ ಮೋಹನ          ಖಂಡಛಾಪುತಾಳ 

ಸತ್ಯಸಂಕಲ್ಪ ಸ್ವಾತಂತ್ರ ಸರ್ವೇಶ 
ಸರ್ವೋತ್ತುಮನೆ ಸಾರ್ವಭೌಮಾ ॥ ಪ ॥

ಭೃತ್ಯರಿಗೆ ಬಂದ ಪರಿಪರಿ ಭಯಂಗಳ ಕಳೆದು ।
ನಿತ್ಯದಲಿ ಕಾಯೋ ಸ್ವಾಮೀ । ಪ್ರೇಮೀ ॥ ಅ ಪ ॥

ಆವ ಜನ್ಮದ ಫಲವೊ ಆವ ಕ್ರಿಯಗಳಿಂದ ।
ಆವ ಸಾಧನದ ಬಗೆಯು ।
ಆವರಿಂದಾವದನು ಘಟನೆಯನು ಮಾಳ್ಪೆಯು ।
ಆವದು ನಿನ್ನಾಟವು ।
ಆವ ಪರಿಯಿಂದಲಿ ಜೀವರನು ಸಲಹುವಿಯೊ ।
ಆವದು ನಿನ್ನಾಧೀನವೋ ॥
ದೇವದೇವೇಶ ನಿನ್ನ ಭಾವ ಬಲ್ಲವರಾರು ।
ಭಾವಜಪಿತ ಕೃಪಾಳೋ । ಕೇಳೋ ॥ 1 ॥

ದ್ವಿಪದ ತೈಜಸ ಪ್ರಾಜ್ಞ ವಿಶ್ವರೂಪಂಗಳಿಂದ ।
ಸ್ವಪನ ಕಾಲದಲಿ ನೀನು ।
ಸುಪರ್ವಾಣ ದೈತ್ಯರನು ಸೃಜಿಸಿ ಮೌನಿಯನೆ ಮಾಡಿ ।
ದಪರಿಮಿತ ಕಾರ್ಯಗಳನು ।
ಸುಫಲ ದುಷ್ಕರ್ಮಯೈದಿಸಿ ಜೀವರಿಗೆ ।
ಕ್ಲಿಪುತವಾದುದೆಲ್ಲಾ ಕೃಪೆಯಿಂದ ॥
ತೋರಿ ಬಂದಾಪತ್ತುಗಳ ಕಳೆದು ।
ಅಪರಿಮಿತ ದಯಸಾಗರಾ । ಶೂರಾ ॥ 2 ॥

ಎನ್ನಂಥ ಪಾಪಿಷ್ಠ ಇನ್ನಿಲ್ಲ ಧರೆಯೊಳಗೆ ।
ನಿನ್ನಂಥ ಕರುಣಿ ಇಲ್ಲಾ ।
ಚೆನ್ನಗುರು ವಿಜಯರಾಯರ ಪೊಂದಿದವನೆಂದು ।
ಮನ್ನಿಸಿ ಸಲಹಬೇಕು ।
ಘನ್ನ ಸಂಸಾರದೊಳು ಬವಣೆ ಬಂದಟ್ಟಿದರೆ ।
ನಿನ್ನ ಸ್ಮೃತಿ ಒಂದಿರಲಿ ॥
ಸನ್ನುತಾಂಗಿರಮಣ ವ್ಯಾಸವಿಠಲ ಮಧ್ವ ।
ಮುನಿಗೊಲಿದ ಉಡುಪಿವಾಸಾ । ಶ್ರೀಶಾ ॥ 3 ॥
****
ಸತ್ಯ ಸಂಕಲ್ಪ ಸ್ವಾತಂತ್ರ ಸರ್ವೇಶ ಸರ್ವೋತ್ತಮನೆ ಸಾರ್ವಭೌಮಾ ಪ

ಭೃತ್ಯರಿಗೆ ಬಂದ ಪರಿಪರಿ ಭಯಗಳನೆ ಕಳೆದುನಿತ್ಯದಲಿ ಕಾಯ್ವ ಸ್ವಾಮೀ ಪ್ರೇಮೀ ಅ.ಪ.

ಆವ ಜನುಮದ ಫಲವೊ | ಆವ ಕ್ರಿಯಗಳಿಂದಆವ ಸಾಧನದ ಬಗೆಯೋ ||ಆವುದಿಂದಾವುದಕೆ ಘಟನೆಯನು ಮಾಳ್ಪೆಯೊಆವುದೊ ನಿನ್ನಾಟವೋ ||ಆವ ಪರಿಯಿಂದಲ್ಲಿ ಜೀವಿಗಳ ಸಲಹುವಿಯೊಆವ ನಿನ್ನಾಧೀನವೋ |ದೇವ ದೇವೇಶ ನಿನ್ನ | ಭಾವ ಬಲ್ಲವರಾರೊಭಾವಜನ ಪಿತ ಕೃಪಾಳೊ | ಕೇಳೋ 1

ತ್ರಿಪದ ತೈಜಸ ಪ್ರಾಜ್ಞ ವಿಶ್ವರೂಪಗಳಿಂದಸ್ವಪ್ನ ಕಾಲದಲಿ ನೀನೂ ||ಸುಪರ್ವಾಣ ದೈತ್ಯರ ಸೃಜಿಸಿ ಮನೆಯನು ಮಾಡಿಅಪರಿಮಿತ ಕಾರ್ಯಗಳನೂ |ಸುಫಲ ದುಷ್ಕರ್ಮಗಳ ತೋರಿಸೀ ಜೀವಕ್ಕೆಕ್ಲುಪುತವಾಗಿದ್ದವೆಲ್ಲಾ |ಕೃಪೆಯಿಂದ ತೋರಿ ಬದಾಪತ್ತುಗಳ ಕಳೆವಅಪರಿಮಿತ ಸಾಗರಾ | ಶೂರಾ 2

ಎನ್ನಂಥ ಪಾಪಿಷ್ಠರಿನ್ನಿಲ್ಲ ಧರೆಯೊಳಗೆ ನಿನ್ನಂಥ ಕರುಣಿಯಿಲ್ಲಾ ||ಚೆನ್ನಗುರು ವಿಜಯರಾಯರ ಪೊಂದಿದವನೆಂದೂಮನ್ನಿಸಿ ಸಲಹಬೇಕೋ |ಘನ್ನ ಸಂಸಾರದೊಳು ಬವಣೆ ಬಂದಟ್ಟಿದರುನಿನ್ನ ಸ್ಮøತಿಯೊಂದು ಬರಲೀ |ಸನ್ನುತಾಂಗಿಯ ರಮಣ ವ್ಯಾಸವಿಠಲ ಮಧ್ವಮುನಿಗೊಲಿದೆ ಉಡುಪಿವಾಸಾ | ಶ್ರೀಶಾ 3
****



No comments:

Post a Comment