Saturday, 18 December 2021

ಏನು ಕಾರಣದಿಂದ ಮಲಗಿದಿಯೊ ಶ್ರೀನಾಥ ankita vijaya vittala ENU KAARANADINDA MALAGIDEYO






raga sindhubhairavi tala adi





ವಿಜಯದಾಸ  on ಶ್ರೀರಾಮ 

ಏನು ಕಾರಣದಿಂದ  ಮಲಗಿದಿಯೊ
ಶ್ರೀನಾಥ ರಘುಕುಲೋದ್ಭವ ದರ್ಭಶಯನಾ ಪ
ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೊ
ಕೋತಿಗಳ ಕೈಯಲೆ ರಣವಾಗದೆಂದು ಮಲಗಿದೆಯಾ
ಪಾತಕ ಹರದೈತ್ಯ ಭಂಜಾ ತಿಳುಪುವದು
ಜ್ಯೋತಿರ್ಮಯರೂಪ ದರ್ಭಶಯನಾ1

ವನವಾಸ ತಿರಗಲಾರೆನೆಂದು ಮಲಗಿದೆಯೊ
ವನಧೀಶ ಮಾರ್ಗವನು ಕೊಡನೆಂದು ಮಲಗಿದೆಯೊ
ದನುಜ ಬಲ್ಲಿದನೆಂಬೊ ವ್ಯಾಕುಲದಿ ಮಲಗಿದೆಯೊ
ಜನನ ಮರಣರಹಿತ ರಾಮ ತಿಳುಹುವದು
ಪಾದ ಶ್ರೀದರ್ಭಶಯನಾ 2

ಅನಿಲಾರಿ ಅಹರಗೆ ಕರುಣಿಸಿ ಮಲಗಿದೆಯೊ
ವನಜ ಸಂಭವಗೆ ನೀ ಒಲಿಯ ಬಂದು ಮಲಗಿದಿಯೊ
ಮುನಿಗಳು ಸ್ತೋತ್ರವ ಮಾಡಲು ಹಿಗ್ಗಿ ಮಲಗಿದೆಯೊ
ಜನನಾಥ ಜಾನಕಿಕಾಂತ ತಿಳುಪುವದು
ಎನಗೊಲಿದ ವಿಜಯವಿಠ್ಠಲ ದರ್ಭಶಯನಾ 3
***

ಏನು ಕಾರಣದಿಂದ ಮಲಗಿರುವೆಯೋ  | (ಪ.)
ಶ್ರೀನಾಥ ರಘುಕುಲೋದ್ಭವ ದರ್ಭಶಯನ || (ಅ.ಪ.)

ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೋ
ಸೇತುಗಟ್ಟುವುದು ಅಸಾಧ್ಯವೆಂದು ಮಲಗಿದೆಯೋ
ಕೋತಿಗಳ ಕೈಲಿ ರಣವಾಗದೆಂದು ಮಲಗಿದೆಯೋ
ಜ್ಯೋತಿರ್ಮಯ ರೂಪ ಹೇ ದರ್ಭಶಯನ || ೧.

ವನವಾಸ ತಿರುಗಲಾರೆ ಎಂದು ನೀ ಮಲಗಿದೆಯೋ
ವನಧೀಶ ಮಾರ್ಗವನು ಕೊಡನೆಂದು ಮಲಗಿದೆಯೋ
ದನುಜ ಬಲ್ಲಿದನೆಂಬೋ ವ್ಯಾಕುಲದಿ ಮಲಗಿದೆಯೋ
ಹನುಮ ವಂದಿತ ಪಾದ ಶ್ರೀ ದರ್ಭಶಯನ || ೨.

ಅನಲಾಕ್ಷ ಹರನಿಗೆ ಕರುಣಿಸಿ ಮಲಗಿದೆಯೋ
ವನಜ ಸಂಭವನಿಗೆ  ಒಲಿದು ನೀ ಮಲಗಿದೆಯೋ
ಮುನಿಗಳ ಸ್ತೋತ್ರಕ್ಕೆ  ಹಿಗ್ಗಿ ನೀ ಮಲಗಿದೆಯೋ
ಎನಗೊಲಿದ ವಿಜಯ ವಿಠಲ ದರ್ಭಶಯನ || ೩
***

Enu kaaranadinda malagiruveyo|
Srinaatha raghukulodbhava darbha shayana || a.p∆||

Seete podaluyendu chinteyali malagideyo |
Setugattuvudu asaadhya vendu malagideyo|
Kotigala kaile rana aagadendu malagideyo |
Jyotirmaya roopa heyl darbha shayanaa ||1|

Vanavaasa tirugalare yendu nee malagideyo|
Vanadheesha maargavanu kodanendu malagideyo ||
Danuja ballidanembo vyakuladi malagideyo |
Hanuma vandita paada sri darbha shayanaa||2||

Analaaksha haranige karunisi malagideyo |
Vanaja sambhavanige olidu nee malagideyo ||
Munigala stotrakke higgi nee malagideyo |
Enagolida Vijayavitthala darbha shayanaa||3||
***



ಏನು ಕಾರಣ ಮಲಗಿದಿಯೊ
ಶ್ರೀನಾಥ ರಘುಕುಲೋದ್ಭವ ದರ್ಭಶಯನಾ ಪ
ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೊ
ಕೋತಿಗಳ ಕೈಯಲೆ ರಣವಾಗದೆಂದು ಮಲಗಿದೆಯಾ
ಪಾತಕ ಹರದೈತ್ಯ ಭಂಜಾ ತಿಳುಪುವದು
ಜ್ಯೋತಿರ್ಮಯರೂಪ ದರ್ಭಶಯನಾ1

ವನವಾಸ ತಿರಗಲಾರೆನೆಂದು ಮಲಗಿದೆಯೊ
ವನಧೀಶ ಮಾರ್ಗವನು ಕೊಡನೆಂದು ಮಲಗಿದೆಯೊ
ದನುಜ ಬಲ್ಲಿದನೆಂಬೊ ವ್ಯಾಕುಲದಿ ಮಲಗಿದೆಯೊ
ಜನನ ಮರಣರಹಿತ ರಾಮ ತಿಳುಹುವದು
ಪಾದ ಶ್ರೀದರ್ಭಶಯನಾ 2

ಅನಿಲಾರಿ ಅಹರಗೆ ಕರುಣಿಸಿ ಮಲಗಿದೆಯೊ
ವನಜ ಸಂಭವಗೆ ನೀ ಒಲಿಯ ಬಂದು ಮಲಗಿದಿಯೊ
ಮುನಿಗಳು ಸ್ತೋತ್ರವ ಮಾಡಲು ಹಿಗ್ಗಿ ಮಲಗಿದೆಯೊ
ಜನನಾಥ ಜಾನಕಿಕಾಂತ ತಿಳುಪುವದು

ಎನಗೊಲಿದ ವಿಜಯವಿಠ್ಠಲ ದರ್ಭಶಯನಾ 3
*********

No comments:

Post a Comment