Saturday 28 December 2019

ಅಂಜಿಸುವುದ್ಯಾಕಮ್ಮ ಕಂಜೋದ್ಭವ ankita vasudeva vittala ANJISUVUDYAATAKAMMA KANJODBHAVA


Audio by Mrs. Nandini Sripad

ಶ್ರೀ ವ್ಯಾಸತತ್ತ್ವಜ್ಞತೀರ್ಥರ ಕೃತಿ   (ವಾಸುದೇವವಿಠಲ ಅಂಕಿತ) 

[ ಐತಿಹಾಸಿಕ ಕೃತಿ , ದುರ್ಗಾ ಸ್ತೋತ್ರ ಮಾಡಿ , ಬಂದ ಮಾರಿಕಾ ಉಪದ್ರವ ಪರಿಹರಿಸಿದ್ದು ]

 ರಾಗ ಸಾರಂಗ          ಖಂಡಛಾಪುತಾಳ 

ಅಂಜಿಸುವುದ್ಯಾಕಮ್ಮ ಕಂಜೋದ್ಭವನಮ್ಮ ನೀ ।
ಅಂಜಿಸಿದರೆ ಲೋಕ ಅಂಜದಿರುವುದೆ ॥ ಪ ॥

ಕುಂಜರಗಮನೆ ನಾವಂಜನದೇವಿ ।
ಸಂಜಾತನಾದ ಪ್ರಭಂಜನನಣುಗರು ॥
ಕಂಜನಾಭನ ಪಾದ ಕಂಜಕ್ಕೆ ವಿಮುಖ ।
ಸಂಜಿಲಿ ಚರಿಸುವ ಪುಂಜರು ಕಡಿಮೆ ॥ 1 ॥

ನಿನ್ನಾನೆ ನಂಬಿ ನಾವಿನ್ನು ಸಂಸೃತಿಯಾ ।
ಬನ್ನಾವೆ ಕಳಕೊಂಡು ಚನ್ನಾಗಿ ಜಗದಿ ॥
ಧನ್ಯಾರಾದೇವೆಂದು ಮನ್ನಾದಿ ಬಯಸೆ ।
ಅನ್ಯಾರಂದದಲಿ ನೀ ನಮ್ಮನ್ನ ನೋಡುವರೆ ॥ 2 ॥

ಸಿರಿ ನಾರಸಿಂಹನ್ನ ವರ ಭಕ್ತಿಯಲಿ ನೀನು ।
ಕರವಶ ಮಾಡಿಪ್ಪೆ ಪರವೇನೆ ನಿನಗೆ ॥
ಪರಮೇಷ್ಠಿ ಮೊದಲಾದಮರರ ನೀ ಪೊರೆವೆ ।
ಸಿರಿ ವಾಸುದೇವವಿಠಲನ್ನ ತೋರಮ್ಮ ॥ 3 ॥
***********

ಅಂಜಿಸುವುದ್ಯಾಕಮ್ಮ ಕಂಜೋದ್ಭವ ನಮ್ಮ ನೀ
ಅಂಜಿಸಿದರೆ ಲೋಕ ಅಂಜದಿರುವುದೆ ||. ಪ ||

ಕುಂಜರಗಮನೆ ನಾವಂಜನದೇವಿ
ಸಂಜಾತನಾದ ಪ್ರಭಂಜನನಣುಗರು
ಕಂಜನಾಭನ ಪಾದ ಕಂಜಕ್ಕೆ ವಿಮುಖ
ಸಂಜಿಲಿ ಚಲಿಸುವ ಪುಂಜರು ಕಡಿಮೆ ||

ನಿನ್ನನೆ ನಂಬಿ ನಾವಿನ್ನು ಸಂಸೃತಿಯ
ಬನ್ನವೆ ಕಳಕೊಂಡು ಚನ್ನಾಗಿ ಜಗದಿ
ಧನ್ಯರಾದೇವೆಂದು ಮನ್ನಾದಿ ಬಯಸೆ
ಅನ್ಯಾರಂದದಲಿ ನೀ ನಮ್ಮನ್ನ ನೋಡುವರೆ ||

ಸಿರಿ ನಾರಸಿಂಹನ್ನ ವರ ಭಕ್ತಿಯಲಿ ನೀನು
ಕರವಶ ಮಾಡಿಪ್ಪೆ ಪರವೇನೆ ನಿನಗೆ
ಪರಮೇಷ್ಠಿ ಮೊದಲಾದಮರರ ನೀ ಪೊರೆವೆ
ಸಿರಿ ವಾಸುದೇವವಿಠಲನ್ನ ತೋರಮ್ಮ ||
*******

ಅಂಜಿಸುವುದ್ಯಾಕಮ್ಮ ಕಂಜೋದ್ಭವ ನಮ್ಮ ನೀ|
ಅಂಜಿಸಿದರೆ ಲೋಕ ಅಂಜಾದಿರುವುದೆ ||. ಪ ||

ಕುಂಜರಗಮನೆ ನಾವಂಜನದೇವಿ|
ಸಂಜಾತನಾದ ಪ್ರಭಂಜನನುಗರು||
ಕಂಜಾನಾಭನ ಪಾದ ಕಂಜಾಕ್ಕೆ ವಿಮುಖ|
ಸಂಜಿಲಿ ಚಲಿಸುವ ಪುಂಜರು ಕಡಿಮೆ ||೧||

ನಿನ್ನಾನೆ ನಂಬಿ ನಾವಿನ್ನು ಸಂಸೃತಿಯಾ|
ಬನ್ನಾವೆ ಕಳಕೊಂಡು ಚನ್ನಾಗಿ ಜಗದಿ||
ಧನ್ಯರಾದೇವೆಂದು ಮನ್ನಾದಿ ಬಯಸೆ|
ಅನ್ಯಾರಂದದಲೆ ನೀ ನಮ್ಮನ್ನ ನೋಡುವರೆ ||೨||

ಸಿರಿ ನಾರಸಿಂಹನ್ನ ವರ ಭಕ್ತಿಯಲಿ ನೀವು|
ಕರವಶ ಮಾಡಿಪ್ಪೆ ಪರವೇನೆ ನಿನಗೆ|
ಪರಮೇಷ್ಠಿ ಮೊದಲಾದಾಮರರ ನೀ ಪೊರವೆ|
ಸಿರಿ ವಾಸುದೇವವಿಠಲನ್ನ ತೋರಮ್ಮ ||೩||
****

No comments:

Post a Comment