RAGA KAAPI
ರಾಗ : ಬಿಲಹರಿ ಖಂಡಛಾಪುತಾಳ
ನಿನ್ನ ಮಗನೇನೆ ಗೋಪಿ ॥ ಪ ॥
ಚೆನ್ನಾರಿ ಚೆಲುವ ಉಡುಪಿನ ಕೃಷ್ಣರಾಯ ॥ ಅ ಪ ॥
ಮುಂಗುರುಳು ಮುಂದಲೆಗೆ ಭಂಗಾರದರಳೆಲೆ ।
ರಂಗು ಮಾಣಿಕದ ಉಂಗುರವನಿಟ್ಟು ॥
ಪೊಂಗೆಜ್ಜೆ ತೊಡರು ಅಂದಿಗೆ ಘಲು ಘಲುರೆನೆ । ಅಂಗಳದೊಳಾಡುವನು ಈ ಮುದ್ದುಬಾಲ ॥ 1 ॥
ಕಟಿವಾಯಿ ಬೆಣ್ಣೆ ಕಾಡಿಗೆ ಕಣ್ಣು ಕಟಿ ಸೂತ್ರ ।
ಪಟವಾಳಿ ಕೌಪೀನ ಕೊರಳಲ್ಲಿ ಪದಕ ॥
ಸಟಿಯಿಲ್ಲ ಬ್ರಹ್ಮಾಂಡ ಉದರದಲಿಂಬಿಟ್ಟು ।
ಮಿಟಮಿಟನೆ ನೋಡುವನು ಈ ಮುದ್ದುಬಾಲ ॥ 2 ॥
ಹರಿವ ಹಾವನು ಕಂಡು ಹೆಡೆ ಹಿಡಿದು ಆಡುವ ।
ಕರುವಾಗಿ ಆಕಳ ಮೊಲೆಯುಂಬುವ ॥
ಹಿರಿದಾಗಿ ನೋಡಲು ಅಂತರಂಗದ ಸ್ವಾಮಿ ।
ಧರೆಯೊಳಂಬುಧಿ ತೀರ ಉಡುಪಿನ ಕೃಷ್ಣ ॥ 3 ॥
***
pallavi
ninna maganEne gOpi
anupallavi
cennara celuva uDupiya krShNarAya
caraNam 1
munguruLu mundalege bhangAradaraLele rangu mANikadunguraviTTu
pongejje toDaru andige ghalu ghalurene angaLadalADuta I muddu bAla
caraNam 2
kaTavAyi beNNe kADigegaNNu kaTisUtra paTavALi kaupIna koraLalli padaka
saTeyilla brahmANDa udaradalimbiTTu miTamiTane nODuva nI muddubAla
caraNam 3
hariva hAvanu kaNDu heDe hiDidADuva karuvAgi AkaLa moleyumbuva
hiridAgi nODalu antarangada svAmi dhareyoLambudhi tIra uDupina kruSNa
***
ರಾಗ ದೇಶ್ ಖಂಡಛಾಪುತಾಳ
No comments:
Post a Comment