Wednesday, 15 December 2021

ಜಾಣ ನೀನಹುದೋ ಗುರು ಮುಖ್ಯಪ್ರಾಣ ankita shree krishna JAANA NEENAHUDO GURU MUKHYAPRANA

December  29, 2021
audio anant lakshmanrao kulkarni




 ರಾಗ ಕಲ್ಯಾಣಿ    ಆದಿತಾಳ 

ಶ್ರೀ ವ್ಯಾಸರಾಯರ ಕೃತಿ 


ಜಾಣ ನೀನಹುದೋ ಗುರುಮುಖ್ಯಪ್ರಾಣ ನೀನಹುದೋ ॥ ಪ ॥
ರಾಣಿ ಭಾರತಿರಮಣ ನಿನಗೆಣೆ
ಗಾಣೆ ತ್ರಿಭುವನದೊಳಗೆ ಸರ್ವ -
ಪ್ರಾಣಿಗಳ ಹೃದಯದಲಿ ಮುಖ್ಯ -
ಪ್ರಾಣನೆಂದೆನಿಸಿದೆಯೊ ದಿಟ್ಟ ॥ ಅ.ಪ ॥

ಧೀರ ನೀನಹುದೋ ವಾಯುಕುಮಾರ ನೀನಹುದೋ ।
ಸಾರಿದವರ ಮನೋರಥಂಗಳ
ಬಾರಿಬಾರಿಗೆ ಕೊಡುವೆನೆನುತಲಿ
ಕ್ಷೀರನದಿ ತೀರದಲಿ ನೆಲೆಸಿಹ
ಮಾರುತಾವತಾರ ಹನುಮ ॥ 1 ॥

ದಿಟ್ಟ ನೀನಹುದೋ ಬೆಟ್ಟವ ತಂದಿಟ್ಟವ ನೀನಹುದೋ ।
ಕಿಟ್ಟ ಹಿಡಿದಕ್ಷಯಕುಮಾರನ
ಕುಟ್ಟಿ ದೈತ್ಯರ ಕೆಡಹಿ ಬೇಗದಿ
ಸುಟ್ಟು ಲಂಕೆಯ ಸೀತೆಗುಂಗುರ
ಕೊಟ್ಟೆ ಜಗಜಟ್ಟಿ ಹನುಮ ॥ 2 ॥

ಚಂಡ ನೀನಹುದೋ ದುರಿತ ಮಾರ್ತಾಂಡ ನೀನಹುದೋ ।
ಕುಂಡಲ ಕಿರಿಘಂಟೆ ಉಡಿಯಲಿ
ಪೆಂಡೆ ನೂಪುರ ಕಾಲಲಂದಿಗೆ
ತಂಡತಂಡದಿ ಕೃಷ್ಣ ನಂಘ್ರಿ
ಪುಂಡರೀಕಕೆ ಕೈಯ ಮುಗಿದ ಹನುಮ ॥ 3 ॥
***

Jaana nee nahudo mukhyapraana nee nahudo || pa ||

Raani bhaarati ramana ninagene |
Kaane tribhuvanadolage sarva |
Praanigala hrudayadali mukhya |
Praananendenisideyo swaami || a. Pa. ||

Dheera neenahudo vaayukumaara neenahudo |
Saaridavara manorathangala |
Baari baarige koduvenenutali |
Ksheera nadi teeradali nelesiha |
Maarutana avataara hanuma || 1 ||

Dhitta neenahudo bettava tandittava neenahudo |
Ratte hididakshaya kumaarana |
Kutti daityara kedahi begadi |
Suttu lamkeya seetegungura |
Kotte jagadali jatti hanuma || 2 ||

Chanda neenahudo durita maartaanda neenahudo |
Kundala kiri gamte udiyali |
Pende noopura kaalalandige |
Kanda tandadi shree krushnananghri |
Pundareekage kaiya mugida || 3 ||
***


ಕ್ಷೀರನದಿ ತೀರದಲಿ = ತಮಿಳುನಾಡಿನ ಕಾಟ್ಪಾಡಿಯ ಸಮೀಪದಲ್ಲಿ ರಾಯವೇಲೂರು ಇದೆ. ಅಲ್ಲಿ ಕ್ಷೀರನದಿ ಇದೆ. ( ಆ ನದಿಯ ದಡದಲ್ಲಿ ಮಹಾತಪಸ್ವಿಗಳಾಗಿದ್ದ ಶ್ರೀ ಸತ್ಯಾಧಿರಾಜತೀರ್ಥ ಶ್ರೀಪಾದಂಗಳವರ ಬೃಂದಾವನವಿದೆ. ) ಅಲ್ಲಿರುವ ಶ್ರೀ ಪ್ರಾಣದೇವರ ಸ್ತೋತ್ರವಿದು. 
 ವಿವರಣೆ : ಹರಿದಾಸರತ್ನಂ ಶ್ರೀ ಗೋಪಾಲದಾಸರು
**********

ಜಾಣ ನೀನಹುದೋ ಗುರುಮುಖ್ಯಪ್ರಾಣ ನೀನಹುದೊ||pa||

ರಾಣಿ ಭಾರತೀ ರಮಣ ನಿನಗೆಣೆಕಾಣೆ ತ್ರಿಭುವನದೊಳಗೆ ಸರ್ವ
ಪ್ರಾಣಿಗಳ ಹೃದಯದಲಿ ಮುಖ್ಯಪ್ರಾಣನೆಂದೆನಿಸಿದೆಯೊ ಧಿಟ್ಟ ||a.pa||

ಧೀರ ನೀನಹುದೋ ವಾಯುಕುಮಾರ ನೀನಹುದೊ
ಸಾರಿದವರ ಮನೋರಥಂಗಳಬಾರಿ ಬಾರಿಗೆ ಕೊಡುವೆನೆನುತಲಿ
ಕ್ಷೀರನದಿ ತೀರದಲಿ ನೆಲೆಸಿಹಮಾರುತಾವತಾರ ಹನುಮ ||1||

ಧಿಟ್ಟ ನೀನಹುದೊ ಬೆಟ್ಟವ ತಂದಿಟ್ಟವ ನೀನಹುದೊ
ರೆಟ್ಟೆ ಹಿಡಿದಕ್ಷಯ ಕುಮಾರನಕುಟ್ಟಿ ದೈತ್ಯರ ಕೆಡಹಿ ಬೇಗದಿಸುಟ್ಟು
ಲಂಕೆಯ ಸೀತೆಗುಂಗುರಕೊಟ್ಟೆ ಜಗಜ್ಜಟ್ಟಿ ಹನುಮ||2||

ಚಂಡ ನೀನಹುದೊ ದುರಿತ ಮಾರ್ತಾಂಡ ನೀನಹುದೊ
ಕುಂಡಲ ಕಿರಿಘಂಟೆ ಉಡಿಯಲಿಪೆಂಡೆ ನೂಪುರ ಕಾಲಲಂದಿಗೆತಂಡ
ತಂಡದಿ ಕೃಷ್ಣನಂಘ್ರಿಪುಂಡರೀಕಕೆ ಕೈಯ ಮುಗಿದ ||3||
*******

No comments:

Post a Comment