by ಶ್ಯಾಮಸುಂದರದಾಸರು
ಕಣ್ಣು ಎರಡು ಸಾಲದು ನಮ್ಮ
ಬೆಣ್ಣೆ ಮೆಲ್ಲುವ ಬಾಲಕೃಷ್ಣನ ನೋಡಲು ||ಪ||
ಗುಂಗುರು ಕೂದಲಿಗೆ ಸಿಕ್ಕಿಸಿದ ನವಿಲುಗರಿ
ಮುಂಗುರುಳಿನ ಕಾಂತಿ ಮುಖದ ಚೆಲುವ ರಾಶಿ
ಹೆಂಗಳೆಯರು ನಾಚಿ ಮೋಹಿಸುವ ರೀತಿ
ಹಿಂಗದೆ ನೋಡಲು ದೃಷ್ಟಿ ತಾಕುವ ಭೀತಿ ||೧||
ಹಣೆಯೊಳು ಒಪ್ಪುವ ಕಸ್ತೂರಿ ತಿಲಕ
ಕರ್ಣದೊಳಾಡುವ ಕುಂಡಲ ಝಳಕ
ವರ್ಣವರ್ಣದ ಪೀತಾಂಬರದುಡುಗೆಯ
ವರ್ಣಿಸಲಳವಲ್ಲ ಮನುಜ ಮಾತಿನಲಿ ||೨||
ಚಾರುಚರದಲಿ ಶೋಭಿಪ ನೂಪುರ
ಸಾರಭಕ್ತರ ಮನವ ಸೂರೆಗೊಂಬ ತೆರದಿ
ಮಾರಪಿತ ಗುರು ಶ್ಯಾಮಸುಂದರ ನಿನ್ನ
ಈ ರೂಪವ ಎನ್ನ ಮನದಲಿ ನಿಲಿಸೋ ||೩||
******
No comments:
Post a Comment