ರಾಗ : ಕಾಂಬೋಧಿ ತಾಳ : ಝ೦ಪೆ
ಆರಂಭದಲಿ ನಮಿಪೆ -
ಬಾಗಿ ಶಿರವ ।
ಹೇರಂಬ ನೀನೊಲಿದು -
ನೀಡೆಮಗೆ ವರವ ।। ಪಲ್ಲವಿ ।।
ದ್ವಿರದ ವದನನೆ ನಿರುತ ।
ದ್ವಿರದ ವಂದ್ಯನ ಮಹಿಮೆ ।
ಹರುಷದಿಂದಲಿ ।
ಕರ ಜಿಂಹೆಯೆರಡರಿಂದ ।।
ಒರೆದು ಪಾಡುವುದಕ್ಕೆ ।
ಬರುವ ವಿಘ್ನವ ತರಿದು ।
ಕರುಣದಿಂದಲಿ ಯೆನ್ನ ।
ಕರ ಪಿಡಿದು ಸಲಹೆಂದು ।। ಚರಣ ।।
ಕುಂಭಿಣಿಜೆ ಪರಿ ರಾಮ ।
ಜಂಭಾರಿ ಧರ್ಮಜರು ।
ಅಂಬಾರಾಧಿಪ । ರಕು ।
ತಾಂಬರನೆ ನಿನ್ನ ।।
ಸಂಭ್ರಮದಿ ಪೂಜಿಸಿದ -
ರೆಂಬ ವಾರುತಿ ಕೇಳಿ ।
ಹಂಬಲವ ಸಲಿಸೆಂದು ।
ನಂಬಿ ನಿನ್ನಡಿಗಳಿಗೆ ।। ಚರಣ ।।
ಸೋಮ ಶಾಪದ ವಿಜಿತ ।
ಕಾಮ ಕಾಮಿತ ದಾತ ।
ವಾಮದೇವ ತನಯ ।
ನೇಮದಿಂದ ।।
ಶ್ರೀ ಮನೋಹರನಾದ ।
ಶ್ಯಾಮಸುಂದರ ಸ್ವಾಮಿ ।
ನಾಮ ನೆನೆಯುವ ಭಾಗ್ಯ ।
ಪ್ರೇಮದಲಿ ಕೊಡುಯೆಂದು ।। ಚರಣ ।।
***
Aarambhadali namipe baagi shiravaa
herambha neenolidu needenage varavaa || pa ||
Dwiradavadanane niruta dwiradavadanana mahime
Harushadali kara jihwe eradarindaa
Baredu paaduvudakke baruva vignava taridu
Karunadimdali enna karapididu salahendu || 1 ||
Kumbhinijepatiraama-jambhaari-dharmajaru
Ambaraadhipa rakutaambharane ninna
Sambhramadi poojisidaremba vaaruti keli
Hambalava salisendu nambi ninnadigalige || 2 ||
Somashaapada vijitakaama kaamitadaata
Vaamadevana tanayaa nemadindaa
Shreemanoharanaada shyaamasumdaraswaami
naamaNeneyuva bhaagya premadali kodu endu || 3 |
***
pallavi
Arambadali namipe bAgishirava hEramba nInoLidu nIDenage varava
caraNam 1
dvirada vadanane dvirada varadana mahime haruSadali kara jihve eraDarinda
baredu pADuvudakke baruva vighnava taridu karuNadindali enna karapiDidu salahendu
caraNam 2
kumbiNijipatirAma jambAri dharmajaru ambarAdipa rakutAmbarane ninna
sambramadi pUjisidaremba vAruti kELi hambalava salisendu nambi ninnaDigaLige
caraNam 3
sOmashApada vijitakAma kAmitadAta vAmadEvana tanaya nEmadindA
shri manOharanAda shyAmasundarasvAmi nAmaneneyuva bhAgya premadali koDu endu
***
ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ
" ಆರಂಭದಲಿ ನಮಿಪೆ "
ಶ್ರೀ ವಿಘ್ನರಾಜನು ಶ್ರೀ ಹರಿಯ ವರ ಪ್ರಸಾದದಿಂದ ಆದಿ ಪೂಜಿತನು.
ದ್ವಿರದ ವದನನೆ = ಗಜಮುಖನೆ
ದ್ವಿರದ ವಂದ್ಯನೆ = ಶ್ರೀ ವಿಘ್ನರಾಜನಿಂದ ವಂದ್ಯನಾದ ಶ್ರೀ ವಿಶ್ವ ನಾಮಕ ಪರಮಾತ್ಮ
ಕುಂಭಿಣಿಜೆ = ಶ್ರೀ ಸೀತಾದೇವಿ
ಜಂಭಾರಿ = ಶ್ರೀ ಇಂದ್ರದೇವರು
ಅಂಬರಾಧಿಪ = ಆಕಾಶದಭಿಮಾನಿಯಾದ ಶ್ರೀ ಗಣಪತಿ
ವಿಜಿತ ಕಾಮ = ಕಾಮವನ್ನು ಗೆದ್ದವ ( ಜಿತೇಂದ್ರಿಯ )
****
ಆರಂಭದಲಿ ನಮಿಪೆ ಬಾಗಿ ಶಿರವ
ಹೇರಂಬ ನೀನೊಲಿದು ನೀಡೆನಗೆ ವರವ ||pa||
ದ್ವಿರದವದನನೆ ನಿರುತ ದ್ವಿರದವರದನ ಮಹಿಮೆ
ಹರುಷದಲಿ ಕರ ಜಿಹ್ವೆ ಎರಡರಿಂದ
ಬರೆದು ಪಾಡುವದಕ್ಕೆ ಬರುವ ವಿಷ್ನುವ ತರಿದ
ಕರುಣದಿಂದಲಿ ಎನ್ನ ಕರಪಿಡಿದು ಸಲಹೆಂದು ||1||
ಕುಂಭಿಣಿಜೆಪತಿರಾಮ-ಜಂಭಾರಿ-ಧರ್ಮಜರು
ಅಂಬರಾಧಿಪ ರಕುತಾಂಬರನೆ ನಿನ್ನ
ಸಂಭ್ರಮದಿ ಪೂಜಿಸಿದರೆಂಬ ವಾರುತಿ ಕೇಳಿ
ಹಂಬಲವ ಸಲಿಸೆಂದು ನಂಬಿ ನಿನ್ನಡಿಗಳಿಗೆ ||2||
ಸೋಮಶಾಪದ ವಿಜಿತಕಾಮ ಕಾಮಿತದಾತ
ವಾಮದೇವನ ತನಯ ನೇಮದಿಂದ
ಶ್ರೀಮನೋಹರನಾದ ಶಾಮಸುಂದರಸ್ವಾಮಿ
ನಾಮನೆನೆಯುವ ಭಾಗ್ಯ ಪ್ರೇಮದಲಿ ಕೊಡು ಎಂದು ||3||
***
ಆರಂಭದಲಿ ನಮಿಪೆ ಬಾಗಿ ಶಿರವ
ಹೇರಂಬ ನೀನೊಲಿದು ನೀಡೆನಗೆ – ವರವ ||pa||ದ್ವಿರದ ವದನನೆ ನಿರುತ | ದ್ವಿರದ ವರದನ ಮಹಿಮೆ
ಹರುಷದಲಿ ಕರಜಿಹ್ವೆ ಎರಡರಿಂದ
ಬರೆದು ಪಾಡುವದಕ್ಕೆ | ಬರುವ ವಿಷ್ನುನವ ತರಿದ
ಕರುಣದಿಂದಲಿ ಎನ್ನ ಕರಪಿಡಿದು ಸಲಹೆಂದು ||1||
ಕುಂಭಿಣಿಜೆ ಪತಿ ರಾಮ | ಜಂಭಾರಿ ಧರ್ಮಜರು
ಅಂಬರಾಧಿಪ ರಕುತಾಂಬರನೆ ನಿನ್ನ ||
ಸಂಭ್ರಮದಿ ಪೂಜಿಸಿದರೆಂಬವಾರುತಿ ಕೇಳಿ
ಹಂಬಲವ ಸಲಿಸೆಂದು | ನಂಬಿ ನಿನ್ನಡಿಗಳಿಗೆ||2||
ಸೋಮಶಾಪದ ವಿಜಿತ | ಕಾಮ ಕಾಮಿತ ದಾತ
ವಾಮ ದೇವನ ತನಯ ನೇಮದಿಂದ
ಶ್ರೀಮನೋಹರನಾಥ ಶಾಮಸುಂದರ ಸ್ವಾಮಿ ನಾಮ
ನೆನೆಯುವ ಭಾಗ್ಯ ಪ್ರೇಮದಲಿ ಕೊಡು ಎಂದು ||3||
**********
ಆರಂಭದಲಿ ನಮಿಪೆ ಬಾಗಿಶಿರವ
ಹೇರಂಬ ನೀನೊಲಿದು ನೀಡೆನಗೆ ವರವ
ದ್ವಿರದವದನನೆ ದ್ವಿರದವರದನ ಮಹಿಮೆ
ಹರುಷದಲಿ ಕರ ಜಿಹ್ವೆ ಎರಡರಿಂದ
ಬರೆದು ಪಾಡುವುದಕ್ಕೆ ಬರುವ ವಿಘ್ನವ ತರಿದು
ಕರುಣದಿಂದಲಿ ಎನ್ನ ಕರಪಿಡಿದು ಸಲಹೆಂದು
ಕುಂಬಿಣಿಜಿಪತಿರಾಮ -ಜಂಬಾರಿ ಧರ್ಮಜರು
ಅಂಬರಾದಿಪ ರಕುತಾಂಬರನೆ ನಿನ್ನ
ಸಂಬ್ರಮದಿ ಪೂಜಿಸಿದರೆಂಬ ವಾರುತಿ ಕೇಳಿ
ಹಂಬಲವ ಸಲಿಸೆಂದು ನಂಬಿ ನಿನ್ನಡಿಗಳಿಗೆ
ಸೋಮಶಾಪದ ವಿಜಿತಕಾಮ ಕಾಮಿತದಾತ
ವಾಮದೇವನ ತನಯ ನೇಮದಿಂದಾ
ಶ್ರಿಮನೊಹರನಾದ ಶ್ಯಾಮಸುಂದರಸ್ವಾಮಿ
ನಾಮನೆನೆಯುವ ಭಾಗ್ಯ ಪ್ರೆಮದಲಿ ಕೊಡು ಎಂದು
**********
No comments:
Post a Comment