Wednesday, 11 December 2019

ಒಲಿದೆ ಯಾತಕಮ್ಮಾ ಲಕ್ಷುಮೀ ವಾಸುದೇವಗೆ ankita rangavittala

ಶಂಕರಾಭರಣ ರಾಗ, ಆದಿತಾಳ

ಒಲಿದೆ ಯಾತಕಮ್ಮಾ ಲಕ್ಷುಮೀ ವಾಸುದೇವಗೆ ||ಪ||

ಶುದ್ಧ ನೀಲವರ್ಣದ ಮೈಯ ಕಪ್ಪಿನವನಿಗೆ ಹ್ಯಾಗೆ ||ಅ.ಪ||

ಹುಟ್ಟಿದ ಮನೆಗಳ ಬಿಟ್ಟು - ಕಳ್ಳ
ದಿಟ್ಟತನದಿ ಗೋಕುಲದಲ್ಲಿ ಬೆಳೆದ
ಚಟ್ಟಿ ಸಹಿತ ಹಾಲು ಕುಡಿದ-ಅಲ್ಲಿ
ದಿಟ್ಟ ಕಾಳಿಂಗನ ಹೆಡೆಯ ತುಳಿದವನಿಗೆ ||೧||

ಗೊಲ್ಲರ ಮನೆಗಳ ಪೊಕ್ಕು - ಅಲ್ಲಿ
ಗುಲ್ಲು ಮಾಡದೆ ಮೊಸರೆಲ್ಲ ಸವಿದ
ಮೆಲ್ಲನೆ ಸವಿಮಾತನಾಡಿ - ಅಲ್ಲಿ
ಎಲ್ಲ ಸಖಿಯರ ಅಭಿಮಾನಗೇಡಿಗೆ ||೨||

ಮಾವನ ಮರ್ದಿಸಿದವಗೆ-ಅಲ್ಲಿ
ಸೋಳ ಸಾಸಿರ ಗೋವೇರಿಗೆ ಮದುವೆ ಆದವಗೆ
ಹಾವಿನ ಮ್ಯಾಲೊರಗಿದವಗೆ
ಕಾವೇರಿ ತೀರದ ರಂಗವಿಠಲಗೆ ||೩||
*****

ಒಲಿದೆ ಯಾತಕಮ್ಮಾ ಲಕುಮಿವಾಸುದೇವಗೆ ಪ

ಶುದ್ಧ ನೀಲವರ್ಣದ ಮೈಯಕಪ್ಪಿನವನಿಗೆ ಹ್ಯಾಗೆ ಅ.ಪ.

ಹುಟ್ಟಿದ ಮನೆಗಳ ಬಿಟ್ಟು ಕಳ್ಳ-ದಿಟ್ಟತನದಿ ಗೋಕುಲದಲ್ಲಿ ಬೆಳೆದ ಚಟ್ಟಿ ಸಹಿತ ಹಾಲು ಕುಡಿದ- ಅಲ್ಲಿದಿಟ್ಟ ಕಾಳಿಂಗನ ಹೆಡೆಯ ತುಳಿದವನಿಗೆ 1

ಗೊಲ್ಲರ ಮನೆಗಳ ಪೊಕ್ಕು- ಅಲ್ಲಿಗುಲ್ಲು ಮಾಡದೆ ಮೊಸರೆಲ್ಲ ಸವಿದಮೆಲ್ಲನೆ ಸವಿಮಾತನಾಡಿ-ಅಲ್ಲಿಎಲ್ಲ ಸಖಿಯರ ಅಭಿಮಾನಗೇಡಿಗೆ 2

ಮಾವನ ಮರ್ದಿಸಿದವಗೆ -ಅಲ್ಲಿಸೋಳ ಸಾಸಿರ ಗೋಪೇಯರ ಮದುವೆ ಆದವಗೆಹಾವಿನ ಮ್ಯಾಲೊರಗಿದವಗೆಕಾವೇರಿ ತೀರದ ರಂಗವಿಠಲಗೆ 3
*****

No comments:

Post a Comment