ಇಟ್ಠಾಂಗೆ ಇರುವೆನೋ ಹರಿಯೇ ಎನ್ನ ದೊರೆಯೇ || ಪ ||
ಸೃಷ್ಟಿವಂದಿತ ಪಾದಪದುಮ ಶ್ರೀಹರಿಯೇ || ಅ.ಪ ||
ಸಣ್ಣ ಶಾಲ್ಯೋದನ ಬೆಣ್ಣೆ ಕಾಸಿದ ತುಪ್ಪ
ಚಿನ್ನದ ಹರಿವಾಣದಲಿ ಭೋಜನ
ಘನ್ನಮಹಿಮ ನಿನ್ನ ಕರುಣ ತಪ್ಪಿದ ಮ್ಯಾಲೆ ಕ-
ದನ್ನ ಕಾಣದೆ ಬಾಯ್ಬಿಡಿಸುವಿ ಹರಿಯೇ || ೧ ||
ಕಂಪಿಲಿ ಪೊಳೆವ ಪೀತಾಂಬರ ಉಡಿಸುವಿ
ಸೊಂಪಿನಂಚಿನ ಶಾಲು ಹೊದಿಸುವಿಯೋ
ಕಪಿಲಹರೇ ನಿನ್ನ ಕೃಪೆಯು ತಪ್ಪಿದ ಮ್ಯಾಲೆ
ಕಪರ್ದಕ ಕೌಪೀನವು ದೊರೆಯದೊ ಹರಿಯೇ || ೨ ||
ಚಂದ್ರಶಾಲೆಲಿ ಚಂದ್ರಕಿರಣದಂತೊಪ್ಪುವ
ಚಂದದ ಮಂಚದೊಳ್ಮಲಗಿಸುವಿ
ಮಂದರೋದ್ಧರ ನಿನ್ನ ಮಮತೆ ತಪ್ಪಲು ಧರ್ಮ-
ಮಂದಿರದೊಳು ತೋಳ್ತಲೆಗಿಂಬು ಹರಿಯೇ || ೩ ||
ನರಯಾನದೊಳು ಕ್ಷಣ ನರವರನೆನಿಸುವಿ
ವರ ಛತ್ರ ಚಾಮರ ಹಾಕಿಸುವಿ
ಕರುಣಾನಿಧೇ ನಿನ್ನ ಕರುಣ ತಪ್ಪಿದ ಮ್ಯಾಲೆ
ಚರಣರಕ್ಷೆಯು ದೊರೆಯದು ಶ್ರೀಹರಿಯೇ || ೪ ||
ಗಂಗಾಜನಕ ಪಾಂಡುರಂಗ ನಿನ್ನಯ ಭಕ್ತರ
ಸಂಗವಿರಲಿ ದುಷ್ಟಸಂಗ ಬ್ಯಾಡ
ಅಂಗನೆಯರ ಕೂಡಿ ಅನಂಗಬಾಣಕೆ ಸಿಲುಕಿ
ಭಂಗವ ಪಡಲಾರೆ ಶ್ರೀರಂಗವಿಠಲ ಹರಿಯೇ || ೫ ||
***
ಇಟ್ಹಾಂಗೆ ಇರುವೆನೊ ಹರಿಯೇ ಎನ್ನ ದೊರೆಯೇ ||ಪ||
ಸೃಷ್ಟಿವಂದಿತ ಪಾದಪದುಮ ಶ್ರೀಹರಿಯೇ ||ಅ.ಪ||
ಸಣ್ಣ ಶಾಲ್ಯೋದನ್ನ ಬೆಣ್ಣೆ ಕಾಸಿದ ತುಪ್ಪ
ಚಿನ್ನದ ಹರಿವಾಣದಲಿ ಭೋಜನ
ಘನ್ನಮಹಿಮ ನಿನ್ನ ಕರುಣ ತಪ್ಪಿದ ಮ್ಯಾಲೆ
ಕದನ್ನ ಕಾಣದೆ ಬಾಯ್ಬಿಡಿಸುವಿ ಹರಿಯೇ ||೧||
ಕೆಂಪಿಲಿ ಪೊಳೆವ ಪೀತಾಂಬರ ಉಡಿಸುವಿ
ಸೊಂಪಿನಂಚಿನ ಶಾಲು ಹೊದಿಸುವಿಯೋ
ಕಪಿಲಹರೇ ನಿನ್ನ ಕೃಪೆಯು ತಪ್ಪಿದ ಮ್ಯಾಲೆ
ಕಪರ್ದಕ ಕೌಪೀನವು ದೊರೆಯದೊ ಹರಿಯೇ ||೨||
ಗಂಗಾಜನಕ ಪಾಂಡುರಂಗ ನಿನ್ನಯ ಭಕ್ತರ
ಸಂಗವಿರಲಿ ದುಷ್ಟರ ಸಂಗ ಬ್ಯಾಡ
ಅಂಗನೆಯರ ಕೂಡಿ ಅನಂಗಬಾಣಕೆ ಸಿಲುಕಿ
ಭಂಗವ ಪಡಲಾರೆ ಶ್ರೀರಂಗವಿಠಲ ಹರಿಯೇ ||೩||
*******
iThAMge iruveno hariyE enna doreyE ||pa||
sRuShTivaMdita pAdapaduma SrIhariyE ||a.pa||
saNNa SAlyOdanna beNNe kAsida tuppa
cinnada harivANadali BOjana
Gannamahima ninna karuNa tappida myAle
kadanna kANade bAybiDisuvi hariyE ||1||
keMpili poLeva pItAMbara uDisuvi
soMpinaMcina SAlu hodisuviyO
kapilaharE ninna kRupeyu tappida myAle
kapardaka kaupInavu doreyado hariyE ||2||
gaMgAjanaka pAMDuraMga ninnaya Baktara
saMgavirali duShTara saMga byADa
aMganeyara kUDi anaMgabANake siluki
BaMgava paDalAre SrIraMgaviThala hariyE ||3||
***
It haange iruvenu hariye enna doreye || pa ||
Spashtarondita paada paduma shree hariye || pa. A. ||
Sanna shaalyodana benne kaasida tuppa | cinnada harivaanadali bhojana ||
ghanna mahima ninna karune tappida mele | kadannakke baay baay bidisuvi hariye || 1 ||
Kempili holeva peetaambaranudisuvi | sompinancina shaalu hodisuviyo |
kapila hariye ninna karune tappida mele | he pinaaki vandyane koupeena doreyado || 2 ||
Chandra shaale chandra kiranadinmdoppuva | chandada manchadol malagisuvi || m
andaroddhara ninna mamate tappalu | dharmamandiradolu taledimbu maadisuvi || 3 ||
Narayaanadolu kshana narashreshtha nenisuvi | vara Chatra chaamarava haakisuvi ||
karunaanidhe ninna karune tappida mele | charanaabharana paadaraksheyoo dorakado || 4 ||
Gangaa janaka panduranga ninna bhaktara | sangavirali dushtara sanga beda ||
anganeyara koodi ananga baanake siluki | bhanga batteno kaayo rangaviththalareya ||
**
ರಾಗ : ಸಾವೇರಿ ತಾಳ : ಆದಿ (raga, taala may differ in audio)
ಶ್ರೀ ಶ್ರೀಪಾದರಾಜರ ಕೃತಿ
ಇಟ್ಹಾಂಗೆ ಇರುವೆನೋ ಹರಿಯೇ ಎನ್ನ ದೊರೆಯೇ
ಸೃಷ್ಟಿವಂದಿತ ಪಾದ ಪದುಮ ಶ್ರೀ ಹರಿಯೇ /
ಈ ಪಲ್ಲವಿಯಲ್ಲಿ ಪರಮಾತ್ಮನ ಸ್ವತಂತ್ರತ್ವ ಮತ್ತು ಜಗತ್ತಿನ ಸತ್ಯತೆ ಹಾಗೂ ಅದರ ಅಧೀನತೆ ಒಂದೇ ಒಂದು ಪದ ಸೃಷ್ಟಿ ವಂದಿತ ಎನ್ನುವುದರಿಂದ ಸ್ಪಷ್ಟ ವಾಗುತ್ತದೆ. ನಮಗೆಲ್ಲ ದೊರೆಯಾದ ಭಗವಂತ ಹೇಗೆ ಇಡುವನೋ ಹಾಗೇ ನಾವು ಇರಲೇಬೇಕು. ಆಕಸ್ಮಿಕವಾಗಿ ಹುಟ್ಟಿ ಬಂದ ಮೇಲೆ ಸಾವು ಎಂಬ ಖಚಿತತೆಯನ್ನು ಮುಟ್ಟುವವರೆಗೆ ಭವಂತನ ಅಧೀನತೆಯ ಅರಿವು ನಮಗಿರಬೇಕು. ಇನ್ನು ನುಡಿಗಳಲ್ಲಿ ವಾಸ್ತವ ಸಂಗತಿ ಗಳೊಂದಿಗೆ ಪರಮಾತ್ಮನ ನಿಯಂತ್ರಣವನ್ನು ಮತ್ತು ಆತನ ನಿಯಂತ್ರಣದಲ್ಲೇ ಸಾಗುವ ಬದುಕನ್ನು ಸಾಕಾರ ಗೊಳಿಸುತ್ತಾರೆ.
ಪರಮಾತ್ಮನ ಕರುಣೆ ಇದ್ದಾಗ ಬಂಗಾರದ ತಟ್ಟೆಯಲ್ಲಿ ಸಣ್ಣಕ್ಕಿ ಅನ್ನ, ಬೆಣ್ಣೆ ಕಾಸಿದ ತುಪ್ಪ ಇಟ್ಟು ಭೋಜನ ನೀಡುವನು, ಕರುಣೆ ತಪ್ಪಿದರೆ ತಂಗಳನ್ನವೂ ದೊರಕದು ನಮಗೆ ಎನ್ನುತ್ತಾರೆ ದಾಸರು. ಇದು ಎಲ್ಲಾ ಕಾಲಕ್ಕೂ ಎಲ್ಲಾ ಮತಕ್ಕೂ ಅನುಭವಕ್ಕೆ ಬಂದಿರುವ ಮಾತು.
ಅದೇರೀತಿ ಎರಡನೇ ನುಡಿಯಲ್ಲಿ, ಪರಮಾತ್ಮನ ಕೃಪೆ ಇದ್ದರೆ ಹೊಳೆಹೊಳೆಯುವ ಪೀತಾಂಬರ ಉಡಿಸಿ ಮೇಲೆ ಸೊಂಪಿನ ಶಾಲು ಹೊದಿಸುವನು, ಆತನ ಕೃಪೆ ತಪ್ಪಿದರೆ ಲಂಗೋಟಿಯು ಕೂಡ ದೊರಕದಂತೆ ಮಾಡುವನು. ಪರಮಾತ್ಮನ ಕೃಪೆ ಇದ್ದರೆ ಮಾತ್ರ ಸುಖದ ಅನುಭವ, ತನ್ನ ಪ್ರಯತ್ನದಿಂದಲೇ ಎಲ್ಲವನ್ನು ಪಡೆಯುತ್ತೇನೆ ಎಂಬುದು ಅಸಾಧ್ಯ ಎಂಬುವುದನ್ನು ಶ್ರೀಪಾದರಾಜರು ಸ್ಪಷ್ಟ ಪಡಿಸುತ್ತಾರೆ. ಹೀಗೆ ಜೀವನದಲ್ಲಿ ಸುಖ, ಅಧಿಕಾರ ಎಲ್ಲವೂ ಆತನ ಕರುಣೆ ಇದ್ದರೆ ಮಾತ್ರ ಸಾಧ್ಯ ಎಲ್ಲವೂ ಆತನ ಆಧೀನ. ಇನ್ನು ಕೊನೆಯ ನುಡಿಯಲ್ಲಿ ಭಗವಂತನ ಕರುಣೆ ಪಡೆಯಬೇಕೆಂದರೆ ದುಷ್ಟರ ಸಂಗ, ಪರನಾರಿಯರ ಸಂಗ ಬೇಡ ಎನ್ನುತ್ತಾರೆ ದಾಸರು. ಅರಿಷಡ್ವರ್ಗಗಳನ್ನು ತ್ಯಜಿಸಿ ಸತ್ಸಂಗದಿಂದ ಹರಿಯ ಭಜಿಸಿ ಭಕ್ತಿಪೂರ್ವಕವಾಗಿ ಗಂಗಾ ಜನಕನಾದ ಪಾಂಡುರಂಗ ವಿಠಲನ ಭಜಕರ ಸಹವಾಸ ದಿಂದ ರಂಗವಿಠಲನ ಕರುಣೆ ಸಂಪಾದಿಸು ಎಂದು ಶ್ರೀ ಶ್ರೀ ಪಾದರಾಜರು ಸಕಲರನ್ನು ಉದ್ದೇಶಿಸಿ ಉಪದೇಶಿಸಿರುವರು.
ಶ್ರೀ ಶ್ರೀ ಪಾದರಾಜರ ಮಹಿಮೆ ಅಪಾರ ಮಹಿಮೆ ಸಾಲದೆ ಇಷ್ಟೇ ಮಹಿಮೆ ಸಾಲದೆ, ಅಹಿಶಯನನ ಒಲುಮೆಯಿಂದ ಮಹಿಯೊಳೊಮ್ಮೆ ಶ್ರೀಪಾದರಾಜರ, ಎಂದು ತಮ್ಮ ಶಿಷ್ಯರಾದ ಶ್ರೀ ವ್ಯಾಸರಾಯರಿಂದ ಸ್ತುತಿಸಿಕೊಂಡವರು.
ಶ್ರೀ ಶ್ರೀಪಾದರಾಜ ಗುರುವಂತರ್ಗತ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣ ನಮಸ್ತು.
****
ರಾಗ - ಆನಂದಭೈರವಿ
ತಾಳ - ಅಟ್ಟತಾಳ
ಇಟ್ಟಾಂಗೆ ಇರುವೆನು ಹರಿಯೆ ಎನ್ನ ಧೋರೆಯೇ ll ಪ ll
ಸೃಷ್ಠಿವಂದಿತ ಪಾದ ಪದುಮ ಶ್ರೀಹರಿಯೇ ll ಅ ಪ ll
ಸಣ್ಣ ಶ್ಯಾಲೋದನ್ನ ಬೆಣ್ಣೆ ಕಾಸಿದ ತುಪ್ಪ l
ಚಿನ್ನದ ಹರಿವಾಣದಲಿ ಭೋಜನ l
ಘಣ್ಣಮಹಿಮ ನಿನ್ನ ಕರುಣ ತಪ್ಪಲು ಕ l
ದನ್ನಕ್ಕೆ ಬಾಯ ಬಿಡಿಸುವೆಯೆಲ್ಲೋ ಸ್ವಾಮೀ l
ಕೆಂಪಿಲಿ ಪೊಳೆವ ಪೀತಾಂಬಾರನುಡಿಸುವಿ l
ಸೊಂಪಿನಂಚಿನ ಶಾಲು ಹೊಡಿಸುವಿಯೋ ಕೃಷ್ಣ l
ಕಪಿಲ ಹರೇ ನಿನ್ನ ಕೃಪೆಯು ತಪ್ಪಿದ ಮೇಲೆ l
ಹೇ ಪಿನಾಕಿ ವಂದ್ಯ ಕೌಪೀನ ದೊರೆಯದೊ ll 2 ll
ಚಂದ್ರಶಾಲೆ ಚಂದ್ರ ಕಿರಣದಂತೊಪ್ಪುವ l
ಚಂದದ ಮಂಚದೊಲ್ಮಲಗಿಸುವಿ l
ಮಂದರೊದ್ಧರ ನಿನ್ನ ಮಮತೆ ತಪ್ಪಿದ ಮೇಲೆ l
ಮಂದಿರದೊಳು ತೋಳ್ತಲೆದಿಂಬು ಮಾಡಿಸುವಿ ll 3 ll
ನರಯಾನದೊಳು ಕ್ಷಣ ನರವರನೆನಿಸುವಿ l
ವರಛತ್ರ ಛಾಮರ ಹಾಕಿಸುವಿ l
ಕರುಣಾನಿಧೇ ನಿನ್ನ ಕರುಣ ತಪ್ಪಿದ ಮೇಲೆ l
ಚರಣ ಭರಣ ಪಾದರಕ್ಷೆಯು ದೊರೆಯದೊ ll 4 ll
ಗಂಗಾಜನಕ ಪಾಂಡುರಂಗ ನಿನ್ನ ಭಕುತರ l
ಸಂಗವಿರಲಿ ದುಷ್ಟ ಸಂಗ ಬೇಡಾ ಬೇಡಾ l
ಅಂಗನೆಯರ ಕೂಡಿ ಅನಂಗ ಬಾಣಕೆ ಸಿಲುಕಿ l
ಪಡಲಾರೆ ರಂಗವಿಠಲ ಕಾಯೋ ll 5 ll
*****
No comments:
Post a Comment