ರಾಗ ಆರಭಿ ಖಂಡಛಾಪುತಾಳ
Audio by Mrs. Nandini Sripad
ಬಾರೋ ಮನೆಗೆ ಗೋವಿಂದ ನಿನ್ನಂಘ್ರಿ ಕಮಲವ
ತೋರೋ ಎನಗೆ ಮುಕುಂದ ನಲಿದಾಡು ಮನದಲಿ
ಮಾರಪಿತನೆ ಆನಂದ ನಂದನಕಂದ ||ಪ||
ಚಾರುತರ ಶರೀರ ಕರುಣಾ
ವಾರಿನಿಧಿ ಭವ ಘೋರ ನಾಶನ
ವಾರಿಜಾಸನ ವಂದ್ಯ ನೀರಜ
ಸಾರ ಸದ್ಗುಣ ಹೇ ರಮಾಪತೆ ||ಅ.ಪ.||
ನೋಡೋ ದಯದಿಂದೆನ್ನ-ಕರಪದುಮ ಶಿರದಲಿ
ನೀಡೋ ಭಕ್ತಪ್ರಸನ್ನ-ನಲಿದಾಡೊ ಮನದಲಿ
ಬೇಡಿಕೊಂಬೆನೊ ನಿನ್ನ-ಆನಂದ ಘನ್ನ ॥
ಮಾಡದಿರು ಅನುಮಾನವನು ಕೊಂ -
ಡಾಡುವೆನು ತವ ಪಾದಮಹಿಮೆಗಳನು
ಜೋಡಿಸುವೆ ಕರಗಳನು ಚರಣಕೆ
ಕೂಡಿಸೊ ತವ ದಾಸಜನರೊಳು ||1||
ಹೇಸಿ ವಿಷಯಂಗಳಲ್ಲಿ-ತೊಳಲ್ಯಾಡಿ ನಾ ಬಲು
ಕ್ಲೇಶ ಪಡುವುದು ಬಲ್ಲಿ-ಘನಯುವತಿಯರ ಸುಖ
ಲೇಸು ಎಂಬುದನ್ನು ಕೊಲ್ಲಿ-ಆಸೆ ಬಿಡಿಸಿಲ್ಲಿ ॥
ಏಸು ಜನುಮದ ದೋಷದಿಂದಲಿ
ಈಸುವೆನು ಇದರೊಳಗೆ-ಇಂದಿಗೆ
ಮೋಸವಾಯಿತು ಆದುದಾಗಲಿ
ಶ್ರೀಶ ನೀ ಕೈಪಿಡಿದು ರಕ್ಷಿಸು ||2||
ನೀನೆ ಗತಿಯೆನಗಿಂದು ಉದ್ಧರಿಸೊ ಬ್ಯಾಗನೆ
ದೀನ ಜನರಿಗೆ ಬಂಧು-ನಾ ನಿನ್ನ ಸೇವಕ
ಶ್ರೀನಿವಾಸ ಎಂದೆಂದು-ಕಾರುಣ್ಯ ಸಿಂಧು ॥
ಪ್ರಾಣಪತಿ ಹೃದಯಾಬ್ಜಮಂಟಪ-
ಸ್ಥಾನದೊಳಗಭಿವ್ಯಾಪ್ತ ಚಿನುಮಯ
ಧ್ಯಾನಗೋಚರನಾಗಿ ಕಣ್ಣಿಗೆ
ಕಾಣಿಸುತ ಶ್ರೀರಂಗವಿಠ್ಠಲ ||3||
***
bAro manege gOvinda. rAgA: madhyamAvati. aTa tALA. Shripadaraya.
P: bAro manege gOvinda ninnanghri kamalava tOrO enage mukunda
nalidADu manadali mArapita Ananda nandana kanda
A: cArutara sharIra karuNA vArinidhi bhavaghOra nAshana
vArijAsana vandya nIraja sArasadguNa hE ramApatE
C1: nODO dayadindenna karapaduma shiradali nIDO bhaktaprasanna nalidADo manadali
bEDikombeno ninna Ananda ghanna mADadiru anumAnava koNDADuvenu tava pAda mahimegaLanu
jODisuve karagaLanu caraNake kUDiso tava dAsajanaroLu
2:hEsi viShayagaLalli toLalyADi nA balu klEsha paDuvudu balli ghanayuvatiyara sukha
lEsu embudanu kolli Ase biDisilli Esu janumada dOSadindali
Isuvenu idaroLage indige mOsavAyitu AdudAgali shrIsha nI kaipiDidu rakSisu
3: nIne gatiyenagindu uddhariso bEgane dInajanarige bandhu nA ninna sEvaka
shrInivaasa endendu kAruNyasindhu prANapati hrudayAbjamaNTapa
sthAnadoLagabhi vyApta cinmaya dhyAna gOcaranAgi kaNNige kANisuve shrIrangaviThala
***
ರಾಗ: ಮಧ್ಯಮಾವತಿ (ಸಾರಂಗ)
ತಾಳ: ಆಟ (ದೀಪಚಂದಿ)
ಬಾರೊ ಮನೆಗೆ ಗೋವಿಂದ – ನಿನ್ನಂಘ್ರಿಕಮಲವ |
ತೋರೊ ಎನಗೆ ಮುಕುಂದ ನಲಿದಾಡು ಮನದಲಿ ||
ಮಾರಪಿತ ಆನಂದ ನಂದನ – ಕಂದ ||ಪ||
ಚಾರುತರ ಶರೀರ ಕರುಣಾ – |
ವಾರಿನಿಧಿ ಭವಘೋರನಾಶನ ||
ವಾರಿಜಾಸನವಂದ್ಯ ನಿರಜ |
ಸಾರಸದ್ಗುಣ ಹೇ ರಮಾಪತೇ ||ಅ ಪ||
ನೋಡೋ ದಯದಿಂದೆನ್ನ – ಕರಪದುಮ ಶಿರದಲಿ |
ನೀಡೋ ಭಕ್ತಪ್ರಸನ್ನ ನಲಿದಾಡೊ ಮನದಲಿ |
ಬೇಡಿಕೊಂಬೆನೊ ನಿನ್ನ ಆನಂದ ಘನ್ನ |
ಮಾಡದಿರು ಅನುಮಾನವ – ಕೊಂ – ||
ಡಾಡುವೆನು ತವ ಪಾದಮಹಿಮೆಗಳನು |
ಜೋಡಿಸುವೆ ಕರಗಳನು ಚರಣಕೆ||
ಕೂಡಿಸೊ ತವ ದಾಸಜನರೊಳು ||೧||
ಹೇಸಿ ವಿಷಯಗಳಲ್ಲಿ – ತೊಳಲ್ಯಾಡಿ ನಾ ಬಲು |
ಕ್ಲೇಶ ಪಡುವುದು ಬಲ್ಲಿ ಘನಯುವತಿಯರ ಸುಖ ||
ಲೇಸು ಎಂಬುದನು ಕೊಲ್ಲಿ ಆಸೆ ಬಿಡಿಸಿಲ್ಲಿ |
ಏಸು ಜನುಮದ ದೋಷದಿಂದಲಿ |
ಈಸುವೆನು ಇದರೊಳಗೆ ಇಂದಿಗೆ ||
ಮೋಸವಾಯಿತು ಆದುದಾಗಲಿ |
ಶ್ರೀಶ ನೀ ಕೈಪಿಡಿದು ರಕ್ಷಿಸು ||೨||
ನೀನೆ ಗತಿಯೆನಗಿಂದು – ಉದ್ಧರಿಸೊ ಬೇಗನೆ |
ದೀನಜನರಿಗೆ ಬಂಧು – ನಾ ನಿನ್ನ ಸೇವಕ |
ಶ್ರೀನಿವಾಸ ಎಂದೆಂದು – ಕಾರುಣ್ಯಸಿಂಧು |
ಪ್ರಾಣಪತಿ ಹೃದಯಾಬ್ಜಮಂಟಪ ||
ಸ್ಥಾನದೊಳಗಭಿವ್ಯಾಪ್ತ ಚಿನ್ಮಯ |
ಧ್ಯಾನಗೋಚರನಾಗಿ ಕಣ್ಣಿಗೆ ||
ಕಾಣಿಸುವೆ ಶ್ರೀರಂಗವಿಠಲ ||೩||
***
Baaro manege govinda | ninnanghri kamalava toro enage mukunda |
nalidaado manadali maarapita aananda | aananda kanda || pa ||
Chaarutara shaareera karunaa vaarinidhi bhava ghora naashana |
vaarijaasana vandya nirjara saara sadguna he ramaapate || a. Pa. ||
Nodo dayadimda enna karapaduma shiradali needu bhakta prasanna |
nalidaadu manadali bedikombuvenu ninna aananda ghanna ||
maadadiru anumaanavanu kom- | daaduvenu tava mahimegalanu |
jodisuve karagalanu caranake | koodi sotava daasa janarolu || 1 ||
Hesi vishayagalalli | tolalaadi naa balu | kleshapaduvadu balli |
dhana yuvatigala sukha leshavembuvadu kolli | aase bidisilli ||
Esu janmada doshadindali eesuvenu idarolage indige | mosavaayitu aadudaagali |
shreesha nee kaipididu rakshisu || 2 ||
Neene gatiyo enagindu | uddhariso devane, deena janarige bandhu |
naa ninna sevaka shreenivaasaa endendu kaarunyasindhu ||
praanapati hrudayaabja mantapa | sthaanadolagabhi vyaapta cinumaya |
dhyaana gocaranaagu kannili | kaanuvenu shreerangaviththala || 3 ||
*******
ಶ್ರೀ ಶ್ರೀಪಾದರಾಜರ ಕೃತಿ
ರಾಗ ಆರಭಿ ಖಂಡಛಾಪುತಾಳ
ಬಾರೋ ಮನೆಗೆ ಗೋವಿಂದ । ನಿನ್ನಂಘ್ರಿ ಕಮಲವ ।
ತೋರೋ ಎನಗೆ ಮುಕುಂದ । ನಲಿದಾಡು ಮನದಲಿ ।
ಮಾರಪಿತ ಆನಂದ ನಂದನಕಂದ ॥ ಪ ॥
ಚಾರುತರ ಶರೀರ ಕರುಣಾ ।
ವಾರಿನಿಧಿ ಭವ ಘೋರನಾಶನ ।
ವಾರಿಜಾಸನ ವಂದ್ಯ ನೀರಜ ।
ಸಾರಸದ್ಗುಣ ಹೇ ರಮಾಪತೆ ॥ ಅ ಪ ॥
ನೋಡು ದಯದಿಂದೆನ್ನ । ಕರಪದುಮ ಶಿರದಲಿ ।
ನೀಡು ಭಕ್ತಪ್ರಸನ್ನ । ನಲಿದಾಡು ಮನದಲಿ ।
ಬೇಡಿಕೊಂಬುವೆನೊ ನಿನ್ನ । ಆನಂದ ಘನ್ನ ॥
ಮಾಡದಿರು ಅನುಮಾನವನು ಕೊಂ - ।
ಡಾಡುವೆನು ತವ ಮಹಿಮೆಗಳನು ।
ಜೋಡಿಸುವೆ ಕರಗಳನು ಚರಣಕೆ ।
ಕೂಡಿಸೋ ತವ ದಾಸಜನರೊಳು ॥ 1 ॥
ಹೇಸಿ ವಿಷಯಗಳಲ್ಲಿ । ತೊಳಲಾಡಿ ನಾ ಬಲು ।
ಕ್ಲೇಶ ಪಡುವುದು ಬಲ್ಲಿ । ಧನ ಯುವತಿಗಳ ಸುಖ ।
ಲೇಸು ಎಂಬುವದು ಕೊಲ್ಲಿ । ಆಸೆ ಬಿಡಿಸಿಲ್ಲಿ ॥
ಏಸು ಜನ್ಮದ ದೋಷದಿಂದಲಿ ।
ಈಸುವೆನು ಇದರೊಳಗೆ ಇಂದಿಗೆ ।
ಮೋಸವಾಯಿತು ಆದುದಾಗಲಿ ।
ಶ್ರೀಶ ನೀ ಕೈಪಿಡಿದು ರಕ್ಷಿಸು ॥ 2 ॥
ನೀನೆ ಗತಿಯು ಎನಗಿಂದು । ಉದ್ಧರಿಸು ಬೇಗನೆ ।
ದೀನ ಜನರಿಗೆ ಬಂಧೋ । ನಾ ನಿನ್ನ ಸೇವಕ ।
ಶ್ರೀನಿವಾಸ ಎಂದೆಂದೂ ।ಕಾರುಣ್ಯ ಸಿಂಧೋ ॥
ಪ್ರಾಣಪತಿ ಹೃದಯಾಬ್ಜಮಂಟಪ ।
ಸ್ಥಾನದೊಳಗಭಿವ್ಯಾಪ್ತ ಚಿನುಮಯ ।
ಧ್ಯಾನಗೋಚರನಾಗಿ ಕಣ್ಣಿಗೆ ।
ಕಾಣಿಸುತ ಶ್ರೀರಂಗವಿಠ್ಠಲ ॥ 3 ॥
**********
No comments:
Post a Comment