ಜೋಗಿ ಬಂದನೋಗೋವಿಂದಾ | ನಮ್ಮ |
ಬಾಗಿಲಿಗೆ ನಡೆತಂದಾ ||
ಬೇಗನೇ ಪವಡಿಸು ಕಂದಾ | ನಾನು |
ಜೋಗುಳಪಾಡುವೆ ಛಂದಾ ||
ಗೋಗಮನನಾಗಿ ಶ್ರೀ ಗಿರಿಜೆಯ ಕೂಡಿ |
ಯೋಗಿಗಳರಸನು ಝಗ ಝಗಿಸುವ ಪ
ಜಡೆಯಲಿಗಂಗೆಯಧರಿಸಿ ಮುಂ |
ಗುಡಿಯಲಿ ಚಂದ್ರನನಿಲಿಸಿ |
ಫಣಿ ಕುಂಡಲ ವಿರಿಸಿ|
ಬಿಡದೆ ವಿಷವನುಂಡು ಕಡುಗಪ್ಪುಗೋರಳಲಿ |
ಒಡನೆರುಂಡಮಾಲೆಯ ಗಡಬಡಿಸುವ 1
ಇಟ್ಟವಿಭೂತಿಯತನುವಾ | ಶಿವ |
ತೊಟ್ಟರುದ್ರಾಕ್ಷದಿ ಮೆರೆವಾ |
ದುಟ್ಟಿಹಹುಲಿಚರ್ಮಾಂಬರವಾ |
ನೆಟ್ಟನೆ ಡವರವ | ಮುಟ್ಟಿ | ನುಡಿಸುತಲಿ |
ಛಟ ಫಟ ಧ್ವನಿಯಾರ್ಭಟದ ವೈರಾಗಿ 2
ಶ್ರೀರಾಮನಾಮವ ಒಲಿದು ತಾನು ಕರದಿಕಪಾಲವ ಪಿಡಿದು |
ಧರೆಯೊಳು ಭಿಕ್ಷೆಯ ನೇವದಿಂದ ಹರ ತಿರುಗುವ cccc ಸಿಂಧು |
ಗುರು ಮಹಿಪತಿ ಪ್ರಭು ಕರನಾಟಕದಲಿ ಅವತರಿಸಿದ ಗೋಕುಲದ ಶಿರಿನೋಡಲಾಗಿ 3
*********
ಜೋಗಿ ಬಂದನೋಗೋವಿಂದಾ | ನಮ್ಮ | ಬಾಗಿಲಿಗೆ ನಡೆತಂದಾ ||
ReplyDeleteಬೇಗನೇ ಪವಡಿಸು ಕಂದಾ | ನಾ
ಜೋಗುಳಪಾಡುವೆ ಛಂದಾ ||
ಗೋಗಮನನಾಗಿ ಶ್ರೀ ಗಿರಿಜೆಯ ಕೂಡಿ | ಯೋಗಿಗಳರಸನು ಝಗ ಝಗಿಸುವ ॥ಪ॥
ಜಡೆಯಲಿ ಗಂಗೆಯಧರಿಸಿ । ಧರಿಸಿ
ಮುಂಮಡಿಯಲಿ ಚಂದ್ರನನಿಲಿಸಿ |
ಕಡೆಗಣ್ಣ ಮೂರನೆಂದೆನಿಸಿ
ಫಣಿವಿಡಿಗಳ ಕುಂಡಲ ವಿರಿಸಿ|
ಬಿಡದೆ ವಿಷವನುಂಡಾ ಕಡುಗಪ್ಪು ಕೊರಳೊಳು । ಒಡನೆರುಂಡಮಾಲೆಯ ಧಡಬಡಿಸುವಾ ॥1॥
ಇಟ್ಟವಿಭೂತಿಯತನುವಾ | ಶಿವ |
ತೊಟ್ಟರುದ್ರಾಕ್ಷಿಯಲಿ ಮೆರೆವಾ |
ಸೃಷ್ಟಿಗೆ ಕೌತುಕವೆನುವಾ ಬಿಗಿದುಟ್ಟಿಹ ಹುಲಿಚರ್ಮಾಂಬರವಾ |
ನೆಟ್ಟನೆ ಢಮರುವಾ | ಮುಟ್ಟಿ | ನುಡಿಸುತಲಿ |
ಛಟಫಟ ಧ್ವನಿಯಾರ್ಭಟದ ಭೈರಾಗಿ ॥2॥
ಶ್ರೀರಾಮನಾಮವ ಉಲಿದು । ಉಲಿದು । ತಾ ಕರದಿ ಕಪಾಲವ ಪಿಡಿದು |
ಧರೆಯೊಳು ಭಿಕ್ಷಾ ನೆವವೆಂದೂ ಹರ ತಿರುಗುವ ವಿಜ್ಞಾನಸಿಂಧು |
ಗುರು ಮಹಿಪತಿಸುತ ನರನಾಟಕದಲಿ ಅವತರಿಸಿದ ಗೋಕುಲದ ಸಿರಿನೋಡಲೂ ॥3||