Friday, 27 December 2019

ಮನದಧಿಪ ಮೊರೆಹೊಕ್ಕೆ ಮಹದೇವ ಪಾಹಿ ankita jayesha vittala

ಶ್ರೀ ಜಯೇಶವಿಠಲದಾಸರ ರಚನೆ 

 ರಾಗ ಸಿಂಹೇಂದ್ರಮಧ್ಯಮ     ಖಂಡಛಾಪುತಾಳ 

ಮನದಧಿಪ ಮೊರೆಹೊಕ್ಕೆ ಮಹದೇವ ಪಾಹಿ ॥ ಪ ॥
ತೃಣಮೊದಲು ಘನದಲ್ಲಿ ಬಿಡದೆ ಹರಿಯನು ಭಜಿಪ॥ ಅ ಪ ॥

ಕರುಣಾಬ್ಧಿ ನೀಡೆನಗೆ ವೈರಾಗ್ಯ ಮಹಭಾಗ್ಯ ।
ಪರಮ ಭಾಗವತ ಪದ ನಿನ್ನದಯ್ಯ ॥
ಮರುದಂಘ್ರಿ ಕಮಲಮಧುಮತ್ತ ಷಟ್ಪದ ದೊರೆಯೇ ।
ಸರ್ವತ್ರ ನಿನ್ನಲ್ಲಿ ಹರಿಯ ತೋರಿಸಿ ಸಲಹೊ ॥ 1 ॥

ಆಪ್ತತಮ ನಿನ್ನಂಘ್ರಿ ಧ್ಯಾನದಲಿ ಇಡು ಎನ್ನ ।
ತೃಪ್ತಿ ಅನ್ಯದಿ ಬ್ಯಾಡ ಸುಪ್ತಿರಹಿತ ॥
ಸಪ್ತೆರಡು ಭಕ್ತಿಯಲಿ ಬೆಳೆಸೆನ್ನ ಉದ್ಧರಿಸೋ ।
ಪ್ರಾಪ್ತಿ ಪಾಲಿಸು ಬಿಂಬಮೂರ್ತಿ ದರುಶನ ಭೋಗ ॥ 2 ॥

ಮಾರುತಿಯ ಕೈಗಿತ್ತುದಾರ ಸಾಗರ ಶಂಭೋ ।
ಘೋರ ಭವಹರ ಹರಿಯ ದಾಸವರ್ಯ ॥
ಮಾರಮಣ ಜಯೇಶವಿಠ್ಠಲನ ಭಜನೆಯಲಿ ।
ಧೀರ ದಿವಿಜರ ಧೊರೆಯೆ ಸಾರಸುಖ ನೀಡೆನಗೆ ॥ 3 ॥

No comments:

Post a Comment