ರಾಗ ವಾಸಂತಿ ಆದಿತಾಳ
ಶ್ರೀ ವಿಜಯದಾಸಾರ್ಯ ವಿರಚಿತ ಯಮುನಾ ನದಿಯ ಸ್ತುತಿ ಪದ
ಯಮುನೇ ದುರಿತ ಉಪಶಮನೇ
ಆಮಮ ಮಂದಾಗಮನೇ ಅಗಣಿತಾ ಸುಮನೆ॥ಪ॥
ಆ ಮಹಾ ಮಾರ್ತಾಂಡ ಪುತ್ರೇ ಮಂಗಳಗಾತ್ರೇ
ಕಾಮಿತ ಸುಫಲದಾಯೆ ಕಾಲನಿಭಕಾಯೇ
ಆ ಮಂಜುಗಿರಿ ಬಳಿಯ ಅಲ್ಲಿ ಪುಟ್ಟಿದ ಸಿರಿಯ
ಸೋಮಕುಲಪಾವನೇ ಶರಣೂ ಸಂಜೀವನೆ॥೧॥
ಗಂಗಾ ಸಂಗಮೆ ಘನತರಂಗಿಣಿ ಮಹಾಮಹಿಮೆ
ಅಂಗವಟೆ ಅತಿ ಚೆಲುವೆ ನಲಿದಾಡಿ ನಲಿವೆ
ಮುಂಗುರುಳು ಸುಲಲಿತೆ ಮೂಲೋಕವಿಖ್ಯಾತೆ
ಕಂಗಳಲಿನೋಳ್ಪಂಗೆ ಹೃತ್ಕಮಲ ಭೃಂಗೆ॥೨॥
ವಾರಿನಿಧಿ ಪೃಥಕುಗಾಮಿನಿ ಪುಣ್ಯಭಾಮಿನಿ
ಹಾರಮುಖೆ ಸುಪ್ರಮುಖೆ
ವೀರಶಕ್ತಿ ವಿಜಯವಿಠ್ಠಲನ
ಶಾರಣ್ಯ ಪಾಲೆ ಸಂಗೀತಲೋಲೆ॥೩॥***
ಯಮುನಾ ನದಿಯ ಸ್ತುತಿ ಪದ
ಕಾಲಿಂದಿ! ತ್ವಮಘಾನ್ವಿತಾನಪಿ ಸತಃ ಕೃತ್ವಾಪವಿತ್ರಾತ್ಮನೋ
ಗಂತುಂ ನೈವ ಕದಾsಪಿ ಮುಂಚಸಿ ತವ ಭ್ರಾತುರ್ನಿಕೇತಂ ಪ್ರತಿ।
ಕಿಂತು ಕ್ಷೀರಪಯೋಧಿವಾಸನಿರತಾನ್ ಪ್ರೀತ್ಯಾ ಕರೋಷ್ಯಾಶ್ರಿತಾನ್
ಸ್ನಿಗ್ಧೇ ಭರ್ತರಿ ಕಾಮಿನೀಜನರುಚಿಃ ತತ್ಪಕ್ಷ ಏವ ಹ್ಯಲಮ್॥
***
No comments:
Post a Comment