Saturday 14 December 2019

ಭುವನೇಂದ್ರ ಮುನಿಪ ನಿನ್ನವನೋ ಎನ್ನ ankita jagannatha vittala

ಜಗನ್ನಾಥದಾಸರು

ಭುವನೇಂದ್ರ ಮುನಿಪ ನಿನ್ನವನೋ ಎನ್ನ
ಅವಗುಣಗಳೆಣಿಸದಲೆ ಅನುದಿನದ ಪಾಲಿಪುದು ಪ

ಸಾಧುಜನ ಸಂಪೂಜ್ಯ ಸತತ ನೀ ಎನ್ನ ಅಪ

ರಾಧಗಳೆಣಿಸದಲೆ ಸಂತೈಪುದು
ವೇದ ಪದಯೋಗ್ಯ ಸುಮನಸರ ಗುರು ಶ್ರೀ ಪೂರ್ಣ
ಬೋಧ ಮತ ವಾರಿನಿಧಿ ಚಂದ್ರ ಸದ್ಗುಣ ಸಾಂದ್ರ 1

ಶ್ರೀ ಮೂಲದಿಗ್ವಿಜಯರಾಮ ವ್ಯಾಸಾಂಘ್ರಿ ಯುಗ
ತಾಮರಸ ಭಜಕ ಈ ಭೂಮಿಯೊಳಿಹ
ಪಾಮರನ ಉದ್ಧರಿಸು ರವಿ ಸಾರ್ವ
ಭೌಮ ನೀ ಸಂಚರಿಪೆ ಈ ಮಹೀತಳದಿ 2

ಕರ ಕಮಲ ಸಂಜಾತ
ನಿರುಪಮ ಜಗನ್ನಾಥ ವಿಠಲ ದೂತ
ನೆರೆ ನಂಬಿದೆನೋ ನಿನ್ನ ಪರಿಪಾಲಿಸುವುದೆನ್ನ
ಮರೆಯಲಾಗದು ಜಿತಸ್ಮರ ಭೂವರ ಪ್ರವರಾ 3
***

BuvanEndra munipa ninnavanO enna
avaguNagaLeNisadale anudinada pAlipudu||pa||

sAdhujana saMpUjya satata nI enna apa
rAdhagaLeNisadale santaipudu
vEda padayOgya sumanasara guru SrI pUrNa
bOdha mata vArinidhi candra sadguNa sAMdra ||1||

SrI mUladigvijayarAma vyAsAnGri yuga
tAmarasa Bajaka I BUmiyoLiha
pAmarana uddharisu ravi sArva
Bauma nI saMcaripe I mahItaLadi ||2||

varadEndra yativarya kara kamala sanjAta
nirupama jagannAtha viThala dUta
nere naMbidenO ninna paripAlisuvudenna
mareyalAgadu jitasmara BUvara pravarA ||3||
***

ಭುವನೇಂದ್ರ ಮುನಿಪ ನಿನ್ನವನೋ ಎನ್ನ
ಅವಗುಣಗಳೆಣಿಸದಲೆ ಅನುದಿನದ ಪಾಲಿಪುದು||pa||

ಸಾಧುಜನ ಸಂಪೂಜ್ಯ ಸತತ ನೀ ಎನ್ನ ಅಪ
ರಾಧಗಳೆಣಿಸದಲೆ ಸಂತೈಪುದು
ವೇದ ಪದಯೋಗ್ಯ ಸುಮನಸರ ಗುರು ಶ್ರೀ ಪೂರ್ಣ
ಬೋಧ ಮತ ವಾರಿನಿಧಿ ಚಂದ್ರ ಸದ್ಗುಣ ಸಾಂದ್ರ ||1||

ಶ್ರೀ ಮೂಲದಿಗ್ವಿಜಯರಾಮ ವ್ಯಾಸಾಂಘ್ರಿ ಯುಗ
ತಾಮರಸ ಭಜಕ ಈ ಭೂಮಿಯೊಳಿಹ
ಪಾಮರನ ಉದ್ಧರಿಸು ರವಿ ಸಾರ್ವ
ಭೌಮ ನೀ ಸಂಚರಿಪೆ ಈ ಮಹೀತಳದಿ ||2||

ವರದೇಂದ್ರ ಯತಿವರ್ಯ ಕರ ಕಮಲ ಸಂಜಾತ
ನಿರುಪಮ ಜಗನ್ನಾಥ ವಿಠಲ ದೂತ
ನೆರೆ ನಂಬಿದೆನೋ ನಿನ್ನ ಪರಿಪಾಲಿಸುವುದೆನ್ನ
ಮರೆಯಲಾಗದು ಜಿತಸ್ಮರ ಭೂವರ ಪ್ರವರಾ ||3||
***

No comments:

Post a Comment