Saturday, 14 December 2019

ಸಂತರೆನಬಹುದು ಸಜ್ಜನರಿವರನಾ ankita jagannatha vittala

ಜಗನ್ನಾಥದಾಸರು
ಸಂತರೆನಬಹುದು ಸಜ್ಜನರಿವರನಾ ಪ

ಇಂಥ ಗುಣಗಳಿಂದ ಯುಕ್ತರಾಗಿಪ್ಪರ ಅ.ಪ.

ಸ್ವಾಂತಸ್ಥಾ ನುತ ಸರ್ವಾಂತರಾತ್ಮಕನೆಂದು
ಚಿಂತಿಸುತ ಮನದೊಳು ನಿರಂತರದಲಿ
ನಿಂತಲ್ಲಿ ನಿಲ್ಲದೆ ದುರಂತ ಮಹಿಮನ ಗುಣವ
ಸಂಸ್ತುತಿಸುತನವರತ ಶಾಂತರಾಗಿಹರಾ 1

ಲೇಸು ಹೊಲ್ಲೆಗಳು ಪ್ರದ್ವೇಷ ಗೇಹಗಳು ಸಂ
ತೋಷ ಕ್ಲೇಶಗಳಿಗವಕಾಶ ಕೊಡದೆ
ದೋಷ ವರ್ಜಿತ ಹೃಷಿಕೇಶ ಮಾಡುವನೆಂದು
ಭೇಶನಂದದಲಿ ಪ್ರಕಾಶಿಸುತಲಿಹರಾ 2

ಮೇದಿನಿ ದಿವಿಜರೊಳು
ಸಾಧು ಜನರೊಳು ಧರ್ಮಕರ್ಮಗಳೊಳು
ಶ್ರೀದನೊಳು ಗೋವುಗಳೊಳಗೆ ದ್ವೇಷಿಪರಿಗೆ ಅ
ನ್ನೋದಕಗಳೀಯದೆ ನಿಷೇಧಗಯ್ಯುತಲಿಹರಾ 3

ಎನ್ನ ಪೋಲುವ ಪತಿತರe್ಞÁನಿಗಳು ಜಗದೊ
ಳಿನ್ನಿಲ್ಲ ಪತಿತ ಪಾವನನೆನಿಸುವ
ಜಾಹ್ನವೀ ಜನಕಗಿಂದಧಿಕರ್ಯಾರಿಲ್ಲೆಂದು
ಉನ್ನತೋತ್ಯಂಶದಿಂದ ಸನ್ನುತಿಸುತಿಪ್ಪವರ 4

ಸತ್ಯ ಸಂಕಲ್ಪ ಏನಿತ್ತಿದ್ದೆ ಪರಮ ಸಂ
ಪತ್ತು ಎನಗೆನುತ ಸದ್ಭಕ್ತಿಯಿಂದಾ
ನಿತ್ಯದಲಿ ಕೀರ್ತಿಸುತ ಪುತ್ರಿಮಿತ್ರಾದಿಗಳು
ಭೃತ್ಯಾನುಭೃತ್ಯರೆಂದರ್ತಿಯಲಿ ಸ್ಮರಿಸುವರಾ 5

ಜನುಮ ಜನುಮಗಳಲ್ಲಿ ಎನಗೆ ಜನನೀ ಜನಕ
ಅನುಜ ತನುಜಾಪ್ತ ಪೋದನ ಭೂಷಣಾ
ಅನಿಮಿತ್ತ ಬಂಧು ಒಬ್ಬನೇ ಎನಿಸುತಿಪ್ಪ ಸ
ಪರ ಸೌಖ್ಯ ರೂಪನೆಂಬುವರಾ 6

ನಾಗೇಂದ್ರಶಯನ ಭವರೋಗಾಪಹರ್ತ ಪಾ
ವಜ್ರ ಅಮೋಘ ಶೌರ್ಯ
ತ್ರೈಗುಣ್ಯ ವರ್ಜಿತ ಜಗನ್ನಾಥ ವಿಠಲಗೆ
ಕೂಗಿ ಕೈಮುಗಿದು ತಲೆಬಾಗಿ ನಮಿಸುವರಾ 7
********

No comments:

Post a Comment