Saturday, 14 December 2019

ಇರಬೇಕು ನಿಂದಕರು ಸಜ್ಜನರಿಗೆ ankita jagannatha vittala

ಜಗನ್ನಾಥದಾಸರು
ಇರಬೇಕು ನಿಂದಕರು ಸಜ್ಜನರಿಗೆ ಪ

ದುರಿತ ರಾಶಿಗಳ ಪರಿಹರಿಸಲೋಸುಗ ಅ.ಪ.

ಕಲುಷ ಕರ್ಮವ ಮಾಡೆ
ಕಳೆವರಿನ್ನಾರೆಂದು ಕಮಲಭವನು
ತಿಳಿದು ನಿರ್ಮಿಸಿದವನಿಯೊಳಗೆ ನಿಂದಕರ
ಕಲುಷರನ ಮಾಡಿ ತನ್ನವರ ಸಲಹುವ 1

ದಿವಿಜರಿಳೆಯೊಳಗೆ ಜನ್ಮಗಳೊಲ್ಲೆವೆಂದಬ್ಜ
ಭವಗೆ ಮೊರೆಯಿಡಲು ವರವಿತ್ತನಂದು
ಕರ್ಮ ಮಾಡಿದರು ಸರಿಯೆತ
ನ್ನವನೆನಿಸದವಗೆ ತಜ್ಜನ್ಯ ಫಲ ಬರಲೆಂದು 2

ಮಾನವಾಧಮ ಜನರು ನೋಡಿ ಸಹಿಸದಲೆ
ಹೀನ ಮತಿಯಿಂದ ಮಾತುಗಳಾಡಲು
ಭಾನು ಮಂಡಲಕೆ ಮೊಗವೆತ್ತಿ ಉಗುಳಿದರೆ
ನ್ನಾನನವೆ ತೊಯ್ವುದಲ್ಲದರ್ಕಗೇನಪಮಾನ 3

ಮಲವ ತೊಳೆವಳು ತಾಯಿ ಕೈಗಳಿಂದಲಿ ನಿತ್ಯ
ತೊಳೆವ ನಿಂದಕ ತನ್ನ ನಾಲಗಿಂದ
ಬಲು ಮಿತ್ರನಿವನೆಂದು ಕರೆದು ಮನ್ನಿಸಬೇಕು
ಹಲವು ಮಹ ಪಾಪಗಳ ಕಳೆದು ಪುಣ್ಯವನೀವ 4

ಅನುಭವಿಪ ದುಷ್ಕರ್ಮಗಳ ಜನ್ಯ ಫಲವು ತ
ನ್ನಣುಗರಿಗೆ ಅಪವಾದ ರೂಪದಿಂದ
ಉಣಿಸಿ ಮುಕ್ತರ ಮಾಡಿ ಸಂತೈಪ ನರಕ ಯಾ
ತನೆಗಳವರಿಗೆ ಇಲ್ಲದುದರಿಂದ ಎಂದೆಂದೂ 5

ಮನುಜಾಧಮರಿಗೆ ಹರಿದಾಸರಲಿ ದ್ವೇಷ
ವೆನಿಪ ಸಾಧನವೆ ನಿಸ್ಸಂದೇಹವು
ಅನುತಾಪ ಬಿಡದೆ ಹರುಷಿತರಾಗಿ ನಿಷ್ಪ್ರಯೋ
ಜನದಿ ಹರಿಪದಾಬ್ಜ ಭಜಿಪ ಭಜಕರಿಗೆ 6

ಲೋಕದೊಳು ನಿರ್ಮಿಸಿದನಿರ್ವರನು ಹರಿ ತಾನು
ಭೂ ಕೋವಿದರ ಮಲವು ಪೋಗಲೆಂದು
ಶ್ರೀ ಕರಾರ್ಚಿತ ಜಗನ್ನಾಥವಿಠಲ ಗ್ರಾಮ
ಸೂಕರರು ನಿಂದಕರು ಕರುಣಾಳು ಇಳೆಯೊಳಗೆ 7
***

pallavi

irabEku nindakaru sajjanarige durita rAsigaLa pariharisalusuga

caraNam 1

kaliyugadali kOvidaru kaluSa karmava mADi kaLevarinnArendu kamalabhavanu
tiLidu nimisidanavadiyoLage tinkadara kaluSaharaNa mADitannavada talakuva

caraNam 2

divi gariLeyoLage janmagaLolellevindabja bhavage moreyiDadu varavittanandu
bhavakE kAraNa karma mADidaru sarige tannavadenisadavage sajjanya bhala varadindu

caraNam 3

mAnavAdhama janaru nODidakitadali hIna matiyinda badhugaLADadu
bhANU maNDalake modavetti uguLidare tANanave tOivadelladhartage napamAna

caraNam 4

malava toLevaDutAgi kaigaLIndalitEtya toLevanindakatanna nAlakinda
paluvitranivanendu karedu mannisabEku halavu maha pApadaLa kaLedu koNyakEva

caraNam 5

anubhavipa duSkarmagaLa janya phalavuttannaDugarige apavAda rUpadinda
kuNisi muktara mADi santaipa narakaya tanegaLavarige illadudadinda endindu

caraNam 6

manuja dhamrige haridAsarili dvESa enipa sAdhanavEni sandEhavu
anutApa biDade aruSitarAgi niSprayOjanavi haripAdAbja bhajipa bhajikarige

caraNam 7

lOkadoLu nirmisida nirvaranu haritAnu bhUkOvidada malapu pOgalindu
shrIkarArcita jagannAtha viThala gAma sUkararu nindakaru karuNALu iLeyoLage
***

No comments:

Post a Comment