ರಾಗ : ಶಹನ ಆದಿತಾಳ
ಶ್ರೀ ಜಗನ್ನಾಥದಾಸರು ಶ್ರೀ ಸತ್ಯಸಂಧತೀರ್ಥರನ್ನು ಕುರಿತು ಮಾಡಿರುವಂತಹ ಕೃತಿ
ವಂದಿಸುವೆ ಗುರು ಸತ್ಯಸಂಧ ಮುನಿಯಾ
ವೃಂದಾವನಕೆ ಹರುಷದಿಂದ ಎಂದೆಂದು॥ಪ॥
ಗಂಗಾ ಪ್ರಯಾಗ ಗಯಾ ಶ್ರೀಶೈಲಹೋಬಲ ಭು
ಜಂಗಾದ್ರಿ ಮೊದಲಾದ ಕ್ಷೇತ್ರಗಳನು
ಇಂಗಿತಜ್ಞರ ಸಹಿತ ಸಂಬಾಶಿವರಮಹಿಷಿ
ತುಂಗಾತಟದಿ ವಾಸವಾಗಿಪ್ಪ ಯತಿವರಗೆ॥೧॥
ಭೂದೇವನುತ ಸತ್ಯಬೋಧ ಮುನಿವರ ಕರ
ವೇದಿಕದೊಳುದ್ಭವಿಸಿದ ಕಲ್ಪವೃಕ್ಷಾ
ಸಾಧುಜನರಿಗೆ ಬೇಡಿದಿಷ್ಟಾರ್ಥಗಳ
ಮೋದದಿ ಕೊಡುವ ಮಹಿಮರ ಕಂಡು॥೨॥
ಶ್ರೀ ಮನೋರಮನ ಅತಿವಿಮಲತರ ಸಹಸ್ರ
ನಾಮಾವಳಿಗೆ ಸುವ್ಯಾಖ್ಯಾನ ರಚಿಸಿ
ಧೀಮಂತ ಜನರಿಗುಪದೇಶಿಸಿ ನಿರಂತರ ತ್ರಿ
ಧಾಮ ಜಗನ್ನಾಥವಿಠಲ ನೊಲಿಮೆ ಪಡೆದವರಿಗೆ॥೩॥
***
vandisu guru satyasandha muniyA
vRundAvanake haruShadinda endendu ||pa||
gangA prayAga gayA SrISailahObala Bu
jangAdri modalAda kShEtragaLanu
ingitaj~jara sahita saMbandha gaisi varamahiSha
tungAtaTadi vAsavAgippa yativarage ||1||
BUdEvanuta satyabOdha munivara kara
vEdikadoLudBavisida kalpavRukSha
sAdhujanarige bEDidiShTArthagaLa
mOdadi koDuva mahimara kanDu ||2||
SrI manOramana ativimalatara SAstra
nAmAvaLige suvyAKyAna racisi
dhImanta janarigupadESisi nirantara
dhAma jagannAtha viThalana olume paDedavarige ||3||
***
ಜಗನ್ನಾಥದಾಸರು
ವಂದಿಸು ಗುರು ಸತ್ಯಸಂಧ ಮುನಿಯಾ
ವೃಂದಾವನಕೆ ಹರುಷದಿಂದ ಎಂದೆಂದು ಪ
ಗಂಗಾ ಪ್ರಯಾಗ ಗಯಾ ಶ್ರೀಶೈಲಹೋಬಲ ಭು
ಜಂಗಾದ್ರಿ ಮೊದಲಾದ ಕ್ಷೇತ್ರಗಳನು
ಇಂಗಿತಜ್ಞರ ಸಹಿತ ಸಂಬಂಧ ಗೈಸಿ ವರಮಹಿಷ
ತುಂಗಾತಟದಿ ವಾಸವಾಗಿಪ್ಪ ಯತಿವರಗೆ 1
ಭೂದೇವನುತ ಸತ್ಯಬೋಧ ಮುನಿವರ ಕರ
ವೇದಿಕದೊಳುದ್ಭವಿಸಿದ ಕಲ್ಪವೃಕ್ಷ
ಸಾಧುಜನರಿಗೆ ಬೇಡಿದಿಷ್ಟಾರ್ಥಗಳ
ಮೋದದಿ ಕೊಡುವ ಮಹಿಮರ ಕಂಡು 2
ಶ್ರೀ ಮನೋರಮನ ಅತಿವಿಮಲತರ ಶಾಸ್ತ್ರ
ನಾಮಾವಳಿಗೆ ಸುವ್ಯಾಖ್ಯಾನ ರಚಿಸಿ
ಧೀಮಂತ ಜನರಿಗುಪದೇಶಿಸಿ ನಿರಂತರ
ಧಾಮ ಜಗನ್ನಾಥ ವಿಠಲನ ಒಲುಮೆ ಪಡೆದವರಿಗೆ 3
********
ವಂದಿಸು ಗುರು ಸತ್ಯಸಂಧ ಮುನಿಯಾ
ವೃಂದಾವನಕೆ ಹರುಷದಿಂದ ಎಂದೆಂದು ಪ
ಗಂಗಾ ಪ್ರಯಾಗ ಗಯಾ ಶ್ರೀಶೈಲಹೋಬಲ ಭು
ಜಂಗಾದ್ರಿ ಮೊದಲಾದ ಕ್ಷೇತ್ರಗಳನು
ಇಂಗಿತಜ್ಞರ ಸಹಿತ ಸಂಬಂಧ ಗೈಸಿ ವರಮಹಿಷ
ತುಂಗಾತಟದಿ ವಾಸವಾಗಿಪ್ಪ ಯತಿವರಗೆ 1
ಭೂದೇವನುತ ಸತ್ಯಬೋಧ ಮುನಿವರ ಕರ
ವೇದಿಕದೊಳುದ್ಭವಿಸಿದ ಕಲ್ಪವೃಕ್ಷ
ಸಾಧುಜನರಿಗೆ ಬೇಡಿದಿಷ್ಟಾರ್ಥಗಳ
ಮೋದದಿ ಕೊಡುವ ಮಹಿಮರ ಕಂಡು 2
ಶ್ರೀ ಮನೋರಮನ ಅತಿವಿಮಲತರ ಶಾಸ್ತ್ರ
ನಾಮಾವಳಿಗೆ ಸುವ್ಯಾಖ್ಯಾನ ರಚಿಸಿ
ಧೀಮಂತ ಜನರಿಗುಪದೇಶಿಸಿ ನಿರಂತರ
ಧಾಮ ಜಗನ್ನಾಥ ವಿಠಲನ ಒಲುಮೆ ಪಡೆದವರಿಗೆ 3
********
No comments:
Post a Comment