Saturday 14 December 2019

ದಾಸೋಹಂ ತವ ದಾಸೋಹಂ ankita jagannatha vittala DAASOHAM TAVA DAASOHAM


ರಾಗ- ಪೀಲೂ (ಭೈರವ) ಆದಿತಾಳ
2nd Audio by Mrs. Nandini Sripad


ದಾಸೋಹಂ ತವ ದಾಸೋಹಂ ತವ
ದಾಸೋಹಂ ತವ ದಾಸೋಹಂ ||ಪ||
ವಾಸುದೇವ ವಿಗತಾಘಸಂಘ ತವ ||ಅ. ಪ||

ಜೀವಾಂತರ್ಗತ ಜೀವ ನಿಯಾಮಕ
ಜೀವ ವಿಲಕ್ಷಣ ಜೀವನದ
ಜೀವಾಧಾರಕ ಜೀವರೂಪಿ ರಾ-
ಜೀವ ಭವಜನಕ ಜೀವೇಶ್ವರ ತವ ||೧||

ಕಾಲಾಂತರ್ಗತ ಕಾಲನಿಯಮಕ
ಕಾಲಾತೀತ ತ್ರಿಕಾಲಜ್ಞ
ಕಾಲ ಪ್ರವರ್ತಕ ಕಾಲನಿವರ್ತಕ
ಕಾಲೋತ್ಪಾದಕ ಕಾಲಮೂರ್ತಿ ತವ ||೨||

ಕರ್ಮಕರ್ಮಕೃತ ಕರ್ಮಕೃತಾಗಮ
ಕರ್ಮ ಫಲಪ್ರದ ಕರ್ಮಜಿತ
ಕರ್ಮಬಂಧ ಮಹ ಕರ್ಮವಿಮೋಚಕ
ಕರ್ಮನಿಗ್ರಹ ಕರ್ಮಸಾಕ್ಷಿ ತವ ||೩||

ಧರ್ಮಯೂಪ ಮಹ ಧರ್ಮವಿವರ್ಧನ
ಧರ್ಮವಿದೊತ್ತಮ ಧರ್ಮನಿಧೇ
ಧರ್ಮಸೂಕ್ಷ್ಮ ಮಹ ಧರ್ಮಸಂರಕ್ಷಕ
ಧರ್ಮಸಾಕ್ಷಿ ಯಮಧರ್ಮಪುತ್ರ ತವ || ೪||

ಮಂತ್ರಯಂತ್ರ ಮಹ ಮಂತ್ರ ಬೀಜ ಮಹ
ಮಂತ್ರ ರಾಜಗುರು ಮಂತ್ರಧೃತ
ಮಂತ್ರಮೇಯ ಮಹ ಮಂತ್ರನಿಯಾಮಕ
ಮಂತ್ರದೇವ ಜಗನ್ನಾಥ ವಿಠಲ ತವ ||೫||
***


Dasoham tava dasoham || pa ||

Vasudeva vigatagasangha tava || A. pa||

Jeevanthargatha Jeevaniyamaka Jeevavilakshana Jeevanada

Jeevadaraka Jeevaroopa Rajivabavajanaka Jeeveshwara tava||1||

Kalanthargatha kaalaniyamaka Kaalatheetha thrikaalagnya

Kalapravarthaka kalanivarthaka kaalothpadaka kalamurti tava||2||

Karma karamakrithakarmakrithaagama Karmaphalaprada karmajitha

Karmabaandha maha Karmavimochaka Karmavinigraha vikarmanashatava||3||

Dhramayupa Mahadharmavivardhana dharmavidhotama dharmanidhe

Dharmasookshma Mahadharmasamrakshaka Dharmasakshi Yamadharma Putra tava ||4||

Mantrayantra mahaMantra bheeja MahaMantraraja guruMantrajitha

Mantrameyamaha Mantraniyamaka Mantradeva jaganatha vittalatava||5||
***

pallavi

dAsOham tava dAsOham tava dAsOham tava dAsOham

anupallavi

vAsudEva vigatAgava sangha tava

caraNam 1

jIvAntargata jIvaniyAmaka jIva vilakSaNa jIvanada
jIvAdhAraka jIvarUpi rAjIva bhava janaka jIvEshvara tava

caraNam 2

kAlantargata kAlaniyAmaka kAlAtIta trikAlajnA
kAla pravarthaka kAla nivarthaka kAlOtpAdaka kAla mUrti tava

caraNam 3

karma karma krata karma kratAgama karma phalaprada karmajita
karma bandha mahA karma vimOcaka karma nigraha karma sAkSi tava

caraNam 4

dharmayUpa maha dharma vivardhana dharma vidOttama dharmanidE
dharma sUkSma maha dharma samrakSaka dhama sAkSi yama dharmaputra tava

caraNam 5

mantra yantra maha mantra bIja maha mantra rAjagurui mantra dhrta
mantarmEya maha mantra niyAmaka mantra dEva jagannAtha viThala tava
***


Dasoham tava dasoham dasoham
Vasudeva vigadaga sanga tava

Jeevanthargada Jeevaniyamaka Jeevabirakshana Jeevanakam
Jeevadaraka Jeevaroopa Rajiva bavajanaka Jeeveshwara||1||

Kalanthargada kaalaniyamaka Kaalatheertha thrikaalagnyam
Kalapravadaka kalanivarthga kaalopadaga kalaroopa||2||

Karmakarama kritha karmakrithaa gama Karmabalaprada karmajitha
Karmabaandhamaha Karma vimoshaka Karma nigraha Karma sakhsi||3||

Mantrayantra maya Mantrabheejavara Mantrarajaguru Mantradruga
Mantrameyamaha Mantragamyavara Mantradeva janganadha vittala||4||
***

ದಾಸೋಹಂ ತವ ದಾಸೋಹಂ               ||ಪ||
ವಾಸುದೇವ ವಿತತಾಘ ಸಂಘತವ           ||ಅ.ಪ||

ಜೀವಾಂತರ್ಗತ ಜೀವ ನಿಯಾಮಕ
ಜೀವ ವಿಲಕ್ಷಣ ಜಿವನದ
ಜೀವಾಧಾರಕ ಜೀವರೂಪ
ರಾಜೀವ ಭವ ಜನಕ ಜೀವೇಶ್ವರ ತವ       ||೧||

ಕಾಲಂತರ್ಗತ ಕಾಲನಿಯಮಕ
ಕಾಲಾತೀತ ತ್ರಿಕಾಲಙ್ಞ
ಕಾಲಪ್ರವರ್ತಕ ಕಾಲನಿವರ್ತಕ
ಕಾಲೋತ್ಪಾದಕ ಕಾಲ ಮೂರ್ತಿ ತವ       ||೨||

ಕರ್ಮಕರ್ಮಕೃತ ಕರ್ಮಾ ಕೃತಾಗಮ
ಕರ್ಮ ಫಲಪ್ರದ ಕರ್ಮಜಿತ
ಕರ್ಮ ಬಂಧಮಹ ಕರ್ಮವಿಮೋಚಕ
ಕರ್ಮನಿಗ್ರನ ವಿಕರ್ಮನಾಶತವ            ||೩||

ಧರ್ಮಯೂಪಮಹ ಧರ್ಮವಿವರ್ಧನ
ಧರ್ಮವಿದುತ್ತಮ ಧರ್ಮನಿಧೇ
ಧರ್ಮ ಸೂಕ್ಷಮ ಹ ಧರ್ಮಸಂರಕ್ಷಕ
ಧರ್ಮಸಾಕ್ಷಿ ಯಮಧರ್ಮ ಪುತ್ರತವ     ||೪||

ಮಂತ್ರ ಯಂತ್ರ ಮಹ ಮಂತ್ರ ಬೀಜ
ಮಹ ಮಂತ್ರ ರಾಜಗುರು ಮಂತ್ರ ತವ
ಮಂತ್ರ ಮೇಯ ಮಹ ಮಂತ್ರಗಮ್ಯವರ
ಮಂತ್ರ ದೇವ ಜಗನ್ನಾಥ ವಿಠಲತವ       ||೫||
*************


ಶ್ರೀ ಜಗನ್ನಾಥದಾಸರ ಕೃತಿ 

 ರಾಗ ನಾದನಾಮಕ್ರಿಯಾ       ಆದಿತಾಳ 

ದಾಸೋऽಹಂ ತವ ದಾಸೋऽಹಂ ತವ
ದಾಸೋऽಹಂ ತವ ದಾಸೋऽಹಂ ॥ ಪ ॥
ವಾಸುದೇವ ವಿಗತಾಘಸಂಘ ತವ ॥ ಅ ಪ ॥

ಜೀವಾಂತರ್ಗತ ಜೀವನಿಯಾಮಕ
ಜೀವವಿಲಕ್ಷಣ ಜೀವನದ
ಜೀವಾಧಾರಕ ಜೀವರೂಪಿ ರಾ -
ಜೀವಭವಜನಕ ಜೀವೇಶ್ವರ ತವ ॥ 1 ॥

ಕಾಲಾಹ್ವಯ ಮಹಕಾಲನಿಯಾಮಕ
ಕಾಲಾತೀತ ತ್ರಿಕಾಲಜ್ಞ
ಕಾಲಪ್ರವರ್ತಕ ಕಾಲನಿವರ್ತಕ
ಕಾಲೋತ್ಪಾದಕ ಕಾಲಮೂರ್ತಿ ತವ ॥ 2 ॥

ಕರ್ಮಕರ್ಮ ಕೃತಕರ್ಮಕೃತಾಗಮ
ಕರ್ಮಫಲಪ್ರದ ಕರ್ಮಜಿತ
ಕರ್ಮಬಂಧಮಹಕರ್ಮವಿಮೋಚಕ
ಕರ್ಮವಿಗ್ರಹ ಕರ್ಮಸಾಕ್ಷಿ ತವ ॥ 3 ॥

ಧರ್ಮಯೂಪ ಮಹಧರ್ಮವಿವರ್ಧಕ
ಧರ್ಮವಿದುತ್ತಮ ಧರ್ಮನಿಧೇ
ಧರ್ಮಸೂಕ್ಷ್ಮಮಹಧರ್ಮಸಂರಕ್ಷಕ
ಧರ್ಮಸಾಕ್ಷಿ ಯಮಧರ್ಮಪುತ್ರ ತವ ॥ 4 ॥

ಮಂತ್ರಮಂತ್ರಮಯ ಮಂತ್ರಬೀಜ ಮಹ-
ಮಂತ್ರರಾಜ ಗುರುಮಂತ್ರಧೃತ
ಮಂತ್ರಮೇಯ ಮಹಮಂತ್ರಗಮ್ಯ ವರ -

ಮಂತ್ರದೇವ ಜಗನ್ನಾಥವಿಠಲ ತವ ॥ 5 ॥
*****************


ಶ್ರೀ ಜಗನ್ನಾಥದಾಸರ ಕೃತಿ 
ಶ್ರೀ ಜಗನ್ನಾಥದಾಸರ ಕೃತಿ

ಲಘುಟಿಪ್ಪಣಿ 

ದಾಸೋऽಹಂ ತವ ದಾಸೋऽಹಂ ತವ
ದಾಸೋऽಹಂ ತವ ದಾಸೋऽಹಂ ॥ ಪ ॥
ವಾಸುದೇವ ವಿಗತಾಘಸಂಘ ತವ ॥ ಅ ಪ ॥

ವಿಗತಾಘಸಂಘ = ಪಾಪಸಮೂಹವಿಲ್ಲದ ; ವಾಸುದೇವ = ಜಗತ್ತಿನಲ್ಲಿ ವ್ಯಾಪಿಸಿ ವಾಸಮಾಡುವವನೂ ; ಕ್ರೀಡಾದಿಗುಣಗಳುಳ್ಳವನೂ ಆದುದರಿಂದ ವಾಸುದೇವನೆನಿಸಿದವನೇ ಅಥವಾ ವಸುದೇವನ ಪುತ್ರನೇ ; ತವ = ನಿನ್ನ ; ದಾಸಃ = ಚಾಕರಿಯವನು ; ಅಹಂ = ನಾನು.

ಜೀವಾಂತರ್ಗತ ಜೀವನಿಯಾಮಕ
ಜೀವವಿಲಕ್ಷಣ ಜೀವನದ
ಜೀವಾಧಾರಕ ಜೀವರೂಪಿ ರಾ -
ಜೀವಭವಜನಕ ಜೀವೇಶ್ವರ ತವ ॥ 1 ॥

ಜೀವಾಂತರ್ಗತ = ಜೀವರಲ್ಲಿ ಅಂತರ್ಯಾಮಿಯೇ ; ಜೀವನಿಯಾಮಕ = ಜೀವರಿಗೆ ನಿಯಾಮಕನೇ ; ಜೀವವಿಲಕ್ಷಣ = ಜೀವರಿಂದ ಭಿನ್ನನಾದವನೇ ; ಜೀವನದ = ಸರ್ವಜೀವರಿಗೂ ಬದುಕುವಿಕೆಯನ್ನು ಕೊಡುವವನೇ ; ಜೀವಾಧಾರಕ = ಜೀವರಿಗೆ ಆಧಾರನೇ ; ಜೀವರೂಪಿ = ಜೀವರಿಗೆ ಬಿಂಬಸ್ವರೂಪನೇ ಅಥವಾ ಸರ್ವಶಬ್ದವಾಚ್ಯನಾದುದರಿಂದ ಜೀವನೆನಿಸಿದವನೇ ಅಥವಾ ಜೀವರನ್ನು ಜನ್ಮಾದಿಗಳನ್ನಿತ್ತು ಪ್ರಕಾಶಗೊಳಿಸಿದವನೇ ; ರಾಜೀವಭವಜನಕ = ಪದ್ಮದಲ್ಲಿ ಹುಟ್ಟಿದ ಚತುರ್ಭುಖ ಬ್ರಹ್ಮನಿಗೆ ತಂದೆಯೇ ; ಜೀವೇಶ್ವರ = ಜೀವರಿಗೆ ಸ್ವಾಮಿಯೇ ; ನಾನು ನಿನ್ನ ದಾಸನು. 

ಕಾಲಾಹ್ವಯ ಮಹಕಾಲನಿಯಾಮಕ
ಕಾಲಾತೀತ ತ್ರಿಕಾಲಜ್ಞ
ಕಾಲಪ್ರವರ್ತಕ ಕಾಲನಿವರ್ತಕ
ಕಾಲೋತ್ಪಾದಕ ಕಾಲಮೂರ್ತಿ ತವ ॥ 2 ॥

ಕಾಲಾಹ್ವಯ = ಸರ್ವಸಂಹಾರಕನಾದುದರಿಂದ ಕಾಲನೆನಿಸಿದವನೇ ; ಮಹಕಾಲನಿಯಾಮಕ = ಪ್ರಳಯ - ಸೃಷ್ಟ್ಯಾದಿ ಮಹಾಕಾಲಗಳಿಗೆ ನಿಯಾಮಕನಾದುದರಿಂದ ಮಹಕಾಲನಿಯಾಮಕನೆನಿಸಿದವನೆ ; ಕಾಲಾತೀತ = ನಿತ್ಯದಲ್ಲಿಯೂ ಇರುವವವನಾದುದರಿಂದ ಕಾಲವನ್ನು ದಾಟಿದವನೆ ; ತ್ರಿಕಾಲಜ್ಞ = ಭೂತಭವಿಷ್ಯದ್ವರ್ತಮಾನಕಾಲಗಳ ವಿಷಯವನ್ನರಿತವನೆ ; ಕಾಲಪ್ರವರ್ತಕ = ಕಾಲವನ್ನು ನಡೆಸತಕ್ಕವನೇ ; ಕಾಲನಿವರ್ತಕ = ಕಾಲವನ್ನು ನಿವೃತ್ತಿಪಡಿಸುವವನೆ ; ಕಾಲೋತ್ಪಾದಕ = ಕಾಲವನ್ನುಂಟುಮಾಡುವವನೇ ; ಕಾಲಮೂರ್ತಿ = ಕಾಲಸ್ವರೂಪನೆ ; ನಾನು ನಿನ್ನ ದಾಸನು.

ಕರ್ಮಕರ್ಮ ಕೃತಕರ್ಮಕೃತಾಗಮ
ಕರ್ಮಫಲಪ್ರದ ಕರ್ಮಜಿತ
ಕರ್ಮಬಂಧಮಹಕರ್ಮವಿಮೋಚಕ
ಕರ್ಮವಿಗ್ರಹ ಕರ್ಮಸಾಕ್ಷಿ ತವ ॥ 3 ॥

ಕರ್ಮಕರ್ಮ = ಜಡಕರ್ಮಪ್ರಚೋದಕನೇ ; ಕೃತಕರ್ಮಕೃತಾಗಮ = ಕರ್ಮಮಾಡಿದವರಿಗೆ ಶಾಸ್ತ್ರಗಳನ್ನು ಮಾಡಿದವನೇ (ಸತ್ಕರ್ಮ ಮಾಡಿದವರನ್ನುದ್ಧರಿಸಲು ಶ್ರೀವ್ಯಾಸಾದಿರೂಪಗಳಿಂದ ಶಾಸ್ತ್ರ ನಿರ್ಮಿಸಿದವನೇ) ; ಕರ್ಮಫಲಪ್ರದ = ಸತ್ಕರ್ಮ ಮಾಡಿದವರಿಗೆ ಸುಖಫಲವನ್ನು , ದುಷ್ಕರ್ಮ ಮಾಡಿದವರಿಗೆ ದುಃಖ ಫಲವನ್ನು ಕೊಡುವವನೇ ; ಕರ್ಮಜಿತ = ಸಾಧುಗಳ ಸತ್ಕರ್ಮಗಳಿಂದ ಗೆಲ್ಲಲ್ಪಟ್ಟವನೇ (ಸತ್ಕರ್ಮಮಾಡಿದವರಿಗೆ ಸೋತವನಂತೆ ಒಲಿದವನೇ) ; ಕರ್ಮಬಂಧಮಹಕರ್ಮವಿಮೋಚಕ = ಕರ್ಮ ಬಂಧನವನ್ನು ಆ ಬಂಧನಕ್ಕೆ ಕಾರಣವಾದ ಮಹಾಕರ್ಮಗಳನ್ನು ಬಿಡಿಸತಕ್ಕವನೇ ; (ಮೋಕ್ಷಕ್ಕೆ ಹೋಗುವಾಗ ಆತನ ಪುಣ್ಯಕರ್ಮಗಳು ಯೋಗ್ಯರಿಗೂ , ಪಾಪಕರ್ಮಗಳು ಅಯೋಗ್ಯರಿಗೂ ಸೇರುವಂತೆ ಮಾಡುವನೆಂಬ ಪ್ರಮಾಣಾರ್ಥ ಸೂಚನೆ) ; ಕರ್ಮವಿಗ್ರಹ = ಕಂಸರಾವಣಾದಿ ದುಷ್ಟಸಂಹಾರರೂಪಕರ್ಮ ಮಾಡಲು ಕೃಷ್ಣರಾಮಾದಿ ರೂಪಗಳನ್ನು ಧರಿಸಿದವನೇ ; ಕರ್ಮಸಾಕ್ಷಿ = ಎಲ್ಲರೂ ಮಾಡುವ ಕರ್ಮ(ಕೆಲಸ)ಗಳನ್ನು ಪ್ರತ್ಯಕ್ಷವಾಗಿ ನೋಡುತ್ತಿರುವವನೇ ; ನಾನು ನಿನ್ನ ದಾಸನು.

ಧರ್ಮಯೂಪ ಮಹಧರ್ಮವಿವರ್ಧಕ
ಧರ್ಮವಿದುತ್ತಮ ಧರ್ಮನಿಧೇ
ಧರ್ಮಸೂಕ್ಷ್ಮಮಹಧರ್ಮಸಂರಕ್ಷಕ
ಧರ್ಮಸಾಕ್ಷಿ ಯಮಧರ್ಮಪುತ್ರ ತವ ॥ 4 ॥

ಧರ್ಮಯೂಪ = ಧರ್ಮಕ್ಕೆ ಆಧಾರಸ್ತಂಭನೆ ; ಮಹಧರ್ಮವಿವರ್ಧಕ = ಶ್ರೇಷ್ಠಧರ್ಮವೃದ್ಧಿಕರನೆ ; ಧರ್ಮವಿದುತ್ತಮ = ಧರ್ಮವನ್ನು ತಿಳಿದವರಲ್ಲಿ ಶ್ರೇಷ್ಠನೆ ; ಧರ್ಮನಿಧೇ = ಧರ್ಮಕ್ಕೆ ಅಪಾರವಾದ ಆಶ್ರಯನಾದವನೆ ; ಧರ್ಮಸೂಕ್ಷ್ಮಮಹಧರ್ಮಸಂರಕ್ಷಕ = ಸೂಕ್ಷ್ಮಧರ್ಮಗಳು , ಸಾಮಾನ್ಯಧರ್ಮಗಳು ಎಂಬ ಎರಡು ತೆರನಾದ ಧರ್ಮಗಳಿಗೆ ರಕ್ಷಕನೆ ; ಧರ್ಮಸಾಕ್ಷಿ = ಜನರಾಚರಿಸುವ ಧರ್ಮಗಳನ್ನು ಪ್ರತ್ಯಕ್ಷ ನೋಡುವವನೆ ; ಯಮಧರ್ಮಪುತ್ರ = ಯಮಧರ್ಮರಾಜನಿಗೆ ಮಗನಾಗಿ ಬಂದವನೇ ; ನಾನು ನಿನ್ನ ದಾಸನು.

ಮಂತ್ರಮಂತ್ರಮಯ ಮಂತ್ರಬೀಜ ಮಹ-
ಮಂತ್ರರಾಜ ಗುರುಮಂತ್ರಧೃತ
ಮಂತ್ರಮೇಯ ಮಹಮಂತ್ರಗಮ್ಯವರ -
ಮಂತ್ರದೇವಜಗನ್ನಾಥವಿಠಲ ತವ ॥ 5 ॥

ಮಂತ್ರಮಂತ್ರಮಯ = ಪ್ರತಿಮಂತ್ರಸ್ವರೂಪನೂ ಆದವನೆ (ಪಂಚರಾತ್ರಾಗಮದಲ್ಲಿ ಹೇಳಲ್ಪಟ್ಟ ಪ್ರಣವ , ಅಷ್ಟಾಕ್ಷರಾದಿಮಂತ್ರಗಳಿಂದ ಉಪಾಸಿಸಲ್ಪಡುವುದರಿಂದ ಮಂತ್ರಸ್ವರೂಪನೂ - ಆ ಶಾಸ್ತ್ರದಲ್ಲಿಯೇ ಹೇಳಲ್ಪಟ್ಟ ಸುದರ್ಶನಮಂತ್ರ ಮೊದಲಾದ ರೇಖಾವಿಶೇಷಗಳಿಂದ ಪೂಜಿಸಲ್ಪಡುವವನೂ ಆದುದರಿಂದ ಮಂತ್ರಮಂತ್ರ ಸ್ವರೂಪನು ); ಮಂತ್ರಬೀಜ = ಬೀಜಮಂತ್ರ ಅಥವಾ ಮಂತ್ರಗಳಿಗೆ ಕಾರಣನೆ ; ಮಹಮಂತ್ರರಾಜ = ಅಷ್ಟಾಕ್ಷರ ಮೊದಲಾದ ಮಂತ್ರಶ್ರೇಷ್ಠ ಸ್ವರೂಪನೇ ಅಥವಾ ಮಹಾಮಂತ್ರಗಳಿಂದ ಜಪಿಸಲ್ಪಡುವುದರಿಂದ ಮಹಾಮಂತ್ರಗಳ ಅರಸನೆ ; ಗುರುಮಂತ್ರಧೃತ = ಗುರುಗಳು ಉಪದೇಶಿಸಿದ ಮಂತ್ರಗಳಿಂದ ದೊರಕುವವನೆ ಅಂದರೆ ಆ ಮಂತ್ರ ಜಪಿಸಿದವರಿಗೆ ವಶನಾಗುವನೆ ; ಮಂತ್ರಮೇಯ = ಮಂತ್ರಗಳಿಂದ ತಿಳಿಯಲ್ಪಡತಕ್ಕವನೇ ; ಮಹಾಮಂತ್ರಗಮ್ಯ = ಮಹಾತ್ಮರ ರಹಸ್ಯೋಪದೇಶದಿಂದ ತಿಳಿಯಲ್ಪಡತಕ್ಕವನೆ ಅಥವಾ ಶ್ರೇಷ್ಠಮಂತ್ರಗಳಿಂದ ದರ್ಶನ ಕೊಡತಕ್ಕವನೆ ; ವರಮಂತ್ರದೇವ = ಶ್ರೇಷ್ಠಮಂತ್ರಗಳಲ್ಲಿ ಪ್ರಕಾಶಿಸುತ್ತಿರುವವನೇ ; ಜಗನ್ನಾಥವಿಠಲ = ಜಗತ್ಸ್ವಾಮಿಯಾದ ವಿಠಲನೇ ಅಥವಾ ಈ ಜಗನ್ನಾಥದಾಸವರದವಿಟ್ಠಲನೇ ; ನಿನ್ನ ದಾಸನು ನಾನು.

ದಾಸರಾಯರು ಈ ಕೀರ್ತನದಲ್ಲಿ ಜೀವ - ಕಾಲ - ಕರ್ಮ - ಧರ್ಮ - ಮಂತ್ರ ಈ ಐದು ವಿಷಯಗಳಿಗೆ ನಿಯಾಮಕನಾದ ಶ್ರೀಹರಿಯ ದಾಸನು ತಾನೆಂದು ಜೀವನು ಭಗವಂತನನ್ನು ಉಪಾಸಿಸಿದರೆ ಸಂಸಾರಬಂಧದುಃಖ ನಿವಾರಣೆಯಾಗಿ ನಿತ್ಯಸುಖಸ್ವರೂಪಮೋಕ್ಷಲಾಭವಾಗುವುದೆಂದು ಉಪದೇಶಿಸಿದ್ದಾರೆ . ಹಾಗೂ ಜೀವನು ತನ್ನ ಅಂತರ್ಯಾಮಿ ಶ್ರೀಹರಿಯ ಪ್ರೇರಣೆಯಿಂದ ಕರ್ಮಗಳನ್ನು ಕಾಲಾನುಸಾರವಾಗಿ ಆಚರಿಸಿ ಧರ್ಮವನ್ನು ಬಿಡದೆ , ಮಂತ್ರಗಳನ್ನು ಜಪಿಸಿ ಶ್ರೀಹರಿಯ ಅನುಗ್ರಹವನ್ನು ಸಂಪಾದಿಸಿದರೆ ಇಹದಲ್ಲಿ ಸರ್ವಾಭಿಷ್ಟಸಿದ್ಧಿ , ಪರದಲ್ಲಿ ಮೋಕ್ಷಲಾಭವಾಗುವುದೆಂಬ ಸನ್ಮಾರ್ಗದ ತತ್ವವನ್ನು ಬೋಧಿಸಿದ್ದಾರೆ. ಜೀವವಿಲಕ್ಷಣ ಎಂಬುದರಿಂದ :-

ದ್ವಾಸುಪರ್ಣಾ ಸಯುಜಾ ಸಖಾಯಾ ಸಮಾನಂ ವೃಕ್ಷಂ ಪರಿಷಸ್ವಜಾತೇ ।
ತಯೋರನ್ಯಃಪಿಪ್ಪಲಂ ಸ್ವಾದ್ವತ್ತ್ಯನಶ್ನನ್ನನ್ಯೋ ಅಭಿಚಾಕಶೀತಿ ॥

ಜೀವ - ಪರಮಾತ್ಮ ಎಂಬ ಎರಡು ಪಕ್ಷಿಗಳು ಒಟ್ಟಿಗೇ ಒಂದು ಶರೀರವೆಂಬ ವೃಕ್ಷವನ್ನು ಸೇರುತ್ತವೆ. ಅವರಲ್ಲಿ ಜೀವನೆಂಬ ಪಕ್ಷಿಯು ಆಪಾತತಃ ಸುಖವಾಗಿ ರುಚಿಯಾಗಿ ತೋರುವ ಕರ್ಮಫಲವನ್ನುಣ್ಣುತ್ತಾನೆ. ಅವನಿಂದ ಭಿನ್ನವಾದ ಪರಮಾತ್ಮನೆಂಬ ಪಕ್ಷಿಯು ಅದನ್ನುಣ್ಣದೇನೇ ಚೆನ್ನಾಗಿ ಪ್ರಕಾಶಿಸುತ್ತಲಿದ್ದಾನೆ ಎಂಬ ಜೀವಪರಮಾತ್ಮರ ಭೇದಸಾಧಕಪ್ರಮಾಣಾರ್ಥವನ್ನು " ಜೀವವಿಲಕ್ಷಣ " ಎಂಬುದರಿಂದ ಸೂಚಿಸಿದ್ದಾರೆ. ' ದಾಸೋऽಹಂ ' ಎಂಬುದರಿಂದ ಪರಮಾತ್ಮನು ಉದ್ಧರಿಸುವ ಸ್ವಾಮಿಯೆಂದೂ ಜೀವರು ಆತನ ಕಿಂಕರರೆಂದೂ ಸಾಧಿಸುವ ಶ್ರೀಮಾಧ್ವಭಾಷ್ಯದ ವಚನ :- 

ದ್ರವ್ಯಂ ಕರ್ಮ ಚ ಕಾಲಶ್ಚ ಸ್ವಭಾವೋ ಜೀವ ಏವ ಚ ।
ಯದನುಗ್ರಹತಃ ಸಂತಿ ನ ಸಂತಿ ಯದುಪೇಕ್ಷಯಾ ॥

ಪ್ರಕೃತ್ಯಾದಿ ತತ್ವಗಳೂ - ಕರ್ಮವೂ - ಕಾಲವೂ - ಪ್ರಕೃತ್ಯಾದಿಗಳ ಪರಿಣಾಮವೂ - ಜೀವನಿಗೆ ಯಾವ ಶ್ರೀಹರಿಯ ಅನುಗ್ರಹದಿಂದಲೇ ಇರುವುವೋ , ಯಾವ ಹರಿಯು ಉಪೇಕ್ಷಿಸಿಬಿಟ್ಟರೆ ಇರಲಾರವೋ ಅಂತಹ ಹರಿಯನ್ನು ಉಪಾಸಿಸಬೇಕು ಎಂಬ ತಾತ್ಪರ್ಯವನ್ನು ಸೂಚಿಸಿದ್ದಾರೆ.
ಶ್ರೀಹರಿಯು ಜಗತ್ತಿನ ಸೃಷ್ಟ್ಯಾದಿಯನ್ನು ಸತ್ಯವಾಗಿ ನಿತ್ಯದಲ್ಲಿ ಮಾಡುವವನಲ್ಲದೆ ಐಂದ್ರಜಾಲಿಕನಂತೆ (ಅಸತ್ಯ) ಮಾಯಾಸೃಷ್ಟಿ ಮಾಡುವುದಿಲ್ಲ ಎಂದು ಉಪಾಸಿಸಬೇಕು ಎಂಬುದನ್ನು ಈ ಐದು ನುಡಿಗಳಿಂದ ಸಾಧಿಸಿರುತ್ತಾರೆ.
ವ್ಯಾಖ್ಯಾನ :
ಹರಿದಾಸರತ್ನಂ ಶ್ರೀಗೋಪಾಲದಾಸರು
**********

No comments:

Post a Comment