Friday, 1 October 2021

ಅನ್ನದಾನದ ಸುಖ ನಿನಗಲ್ಲದೆ ಬೇರೆಅನ್ಯ ಜನ ankita indiresha ANNADAANADA SUKHA NINAGALLADE BERE ANYA



ತಿರುಪತಿ ಶ್ರೀ ಪಾಂಡುರಂಗಿ ಹುಚ್ಚಾಚಾರ್ಯ ವಿರಚಿತ 
( ಇಂದಿರೇಶಾಂಕಿತ )

 ಶ್ರೀ  ಬ್ರಹ್ಮದೇವರ ಸ್ತುತಿ ಪದ 

 ರಾಗ : ಗಾಂಗೇಯಭೂಷಿಣಿ 

 ಖಂಡಛಾಪು 

ಅನ್ನದಾನದ ಸುಖ ನಿನಗಲ್ಲದೆ ಧಾತಾ
ರನ್ಯ ಜನದೊಳುಂಟೆ ಜನ್ಯ ಜನಕನೆ॥ಪ॥

ಕೊಟ್ಟದನ್ನಕ್ಕೆ ಸಮ,ಮಿಷ್ಟ ಫಲವನುಂಬಿ
ಇಷ್ಟು ಜನರು ಬಲಿ ಕೊಟ್ಟು ಭುಂಜಿಪರು॥೧॥

ಯೋಷಿಸಹಿತ ಒಂದು ಕೂಸು ಬರಲು ಜಗತ್
ಕೋಶಮನ್ನವ ಮಾಡಿ ನೀ ಸಮರ್ಪಿಸಿದೆ॥೨॥

 ಇಂದಿರೇಶಗೆ ಕೊಟ್ಟಾ, ಮಂದ ದಾನದಿ ಶತಾ
ನಂದ ನಾದಿಯೋ ಮುಕ್ತಿ ಮಂದಿರಗೊಳಗೆ।
ಹರಿತಂದು ತೋರೆನಗೆ
॥೩॥
****

by ಪಾಂಡುರಂಗೀ ಹುಚ್ಚಾಚಾರ್ಯರು

ಅನ್ನದಾನದ ಸುಖ ನಿನಗಲ್ಲದೆ ಬೇರೆ
ಅನ್ಯ ಜನರೊಳಗುಂಟೆ ಜನ್ಯ ಜನಕಾ    ||ಪ||

ಸಹಿತ ಒಂದು ಕೂಸು ಬರಲು
ಜಗತ್ ಕೋಶ ಅನ್ನವ ಮಾಡಿ ನೀ ಸಮರ್ಪಿಸಿದೆ    ||೧||

ಕೊಟ್ಟ ಅನ್ನಕೆ ಸಮ ಇಷ್ಟನ್ನವೇನುಂಬಿ
ಇಷ್ಟು ಜನರು ಬಲಿಕೊಟ್ಟು ಭುಂಜಿಪರು    ||೨||

ಇಂದಿರೇಶಗೆ ಕೊಟ್ಟ ದಾನದಿ ಶತಾನಂದನಾದಿಯೇ
ಮುಕ್ತಿ ಮಂದಿರದೊಳಗೆ ಹರಿ ತಂದು ತೋರೆನಗೆ ||೩||
****

ಅನ್ನದಾನದ ಸುಖ ನಿನಗಲ್ಲದೆ ಬೇರೆ
ಅನ್ಯ ಜನರೊಳಗುಂಟೆ ಜನ್ಯ ಜನಕಾ ಪ

ಸಹಿತ ಒಂದು ಕೂಸು ಬರಲು
ಜಗತ್ ಕೋಶ ಅನ್ನವ ಮಾಡಿ ನೀ ಸಮರ್ಪಿಸಿದೆ 1

ಕೊಟ್ಟ ಅನ್ನಕೆ ಸಮ ಇಷ್ಟನ್ನವೇನುಂಬಿ
ಇಷ್ಟು ಜನರು ಬಲಿಕೊಟ್ಟು ಭುಂಜಿಪರು 2

ಇಂದಿರೇಶಗೆ ಕೊಟ್ಟ ದಾನದಿ ಶತಾನಂದನಾದಿಯೇ
ಮುಕ್ತಿ ಮಂದಿರದೊಳಗೆ ಹರಿತಂದು ತೋರೆನಗೆ 3
****


No comments:

Post a Comment