ತಿರುಮಲರಾಯನ ದೇವಳವಿಹುದೊ ಅಲ್ಲಿ
ವೇಂಕಟರಮಣನು ಎಂಥವನೆಂಥವನೊ
ಶರಣರ ಕಾಯುವ ಕರುಣಾಸಾಗರನೋ
1. ಸ್ವಾಮಿ ಪುಷ್ಕರಣಿಯ ಸ್ನಾನಗಳಿಂದಾ
ವರಾಹಮೂರ್ತಿಯಕಂದ ಆನಂದ
ತಿರುಮಲರಾಯನ ದರುಶನದಿಂದಾ
ಗುರುತರಕಲ್ಮಷವು ಗೋವಿಂದಾ .
2. ಶಿರದಿ ಮುಕುಟವು ಧರಿಸಿದ ಚಂದಾ
ಮುಖದಿ ಕಸ್ತೂರಿಯ ತಿಲಕ ಶ್ರೀಗಂಧ
ಕರದಿ ಒಪ್ಪುವ ಶಂಖಚಕ್ರಗಳಿಂದ
ಭಕ್ತರ ದುರಿತಗಳು ಗೋವಿಂದಾ
3. ಬಂಗಾರ ಗೋಪುರವು ಹೊಳೆಯುತ್ತಿರಲು
ಶೖಂಗಾರವಾಗಿಹ ಹರಿಯು ನಿಂತಿರಲು
ಪಾಪ ವಿನಾಶಿನಿಯ ಸ್ನಾನ ಮಾಡುತ್ತಿರಲು
ಪಾಪಗಳೆಲ್ಲವು ಗೋವಿಂದಾ
4. ಅಪ್ಪವು ಅತಿರಸವುಬೂಂದೆ ಪಕ್ವಾನ್ನವು
ತಪ್ಪದೆ ಸಿಗುವುದು ಬುತ್ತಿ ಚಿತ್ರಾನ್ನವು
ವೇದ ವೇದ್ಯನು ವೇಂಕಟರಮಣನು
ಸಂಕಟ ಹರಿಸುವನು ಗೋವಿಂದಾ .
5. ಮಂದಹಾಸದಿ ಮುದದಿ ಮುಕುಂದಾ
ವರದ ಹಸ್ತವು ಕೊಡುತಲಿ ನಿಂದಾ
ಇಂದಿರೇಶನ ಭಜಿಪ ಭಕ್ತವೖಂದ
ಬಂದ ದುರಿತಗಳು ಗೋವಿಂದಾ
************
No comments:
Post a Comment