Saturday, 14 December 2019

ಲಕ್ಷುಮೀ ರಮಣನಿಗೆ ಮಾಡಿದಳು ankita hayavadana LAKSHUMI RAMANIGE MAADIDALU





ಉರುಟಣಿ  ಹಾಡು 


ಲಕ್ಷುಮೀ ರಮಣನಿಗೆ ಮಾಡಿದಳು ಉರುಟಾಣಿ 
ಧರೆಯೊಳು ಅತಿಜಾಣಿ ಸುಂದರ ಫಣಿವೇಣಿ || ಅ ಪ ||

ಮಚ್ಛಾ ಕಚ್ಛಪ ಕಿರನೇ ಕೇಸರಿಯಂದದಿ ಮುಖನೇ |
ಸ್ವಚ್ಛ ಮುಖವಾತೋರೈ ನಿನಗೆ ಕುಂಕುಮ ಹಚ್ಚುವೆನು ||1||

ಬಲಿಯಾ ದಾನವ ಬೇಡಿ ನೆಲವಾ ಈರಡಿ ಮಾಡಿ 
ಅಳೆದಡೀಗಳ ತೋರೈ ಅರಿಶಿನ ಹಚ್ಚುವೆನು ||2||

ದುರುಳ ಕ್ಷತ್ರಿಯರನ್ನು ಕೊರಳ ತರಿದ ಹರಿಯೇ 
ಹರುಷದಿಂ ಕೊರಳ ತೋರೈ ಗಂಧವ ಹಚ್ಚುವೆನು ||3||

ದಶರಥನಲಿ ಜನಿಸಿ ದಶಮುಖನ ಸಂಹರಿಸಿ 
ಶಶಿಮುಖಿಯ ತಂದವನೆ ಕುಸುಮ ಮುಡಿಸುವೆನು ||4||

ಹದಿನಾರು ಸಾಸಿರ ಸುದತಿಯರಾನ್ನಾಳಿದನೇ 
ಪದುಮ ಕರವಾ ತೋರೈ ನಿನಗೆ ವೀಳ್ಯವ ಕೊಡುವೆನು ||5||

ವಸನ ರಹಿತನಾಗಿ ವಸುಧೆಯ ತಿರುಗಿದೆ 
ಬಿಸಜನಾಭನೇ ನಿನಗೆ ವಸನ ಉಡಿಸುವೆನು ||6||

ವರತುರಗವನೇರಿ ಕಲಿಯ ಸಂಹರಿಸುವಿ 
ಸಿರಿ ಹಯವದನನೆ  ಆರತಿ ಎತ್ತುವೆನು ||7||
***

pallavi

lakSmi ramaNage mADidaLu uruTANe

anupallavi

iLeyoLagatijANe sundara phaNivENi

caraNam 1

maccha kacchapa kirane kEsariyandada mukhane
svaccha mukhava tOrai arisina haccuvenu

caraNam 2

duruLa kSatriyara koraLa tarida hariye
haruSadim koraLa tOrai gandhava haccuvenu

caraNam 3

dasharathanali janisi dashamukhana samharisi
shashimukhiya tandavane kusuma muDisuvenu

caraNam 4

hadinAru sAvira sudatiyaranALidane
padumakarava tOrai vILyava koDuvenu

caraNam 5

vasanarahitanAgi vasudheya tirugide
bisajanAbhane ninage vasanava toDisuvenu

caraNam 6

vara turagavanEri kaliya samharisuvi
sirihayavadanane Aratiyettuvenu
***

ಲಕ್ಷ್ಮಿ ರಮಣಗೆ ಮಾಡಿದಳು ಉರುಟಾಣಿÉ ಪ.

ಇಳೆಯೊಳಗತಿಜಾಣೆ ಸುಂದರ ಫಣಿವೇಣಿ ಅ.ಪ.

ಮಚ್ಛ ಕಚ್ಛಪ ಕಿರನೆ ಕೇಸರಿಯಂದದ ಮುಖನೆ
ಸ್ವಚ್ಛಮುಖವ ತೋರೈ ಅರಿಸಿನ ಹಚ್ಚುವೆನು 1

ದುರುಳ ಕ್ಷತ್ರಿಯರನ್ನು ಕೊರಳ ತರಿದ ಹರಿಯೆ
ಹರುಷದಿಂ ಕೊರಳ ತೋರೈ ಗಂಧವ ಹಚ್ಚುವೆನು 2

ದಶರಥsÀನಲಿ ಜನಿಸಿ ದಶಮುಖನ ಸಂಹರಿಸಿ
ಶಶಿಮುಖಿಯ ತಂದವನೆ ಕುಸುಮ ಮುಡಿಸುವೆನು 3

ಹರಿನಾರು ಸಾಸಿರ ಸುದತಿಯರನಾಳಿದನೆ
ಪದುಮಕರವ ತೋರೈ ವೀಳ್ಯವ ಕೊಡುವೆನು 4

ವಸನರಹಿತನಾಗಿ ವಸುಧೆಯ ತಿರುಗಿದೆ
ಬಿಸಜನಾಭನೆ ನಿನಗೆ [ವಸನ ಉಡಿಸುವೆನು] 5

ವರ ತುರಗವನೇರಿ ಕಲಿಯ ಸಂಹರಿಸುವಿ
ಸಿರಿಹಯವದನನೆ ಆರತಿಯೆತ್ತುವೆನು 6
******

No comments:

Post a Comment