Friday, 13 December 2019

ಕಂಡೆ ಕಂಡೆನು ಕೃಷ್ಣ ನಿನ್ನಯ ದಿವ್ಯಮಂಗಳ ankita hayavadana KANDE KANDENU KRISHNA NINNAYA DIVYA MANGALA



csr and sudha


ಕಂಡೆ ಕಂಡೆನು ಕೃಷ್ಣ ನಿನ್ನಯ ದಿವ್ಯಮಂಗಳ ವಿಗ್ರಹ | 
ಕಂಡು ಬದುಕಿದೆ ಇಂದು ನಾನು ಕರುಣಿಸೊ ಎನ್ನೊಡೆಯನೆ ||ಪ||

ಉಟ್ಟ ದಟ್ಟಿಯು ಪಿಡಿದ ವಂಕಿಯು | ತೊಟ್ಟ ಕೌಸ್ತುಭ ಭೂಷಣ | 
ಮೆಟ್ಟಿದ ನವರತ್ನದ್ಹಾವಿಗೆ | ಇಟ್ಟ ಕಸ್ತೂರಿ ತಿಲಕವ ||೧||

ಮಂದಹಾಸವು ದಂತಪಂಕ್ತಿಯು | ಚೆಂದದಕಡೆಗಣ್ಣು ನೋಟವು | 
ಅಂದವಾದ ಕುರುಳುಗೂದಲು | ಮುದ್ದು ಸುರಿವೋ ಮುಖವ ನಾ ||೨||

ಮೊಲ್ಲೆ ಮಲ್ಲಿಗೆ ದಂಡೆಕೊರಳಲಿ | ಚೆಲ್ವ ಕಂಕಣ ಕೈಯಲಿ | 
ಗೊಲ್ಲಸತಿಯರ ಕುಚಗಳಲ್ಲಿ | ಅಲ್ಲಾಟ ಮಾಡಿ ನಗುವನ ||೩||

ಸುರರು ಪುಷ್ಪದ ವೃಷ್ಠಿ ಕರೆಯಲು ಅ |ಸುರೆಲ್ಲರು ಓಡಲು | 
ಕ್ರೂರ ಕಾಳಿಯ ಫಣಗಳಲ್ಲಿ | ಧೀರ ಕುಣಿಕುಣಿದಾಡಿದ ||೪||

ಎನ್ನ ಬಂಧನ ತರಿಸಿದನೆ | ಎನ್ನ ಪಾಪವು ಓಡಿತು | 
ಅನ್ಯದೈವವ ಭಜಿಸಲ್ಯಾತಕೆ | ಮನ್ನಿಸೊ ಶ್ರೀ ಹಯವದನ ನೆ ||೫||
****

just scroll down for other devaranama 


ರಾಗ -  ಶಂಕರಾಭರಣ  (raga tala may differ in audio)
ತಾಳ - ಏಕತಾಳ

ಕಂಡೆ ಕಂಡೆ ಕೃಷ್ಣ ನಿನ್ನಯ ದಿವ್ಯ ಮಂಗಳ ಮೂರ್ತಿಯ 
ಕಂಡು ಬದುಕಿದೆ ಇಂದು ನಾನು ಕರುಣಿಸೊ ಎನ್ನೊಡೆಯನೆ ll ಪ ll

ಉಟ್ಟ ದಟ್ಟಿಯು ಪಿಡಿದ ವಂಕಿಯು
ತೊಟ್ಟ ಕೌಸ್ತುಭ ಭೂಷಣ
ಮೆಟ್ಟಿದ ನವರತ್ನದ್ಹಾವಿಗೆ 
ಇಟ್ಟ ಕಸ್ತುರಿ ತಿಲಕವ ll 1 ll

ಮಂದಹಾಸವು ದಂತಪಂಕ್ತಿಯು
ಉಂದದ ಕಡೆಗಣ್ಣ ನೋಟವು
ಅಂದವಾದ ಕುರುಳುಗೂದಲು
ಮುದ್ದು ಸುರಿವೊ ಮುಖವ ನಾ ll 2 ll

ಮೊಲ್ಲೆ ಮಲ್ಲಿಗೆ ದಂಡೆ ಕೊರಳಲಿ
ಚೆಲ್ವ ಕಂಕಣ ಕೈಯಲಿ
ಗೊಲ್ಲ ಸತಿಯರ ಕುಚಗಳಲ್ಲಿ
ಅಲ್ಲಡೆ ಮಾಡಿ ನಗುವನ ll 3 ll

ಸುರರು ಪುಷ್ಪದ ವೃಷ್ಟಿ ಕರೆಯಲು ಅ-
ಸುರರೆಲ್ಲರು ಓಡಲು
ಕ್ರೂರ ಕಾಳಿಯ ಫಣಗಳಲ್ಲಿ
ಧೀರ ಕುಣಿಕುಣಿದಾಡಿದ ll 4 ll

ಇನ್ನು ಎನ್ನ ಬಂಧ ತೀರಿತು 
ಇನ್ನು ಕ್ಲೇಶವು ಹೋಯಿತು
ಅನ್ಯ ದೈವವ ಭಜಿಸಲ್ಯಾತಕೆ
ಮನ್ನಿಸೊ ಹಯವದನನೆ ll 5 ll
****

pallavi

kaNDe kaNDenu kruSNa ninnaya divya mangaLa mUrtiya kaNDu badukide indu nAnu karuNiso ennoDeyane

caraNam 1

uTTadaTTiyu piDida vankiyu toTTa kaustubha bhUSaNa meTTida navaratnadhAvige iTTa kastUri tilakavu

caraNam 2

mandahAsavu danta panktiyu celuva kaDegaNNa nOTavu andavAda kuruLu kUdalu muddu suriyuva mukhavanA

caraNam 3

molle mallige daNDe koraLali celva kankaNa kaiyali golla nalliyara kucagaLalli jhallujhallendu nalivana

caraNam 4

suraru puSpada vruSTi kareyalu asurarellaru ODalu krUra kALiya phaNagaLali dhIranalinalidADalu

caraNam 5

innu enna bandha tIritu innu klEshavu hOyitu innu anyara bhajisalyaake manniso hayavadanane
***

 ..

ಕಂಡೆ ಕಂಡೆನು ಕೃಷ್ಣ ನಿನ್ನಯ ದಿವ್ಯಮಂಗಳ ವಿಗ್ರಹಕಂಡು ಬದುಕಿದೆ ಇಂದು ನಾನು ಕರುಣಿಸೊ ಎನ್ನೊಡೆಯನೆ ಪ.


ಉಟ್ಟ zಟ್ಟ್ಟಿಯು ಪಿಡಿದ ವಂಕಿಯುತೊಟ್ಟ ಕೌಸ್ತುಭ ಭೂಷಣಮೆಟ್ಟಿದ ನವರತ್ನದ್ಹಾವಿಗೆಇಟ್ಟ ಕಸ್ತೂರಿ ತಿಲಕವ 1


ಮಂದಹಾಸವು ದಂತಪಂಙÉ್ತಯುಉಂದದ ಕಡೆಗಣ್ಣ ನೋಟವುಅಂದವಾದ ಕುರುಳುಗೂದಲುಮುದ್ದು ಸುರಿವೋ ಮುಖವ ನಾ 2


ಮೊಲ್ಲೆ ಮಲ್ಲಿಗೆ ದಂಡೆ ಕೊರಳಲಿಚೆಲ್ವ ಕಂಕಣ ಕೈಯಲಿಗೊಲ್ಲಸತಿಯರ ಕುಚಗಳಲ್ಲಿ[ಅಲ್ಲಳಿ] ಮಾಡಿ ನಗುವನ3


ಸುರರು ಪುಷ್ಪದ ವೃಷ್ಟಿ ಕರೆಯಲು ಅ-ಸುರರೆಲ್ಲರು ಓಡಲುಕ್ರೂರ ಕಾಳಿಯ ಫಣಗಳಲ್ಲಿಧೀರ ಕುಣಿಕುಣಿದಾಡಿದ 4


ಎನ್ನ ಬಂಧನ ತರಿಸಿದನೆಎನ್ನ ಪಾಪವು ಓಡಿತುಅನ್ಯದೈವವ ಭಜಿಸಲ್ಯಾತಕೆಮನ್ನಿಸೊ ಹಯವದನನೆ5

***



just scroll down for other devaranama 

No comments:

Post a Comment