Thursday 23 December 2021

ಸ್ಮರಿಸುವ ಜನಕೆಲ್ಲ ಭವಭಯ ಪರಿತಾಪಗಳಿಲ್ಲ ankita gurupurandara vittala SMARISUVA JANAKELLA BHAVABHAYA PARITAAPAGALILLA

Audio by Sri. Madhava Rao


ankita: gurupurandara vittala (son of purandara dasa)


ಸ್ಮರಿಸುವ ಜನಕೆಲ್ಲ ಭವಭಯ
ಪರಿತಾಪಗಳಿಲ್ಲ ||ಪ||

ಶರಣಾಗತಜನವತ್ಸಲನೆನಿಸಿದ
ಕರಿಗಿರಿದುರ್ಗದ ನರಹರಿ ನಿನ್ನನು ||ಅ||

ಪೂರ್ವಸುಕೃತದಿಂದ, ಸುಜನಕೆ
ತೋರ್ವೆ ನೀ ಮುದದಿಂದ
ಸಾರ್ವ ಕಾಲದೊಳು ಮಹದಾನಂದದಿ
ದುರ್ವಾಸರು ಪೂಜಿಪ ಮೂರುತಿ ನಿನ್ನ ||

ಕಾಶಿತೀರ್ಥದಿಂದ ಚಕ್ರ ಪ-
ರಾಶರತೀರ್ಥದಿಂದ
ಲೇಸಾದ ಮಾರುತಪಾದತೀರ್ಥ ನರ-
ಕೇಸರಿ ತೀರ್ಥದಿಂದೊಪ್ಪುವ ನಿನ್ನನು ||

ನೀನಿಹ ಕ್ಷೇತ್ರದೊಳು ಸೇರಿಹ
ವಾನರ ಪಕ್ಷಿಗಳು
ಮಾನವಾದಿ ಬಹುಪ್ರಾಣಿ ಸಮೂಹಕೆ
ಏನು ಪುಣ್ಯಫಲವಿರುವುದೊ ತಿಳಿಯದು ||

ಅತ್ತಿಯ ಮರದಲ್ಲಿ ಕಾಯ್ಗಳು
ಹತ್ತಿರುವಂದದಲಿ
ಮೊತ್ತಮೊತ್ತವಾದ ಬ್ರಹ್ಮಾಂಡ ನಿನ್ನೊಳು
ಹತ್ತಿಕೊಂಡಿಪ್ಪುದನಂತಕೋಟಿಯೆಂದು ||

ಅಡವಿಯ ಮೃಗಗಳಿಗೆ ಬಹುಬಗೆ
ಗಿಡಲತೆಮರಗಳಿಗೆ
ಒಡೆಯ ನೀನಲ್ಲದೆ ಅನ್ನೋದಕಗಳ
ಕೊಡುವರೆ ಮನುಜರು ನೀ ಗತಿ ಸಲಹೆಂದು ||

ಕ್ಷುದ್ರ ದೈತ್ಯರ ಗಂಡ ಕರುಣಸ-
ಮುದ್ರತಿಮಿರಚಂಡ
ರೌದ್ರದಿ ಅಸುರರ ಮರ್ದಿಸಿ ಲೋಕೋ-
ಪದ್ರವ ಬಿಡಿಸಿದ ರುದ್ರಾಂತರ್ಗತ ನಿನ್ನ ||

ಭೂತಗ್ರಹಾದಿಗಳು ಸೋಕಿದ
ಭೀತಿಜ್ವರಾದಿಗಳು
ಚೇತೋಮುಖ ನಿನ್ನ ನೋಡಲು ಇನ್ನಾ
ಪಾತಕವಳಿದು ಯಾತನೆ ಕಳೆವುದು ||

ಲಕ್ಷ್ಮೀ ಸಹಿತವಾಗಿ ಭಕ್ತರ
ರಕ್ಷಿಸುವುದಕಾಗಿ
ಲಕ್ಷಣಯುಕ್ತದಿ ಬಂದು ನಿಂದೆ ಶ್ರೀ
ಲಕ್ಷುಮಿನರಸಿಂಹ ನಿನ್ನ ಚರಿತ್ರೆಯ ||

ಕರಿಗಿರಿ ನರಸಿಂಹ ಭಕ್ತರ
ದುರಿತದಂತಿಸಿಂಹ
ಪರಿಪಾಲಿಸು ನಾ ಮೊರೆಹೊಕ್ಕೆನು ನಿನ್ನ
ಗುರುಪುರಂದರವಿಟ್ಠಲ ನಿನ್ನನು ||
***

ರಾಗ ಸುರುಟಿ. ಆದಿ ತಾಳ

pallavi

smarisuva janakella bhavabhaya paritApagaLilla

anupallavi

sharaNAgata jana vatsalanenisida karigiridurgada narahari ninnanu

caraNam 1

pUrva sukrtadinda sujanake tOrve nI mudadindasarva
kAladoLu mahadAnandadi durvAsaru pUjipa mUruti ninna

caraNam 2

kAshi tIrttadinda cakra parAshara tIrttadinda lEsAda
mAruta pAdatIrtta nara kEsari tIrttadindoppuva ninnanu

caraNam 3

nIniha kSEtradoLu sEriha vAnara pakSigLu manavAdi
bahuprANi samUhage Enu puNya balaviruvudo tilIyadu

caraNam 4

attiya maradalli kAigaLu hattiruvandadali mottamottavAda
brahmANDa ninnoLu hattikoNDippudananta kOTiyendu

caraNam 5

aDaviya mrgagaLige bahu bage giDalade maragaLige oDeya
nInallade annOdakagaLa koDuvare manujaru nI gati salahendu

caraNam 6

kSatra daityara gaNDa karuNa samudra timiracaNDa raudradi
asurara mardisi lOkOpadrava biDisida rudrAntargata ninna

caraNam 7

bhUta grahAdigaLu sOkida bhIti jvarAdigaLu cEtO
mukha ninna nODalu innA pAdakavaLidu yAtane kaLevudu

caraNam 8

lakSmI sahitavAgi bhaktara rakSisuvudakAgi lakSaNa
yuktadi bandu ninde shrI lakSuminarasimha ninna caritreya

caraNam 9

karigiri sahitavAgi bhaktara duritadantisimha paripAlisu
nA marehokkenu ninna guru purandara viTTala ninnanu
***

No comments:

Post a Comment