Friday 13 December 2019

ರಾಮದೂತನ ಪಾದ ತಾಮರಸವ ಕಂಡ ankita gopala vittala RAAMADOOTANA PAADA TAAMARASAVA KANDA






ರಾಮದೂತನ ಪಾದ ತಾಮರಸವ ಕಂಡ||2||
ಆ ಮನುಜನೆ ಧನ್ಯನೂ||2||

ಶ್ರೀ ಮನೋಹರನಂಘ್ರಿ 
ಭಜಕಸ್ತೋಮ ಕುಮುದಕೆ ಸೋಮನೆನಿಸುವ
ಭೂಮಿಯೊಳು ಯದುಗಿರಿಯ ಸೀಮೆಯ
ಕಾಮವರದೊಳು ಪ್ರೇಮದಿಂದಿಹ  ||ರಾಮ||

ಕೋತಿರೂಪದಿ ರಘುನಾಥನಾಜ್ಞೆಯ ತಾಳಿ
ಪಾದೋದಿಯ ಲಂಘಿಸಿ ||ಕೋತಿ ರೂಪದಿ||
ಖ್ಯಾತ ಲಂಕೆಯ ಪೊಕ್ಕು ಶೋಧಿಸಿ
ಮಾತೆಯನ್ನು ಕಂಡೆರಗಿದಶಮುಖ
ಹೋತ ಖಳಕುಲ ವ್ಯಾತ ಘಾತಿಸಿ
ಸೀತೆವಾರ್ತೆಯ ನಾಚದರುಹಿದ ||ರಾಮ||

ಪಾಂಡುಸುತನೆ ಪ್ರಚಂಡ ಗದೆಯನ್ನು
ದೋರ್ದಂಡದಿ ಧರಿಸುತಲೀ||ಪಾಂಡುಸುತ||
ಮಂಡಲದೊಳು ಭಂಡ ಕೌರವ
ಚಂಡ ರಿಪುಗಳ ಖಂಡಿಸಿ 
ಶಿರ ಚೆಂಡನಾಡಿ ಸತಿಗೆ ಕರುಳಿನ
ದಂಡೆ ಮುಡಿಸಿದ ಉಧ್ಧಂಡ ವಿಕ್ರಮ ||ರಾಮ||

ಧಾರುಣಿಯೊಳು ದ್ವಿಜನಾರಿ ಗರ್ಭದಿ ಬಂದು
ಮೂರೊಂದಾಶ್ರಮ ಧರಿಸಿ||ಧಾರುಣಿ||
ಧೀರನೀನೆರದಿಕತ್ರಿದಶ
ಸಾರಗ್ರಂಥಗಳವಿರಚಿಸುತ
ಮಹಾಶೂರ ಗೋಪಾಲವಿಠ್ಠಲನ
ಚಾರು ಚರಣಕೆ ಅರ್ಪಿಸಿದ ಗುರು ||ರಾಮ||
***

pallavi

rAma dUtana pAda tAmarasava kaNDa A manujanE dhanyanu

caraNam 1

shrI manOharananghri bhajaka stOma kumudake sOma nenisuva
bhUmiyoLu yadugiriya sImeya kAmavaradoLu prEmadindiha

caraNam 2

kOti rUpadi raghunAtnanAgneya tALi akhOdiya langhisi khyAta lankeya pokku shOdhisi
mateyanu kaNDeragi dashamukha cOra khaLa khula nyAtagAkidi sIte vArteya nAthagarugida

caraNam 3

pANDu sutane pracaNDa gadEyanna candadi dharisutali maNDaLadoLu bhaNDa kaurava
chaNDa ripugaLa khaNDisi shira ceNDanADi satige karuLina daNDe muDisida uddaNDa vikrama

caraNam 4

dhAraNiyoLu nija nAri garbhadi bandu marundAshrama dharisi kSIra nInelabhikatithaga
sAre campaga shIradi sutamaga sUda shrI gOpAla viThalana cAru caruNake arpisidava
***

No comments:

Post a Comment