Saturday 4 December 2021

ದಾಸರೇ ಗತಿಯು ನಮಗೆ ಕಾಸುವೀಸವು ankita badarayana vittala DAASARE GATIYU NAMAGE KAASUVEESAVU PURANDARA DASA STUTIH



ಶ್ರೀ ಬಾದರಾಯಣವಿಠಲ ದಾಸರ ಕೃತಿ 


.ದಾಸರೇ ಗತಿಯು ನಮಗೆ ಪುರಂದರ ದಾಸರೇ || ಪ ||
ಕಾಸು ವೀಸವು ಬೇಡದಂಥ ಸಿರಿ ಪುರಂದರ | ಅಪ ||

ನದಿಗಳಿಗೆ ಜಲಧಿಗತಿ ನರರಿಗೆ ಎಲ್ಲರ ಸುಗತಿ ಸುಧತಿಯರಿಗೆಲ್ಲಾ
ನಿಜಪತಿಯೇ ಗತಿಯು ಸದಾಕಾಲ ಶಿಷ್ಯರಿಗೆ ಗುರು ಚರಣಗಳೇ ಗತಿಯು
ಮುದದಿಂದ ಕರವೆತ್ತಿ ಕೂಗುವೆನು ಪುರಂದರ ಪುರಂದರ || ೧ ||

ತನಯರಿಗೆ ತಾಯಿ ಗತಿ ಸಸಿಗಳಿಗೆ ಮಳೆಯೆ ಗತಿ ವನದ ಲತೆಗಳಿಗೆಲ್ಲ
ತರುವೇ ಗತಿಯು || ಮನೆಗೆ ಬಂದ ಅತಿಥಿಗಳಿಗೆ ಅನ್ನದಾನವೇ ಗತಿಯು
ದಣಿದ್ಹಕ್ಕಿಗಳಿಗೆ ಗಿಡ ಗೋಪುರವೇ ಗತಿಯು ಪುರಂದರ || ೨ ||

ರಾಮ ಕಪಿಗಳಿಗೆಲ್ಲ ನಮ್ಮ ಹನುಮಪ್ಪ ಕಾಯ್ದಂತೆ
ಸ್ವಾಮಿ ಸಿರಿ ಬಾದರಾಯಣ ವಿಠ್ಠಲನಾ ಶ್ರೀ ಮನೋಹರ ಚರಣ 
ಸೇವಕರನುದ್ಧರಿಪ ಆ ಮಹಾ ನಾರದಾತ್ಮಕರಾದ ಪುರಂದರ ಪುರಂದರ || ೩ ||
***

dAsarE gatiyu namage puraMdara dAsarE || pa ||
kAsu vIsavu bEDadaMtha siri puraMdara | apa ||

nadigaLige jaladhigati nararige ellara sugati sudhatiyarigellA
nijapatiyE gatiyu sadAkAla SiShyarige guru caraNagaLE gatiyu
mudadiMda karavetti kUguvenu puraMdara puraMdara || 1 ||

tanayarige tAyi gati sasigaLige maLeye gati vanada lategaLigella
taruvE gatiyu || manege baMda atithigaLige annadAnavE gatiyu
daNid~hakkigaLige giDa gOpuravE gatiyu puraMdara || 2 ||

rAma kapigaLigella namma hanumappa kAydaMte
svAmi siri bAdarAyaNa viThThalanA SrI manOhara charaNa 
sEvakaranuddharipa A mahA nAradAtmakarAda puraMdara puraMdara || 3 ||

***

ದಾಸರೇ ಗತಿಯು ನಮಗೆ ॥ ಪ ॥
ಕಾಸುವೀಸವು ಬೇಡದಂಥ ಸಿರಿ ಪುರಂದರ ॥ ಅ ಪ ॥

ನದಿಗಳಿಗೆ ಜಲಧಿ ಗತಿ ನರರಿಗೆಲ್ಲರ ಸುಗತಿ ।
ಸುದತಿಯರಿಗೆಲ್ಲ ನಿಜ ಪತಿಯೇ ಗತಿ ॥
ಸದಕಾಲ ಶಿಷ್ಯರಿಗೆ ಗುರುಚರಣಗಳೆ ಗತಿಯು ।
ಮುದದಿಂದ ಕರವೆತ್ತಿ ಕೂಗುವೆನು ಪುರಂದರ ॥ 1 ॥

ತನಯರಿಗೆ ತಾಯೆಗತಿ ಸಸಿಗಳಿಗೆ ಮಳೆಯೆ ಗತಿ ।
ವನದ ಲತೆಗಳಿಗೆಲ್ಲ ತರುವೆ ಗತಿಯೋ ॥
ಮನೆಗೆ ಬಂದತಿಥಿಗಳಿಗನ್ನದಾನವೆ ಗತಿಯೋ ।
ದಣಿದ್ಹಕ್ಕಿಗಳಿಗೆ ಗಿಡ ಗೋಪುರವೇ ಗತಿಯೋ ॥ 2 ॥

ರಾಮಕಪಿಗಳ ನಮ್ಮ ಹನುಮಪ್ಪ ಕಾಯ್ದಂತೆ ।
ಸ್ವಾಮಿ ಸಿರಿ ಬಾದರಾಯಣವಿಠಲನ್ನ ॥
ಶ್ರೀ ಮನೋಹರ ಚರಣಸೇವಕರನುದ್ಧರಿಪ ।
ಆ ಮಹಾ ನಾರದಾತ್ಮಕರಾದ ಪುರಂದರ ॥ 3 ॥
***

 ರಾಗ ಯಮನ್ ಕಲ್ಯಾಣಿ   ಖಂಡಛಾಪುತಾಳ (raga tala may differ in audio) 

No comments:

Post a Comment