Friday 27 December 2019

ಇದಿರ್ಯಾರೊ ಗುರುವೆ ಸರಿಯಾರೊ ಯತಿಗೆ ankita shreeda vittala vyasaraja stutih

ಇದಿರ್ಯಾರೊ ಗುರುವೆ ಸರಿಯಾರೊ ಯತಿಗೆ ಸಮರ್ಯಾರೊ ||pa||

ದುರುಳ ವಾದಿಗಳನ್ನು ಮರುಳು ಮಾಡೋರನ್ನ
ತರಿದಟ್ಟಿ ಚಂದ್ರಿಕೆ ಗ್ರಂಥವ ರಚಿಸಿ
ಧರಣಿ ಸುರರ ಪರಿವೃಢರ ಸುನಿಕರಕೆ
ಪರಿಪರಿಯಲಿ ಉಪದೇಶಿಸುತಿಪ್ಪಗೆ ||1||

ಕನಕ ಕಶಿಪುತನಯನ ಘನ ಅಂಶದಿ
ಫಣಿಗಣ ರಮಣನಾವೇಶದಿ ಪೊಳೆಯುತ
ದಿನದಿನದಲಿ ಹರಿಮನ ತಣಿಸುತಲಿಹ
ಘನ ಮಹಿಮನೆ ಶ್ರೀ ಯತಿಕುಲತಿಲಕಾ ||2||

ಲಂಡವಾದಿಗಳ ಉದ್ದಂಡ ವಿತಂಡಕೆ
ಗಂಡುಸಿಂಹ ತರ್ಕದೆ ತಾಂಡವ ಯುಕ್ತಿಯ
ದಂಡುಗಳನೆ ಕಟ್ಟಿಕೊಂಡು ತಾರ್ಕಿಕರ
ಷಂಡಗಳನೆ ಖಂಡಿಸುತಿಹ ಯತಿಯೆ ||3||

ಬ್ರಹ್ಮಣ್ಯತೀರ್ಥರ ಕರಕಮಲದಿ ಪುಟ್ಟಿ
ಬ್ರಹ್ಮಜನಕ ನರಸಿಂಹ ಮೂರುತಿಯ ಹೃ-
ದ್ಗಂಹ್ವರದಲಿ ಧ್ಯಾನಿಸುತಿಹ ವ್ಯಾಸರಾ
ಹೃದಯಾಂಬುಧಿಯೊಳು ಮೆರೆವಗೆ ||4||

ದಶದಿಶೆಯಲಿ ದಶರಥಸುತ ಮಹಿಮೆಯ
ಕುಶಲದಿಂದಲಿ ಸಭೆಯೊಳಗೆ ಸ್ಥಾಪಿಸುತ
ಹೊಸ ಹೊಸ ಬಿರುದು ಸಂದ್ಹೆಸರುವೆತ್ತಿರುವಂಥ
ವಸುಧಿಯೊಳಗೆ ಸುಕರ ಸುಚರಿತೆಗೆ ||5||

ಹೊಳೆಯುತಲಿರುವ ರುಕ್ಮಿಣಿಪತಿ ಕೃಷ್ಣನು
ನಲಿಯುತ ಕುಣಿಕುಣಿದಾಡುತಲಿಪ್ಪನು
ಥಳಥಳಿಸುವ ರಾಮ ವೇದವ್ಯಾಸರು ನಿಮ-
ಗಿಳೆಯೊಳಮೂಲ್ಯ ಪ್ರಸಾದವನೀವರು ||6||

ಅಡಿಗಡಿಗತಿ ದೃಢತರ ಯುಕ್ತಿಗಳಿಂದ
ಸಡಗರದಿಂದಲಿ ಬಿಡದೆ ನುಡಿಯುತ
ನಡದದ್ವೈತದಡವಿಯೊಳಗೆ ಪೊಕ್ಕು
ಕೆಡಗುತಿಹ ನ್ಯಾಯಾಮೃತಾಚಾರ್ಯರಿಗೆ ||7||

ಶ್ರೀದವಿಠಲಗತಿ ಪ್ರೀಯರಾದ ಶ್ರೀ-
ಪಾದರಾಯರಲಿ ಓದಿ ಗ್ರಂಥಗಳ
ವಾದಿರಾಜ ವಿಜಯೀಂದ್ರ ಪ್ರಮುಖರಿಗೆ
ಆದರದಲಿ ಪಾಠ ಹೇಳುತಲಿಪ್ಪಗೆ ||8||
*******

No comments:

Post a Comment