Friday, 27 December 2019

ಸ್ಮರಿಸೊ ಸಂತತ ಮಾನವ ಗುರುವಿಷ್ಣು ತೀರ್ಥ ankita karpara narahari vishnu teertha stutih

Song on Vishnu Teertha
ಸ್ಮರಿಸೊ ಸಂತತ ಮಾನವ ಗುರುವಿಷ್ಣು ತೀರ್ಥರ ||pa||

ಸ್ಮರಿಸೊ ಟೀಕೆಯ ವಿರಚಿಸಿದ ಗುರುವರರ
ಕರುಣದಿ ಜನಿಸಿ
ಧರೆಯೊಳು ನಿರುತ ಸ್ಮರಿಸುವ ಶರಣು ಜನರಘ
ತರಿದ ಭೀಷ್ಠೆಯ ಗರಿವರಂಘ್ರಿಯ ||a.pa||

ಪುರಹರಾಂಶಜರೆನಿಸಿ ಬಾಳಾಚಾರ್ಯರ
ತರುಣಿ ಗರ್ಭದಿ ಜನಿಸಿ
ಮಳಖೇಡ ಮಂದಿರ ಗುರುನಾಮದಲಿ ಕರಿಸಿ
ವಟು ವ್ರತವ ಧರಿಸಿ
ಗುರುಕುಲದಿ ರಾಮಾರ್ಯರಿಂದಲಿ ಅರಿತು
ವೇದವೇದಾಂತ ಶಾಸ್ತ್ರವ
ಗುರುಸುತನ ಮಹಜ್ವರ ಹರಣ ನರಹರಿಯ
ಮಂತ್ರವ ಜಪಿಸಿದವರನು ||1||

ಗುರುತುರಗವನುಸರಿಸಿ ಬರುತಿರಲು ಬಿಸಿಲೊಳು
ಗುರುಪ್ರೀತಿಯನು ಬಯಸಿ ಗುರುವಿತ್ತ ಪಾದುಕವೆರಡು
ಶಿರದಲಿ ಧರಿಸಿ ಮಹಿಮೆಯನು ತಿಳಿಸಿ ಧರಿಸಿ ದ್ವಿತಿಯಾ
ಶ್ರಮದಿ ನೋಡಲು ಪರಮ ಸತ್ಕುಲ ಜಾದಿ ಗುಣಯುತ
ವರವಧೂ ಮಣಿಸಹಿತ ವಿಭವದಿ ಸಿರಿಯ
ತನದೋಳ್ಮೆರೆವರಂಘ್ರಿಯ||2||

ಮಂಚದೊಳ್ ಸುಖತಲ್ಪದಿ ಪದವತ್ತು
ತಿರೆ ಮೃಗಲಾಂಚನ ಮುಖಸಹಿತದಿ
ಪವಡಿಸಿರಲೊಂದಿನ ಕಿಂಚಿದ್ದೇಹಾಸ್ವಾಸ್ಥ್ಯದಿ
ಹರಿದಾಸ ಪಾಡಿದ
ಮಂಚಬಾರದು ಮಡದಿಬಾರಳು ಮುಂಚೆ
ಮಾಡಿರಿ ಧರ್ಮವೆಂಬುವ
ಕಿಂಚಗೀತೆಯ ಕೇಳಿದೊಡನೆ ಪ್ರಪಂಚ
ಸುಖವನು ತ್ಯಜಿಸಿಪೊರಟರ ||3||

ಫಣಿಯ ರೂಪವ ನೋಡುತ್ತ ಮಾರ್ಗದೊಳು
ಚರಿಸುತ ಗಮನ
ನಿರೋಧಿಸುತ ಯೋಚನೆಯ ಮಾಡುತಯಿರಲು
ಸ್ವಪ್ನದಿ ಸೂಚಿತ
ಶಿಷ್ಯರ ಸಮೇತ ಅನವರತ ಶ್ರೀ ಮತ್ಸುಧಾ
ಪ್ರವಚನ ವಿಜಯ ಮುನಿ
ಮನಕೆ ಸಮ್ಮತವೆನುತ ಮುನಿ ವೃತ್ತಿಯಲಿ ಸತಿಸಹ
ಮುನಿಯವಲ್ಲಿ ಯೊಳಿರುವ ಗುರುಗಳ ||4||

ಸಾರ ಗ್ರಂಥಗಳ ರಚಿಸಿ ಸತ್ಯವರತೀರ್ಥ
ಕುಮಾರಕರೆಂದೆನಿಸಿ ಸುಕ್ಷೇತ್ರ
ಮೋದನೂರೊಳು ತನುವಿರಿಸಿ ಹರಿಪದವ
ಧ್ಯಾನಿಸಿ ಸೇರಿದವರ ಘ
ದೂರ ಮಾಡುವ ಚಾರು ಕೃಷ್ಣಾತೀರ
‘ಕಾರ್ಪರ ನಾರಶಿಂಹ’ ವಲಿಮೆ ಪಡೆದ
ಅಪಾರ ಮಹಿಮರ ಚಾರು ಚರಣವ||5||
********

No comments:

Post a Comment