Friday, 6 December 2019

ಪೂರ್ವಜನ್ಮದಲಿ ನಾ ಮಾಡಿದ ಅಘದಿಂದ purandara vittala

ರಾಗ ಕಾಂಭೋಜ ಝಂಪೆತಾಳ

ಪೂರ್ವಜನ್ಮದಲಿ ನಾ ಮಾಡಿದ ಅಘದಿಂದ
ಊರ್ವಿಯೊಳು ಜನಿಸಿದೆನೊ ಕೃಷ್ಣ
ಕಾರುಣ್ಯನಿಧಿಯೆನ್ನ ಕಾಯಬೇಕಯ್ಯ ಹರಿ
ವಾರಿಜನಾಭ ಶ್ರೀಕೃಷ್ಣ || ಪ||

ಹುಟ್ಟಿದಂದಿಂದಿಗೂ ಸುಖವೆಂಬುದನು ಅರಿಯೆ
ಕಷ್ಟವಾಗಿರುತಿಹುದು ಕೃಷ್ಣ
ದಟ್ಟದಾರಿದ್ರ್ಯವನು ಪರಿಹರಿಸದಿರೆ ದೂರು
ತಟ್ಟುವುದು ನಿನಗಯ್ಯ ಕೃಷ್ಣ ||

ಕಾಸಿನಾ ಆಸೆಯನು ಮಾಡಿ ಬಹು ದಿನದಿಂದಾ-
ಯಾಸದೊಳಗಿರುತಿಹೆನೊ ಕೃಷ್ಣ
ಆಸೆಯನು ಬಿಡಿಸಿ ಮಿಗೆ ದೋಷವನು ಪರಿಹರಿಸೊ
ಸಾಸಿರನಾಮ ಶ್ರೀಕೃಷ್ಣ ||

ಮುಟ್ಟಲಂಜುವರು ಬಂಧುಗಳು ಕಂಡರೆ ಎನ್ನ
ಅಟ್ಟಿ ಕೊಲುತಿಹರಯ್ಯ ಕೃಷ್ಣ
ತೊಟ್ಟಿಲ ಶಿಶು ಬಾಯ ಬಿಡುವ ತೆರನಂತೆ ಕಂ-
ಗೆಟ್ಟು ಶೋಕಿಸುವೆನೊ ಕೃಷ್ಣ ||

ಈ ಪರಿಯಿಂದ ನಾನಾಪತ್ತು ಪೇಳಿದರ-
ನಾಥನ್ನ ಕಾಯದಿದೇಕೊ ಕೃಷ್ಣ
ಶಾಪಿಸುವೆನೆಂದರೆ ಸಾವು ಹುಟ್ಟು ನಿನಗಿಲ್ಲ
ಏಸು ದೊರೆತನವಯ್ಯ ಕೃಷ್ಣ ||

ತಂದೆತಾಯಿಯು ಇಲ್ಲ ಬಂಧುಬಳಗವು ಇಲ್ಲ
ಇಂದೇನು ತೆರಹೇಳೆ ಕೃಷ್ಣ
ಮಂದರಧರ ಶ್ರೀಪುರಂದರವಿಠಲ ನೀ
ಬಂದು ನೆಲೆಯಾಗಯ್ಯ ಕೃಷ್ಣ ||
***

Purvajanmadali na madida agadinda
Urviyolu janisideno krushna
Karunyanidhiyenna kayabekayya hari
Varijanaba srikrushna || pa||

Huttidandimdigu sukavembudanu ariye
Kashtavagirutihudu krushna
Dattadaridryavanu pariharisadire duru
Tattuvudu ninagayya krushna ||

Kasina Aseyanu madi bahu dinadinda-
Yasadolagirutiheno krushna
Aseyanu bidisi mige doshavanu parihariso
Sasiranama srikrushna ||

Muttalanjuvaru bandhugalu kandare enna
Atti kolutiharayya krushna
Tottila sisu baya biduva teranante kan-
Gettu sokisuveno krushna ||

I pariyinda nanapattu pelidara-
Nathanna kayadideko krushna
Sapisuvenendare savu huttu ninagilla
Esu doretanavayya krushna ||

Tandetayiyu illa bandhubalagavu illa
Indenu terahele krushna
Mandaradhara sripurandaravithala ni
Bandu neleyagayya krushna ||
***

ಪೂರ್ವಜನ್ಮದಲಿ ನಾ ಮಾಡಿದ ಅಘದಿಂದ
ಊರ್ವಿಯೊಳು ಜನಿಸಿದೆನೊ ಕೃಷ್ಣ
ಕಾರುಣ್ಯನಿಧಿಯೆನ್ನ ಕಾಯಬೇಕಯ್ಯ ಹರಿ
ವಾರಿಜನಾಭ ಶ್ರೀಕೃಷ್ಣ || ಪ||

ಹುಟ್ಟಿದಂದಿಂದಿಗೂ ಸುಖವೆಂಬುದನು ಅರಿಯೆ
ಕಷ್ಟವಾಗಿರುತಿಹುದು ಕೃಷ್ಣ
ದಟ್ಟದಾರಿದ್ರ್ಯವನು ಪರಿಹರಿಸದಿರೆ ದೂರು
ತಟ್ಟುವುದು ನಿನಗಯ್ಯ ಕೃಷ್ಣ ||

ಕಾಸಿನಾ ಆಸೆಯನು ಮಾಡಿ ಬಹು ದಿನದಿಂದಾ-
ಯಾಸದೊಳಗಿರುತಿಹೆನೊ ಕೃಷ್ಣ
ಆಸೆಯನು ಬಿಡಿಸಿ ಮಿಗೆ ದೋಷವನು ಪರಿಹರಿಸೊ
ಸಾಸಿರನಾಮ ಶ್ರೀಕೃಷ್ಣ ||

ಮುಟ್ಟಲಂಜುವರು ಬಂಧುಗಳು ಕಂಡರೆ ಎನ್ನ
ಅಟ್ಟಿ ಕೊಲುತಿಹರಯ್ಯ ಕೃಷ್ಣ
ತೊಟ್ಟಿಲ ಶಿಶು ಬಾಯ ಬಿಡುವ ತೆರನಂತೆ ಕಂ-
ಗೆಟ್ಟು ಶೋಕಿಸುವೆನೊ ಕೃಷ್ಣ ||

ಈ ಪರಿಯಿಂದ ನಾನಾಪತ್ತು ಪೇಳಿದರ-
ನಾಥನ್ನ ಕಾಯದಿದೇಕೊ ಕೃಷ್ಣ
ಶಾಪಿಸುವೆನೆಂದರೆ ಸಾವು ಹುಟ್ಟು ನಿನಗಿಲ್ಲ
ಏಸು ದೊರೆತನವಯ್ಯ ಕೃಷ್ಣ ||

ತಂದೆತಾಯಿಯು ಇಲ್ಲ ಬಂಧುಬಳಗವು ಇಲ್ಲ
ಇಂದೇನು ತೆರಹೇಳೆ ಕೃಷ್ಣ
ಮಂದರಧರ ಶ್ರೀಪುರಂದರವಿಠಲ ನೀ
ಬಂದು ನೆಲೆಯಾಗಯ್ಯ ಕೃಷ್ಣ ||
*********

ಪುರಂದರದಾಸರು
ಪೂರ್ವಜನ್ಮದಲಿ ನಾ ಮಾಡಿದಾ ಭವದಿಂದಉರ್ವಿಯೊಳು ಜನಿಸಿದೆನೊ ಕೃಷ್ಣ ಪ

ಕಾರುಣ್ಯನಿಧಿಯನ್ನ ಕಾಯಬೇಕಯ್ಯಹರಿವಾರಿಜನಾಭನೇ ಮುದ್ದುಕೃಷ್ಣ ಅ.ಪ

ಹುಟ್ಟಿದಂದಿಂದಿಗೂ ಸುಖವ ನಾ ಕಾಣದಲೆಕಷ್ಟನಾದೆನು ಕೇಳೊ ಕೃಷ್ಣತೊಟ್ಟಿಲಿನ ಶಿಶು ತಾಯ ಬಿಟ್ಟ ತೆರನಂತೆ ಕಂಗೆಟ್ಟು ಸೊರಗಿದೆನಯ್ಯ ಕೃಷ್ಣಮುಟ್ಟಲಮ್ಮರು ಎನ್ನಸತಿಸುತರು ಬಾಂಧವರುಅಟ್ಟಿ ಎಳೆಯುತ್ತಿಹರೋ ಕೃಷ್ಣಕಷ್ಟ ದಾರಿದ್ರ್ಯವನು ಪರಿಹರಿಸದಿರೆ ದೂರುಮುಟ್ಟುವುದು ನಿನಗಯ್ಯ ಕೃಷ್ಣ 1

ಕಾಶಿಯಾವಾಸವನು ಬಯಸಿ ಬಹುದಿನದಿಂದಆಸೆಯೊಳಗಿದ್ದೆನಯ್ಯ ಕೃಷ್ಣಗಾಸಿಯನು ಮಾಡದಲೆ ದೋಷವನು ಪರಿಹರಿಸೊಸಾಸಿರನಾಮದ ಕೃಷ್ಣಹೇಸಿಕೆಯೊಳಿರ್ದ ಸಂಸಾರವೆಂಬುವ ಮಾಯಪಾಶದಿಂದಲಿ ಬಿಗಿದರೇ ಕೃಷ್ಣಕಂಸಮರ್ದನನೆ ನೀ ಕಾಯಬೇಕಯ್ಯಹರಿವಾಸುದೇವನೆ ಮುದ್ದು ಕೃಷ್ಣ 2

ಲೋಕದೊಳಗೆನ್ನನು ಪೋಲ್ಪ ಪಾಪಿಗಳನ್ನುನೀ ಕಂಡು ಬಲ್ಲೆಯಾ ಕೃಷ್ಣಸಾಕಿನ್ನು ಎನಗೊಂದು ಗತಿಯ ತೋರಿಸಿ ಸದ್ವಿವೇಕಿಯನೆ ಮಾಡಯ್ಯ ಕೃಷ್ಣರಾಕೇಂದುಮುಖಿ ದ್ರೌಪದಿಯಮಾನವಕಾಯ್ದೆಆಕೆಗಕ್ಷಯವಿತ್ತೆ ಕೃಷ್ಣ ಪಿನಾಕಿಸಖಪುರಂದರವಿಠಲನೆ ಉಡುಪಿಯ ವಾಸಸಾಕಿ ಸಲಹೈ ಎನ್ನ ಕೃಷ್ಣ

********
*********

No comments:

Post a Comment