Brahmothsava Haadu
ಬಂದು ನಿಂತಿಹ ನೋಡಿ ಭೂತಳದಿ ವೆಂಕಟ
ಇಂದಿರೆಯನೊಡಗೂಡಿ ಒಪ್ಪುವ ನಿರಂತರ
ಪೊಂದಿ ಭಜನೆಯ ಮಾಡಿ ಆನಂದಬೇಡಿ ॥ ಪ ॥
ವಂದಿಸುತ ಮನದೊಳಗೆ ಇವನಡಿ -
ದ್ವಂದ್ವ ಭಜಿಸಲು ಬಂದ ಭಯಹರ
ಇಂದುಧರ ಸುರವೃಂದನುತ ಗೋ -
ವಿಂದ ಘನದಯಸಿಂಧು ಶ್ರೀಹರಿ ॥ ಅ.ಪ ॥
ದ್ವಾರದೆಡಬಲದಲ್ಲಿ ಜಯವಿಜಯರಿಬ್ಬರು
ಸೇರಿ ಸೇವಿಪರಲ್ಲಿ ಸನಕಾದಿನುತ ಶೃಂ -
ಗಾರನಿಧಿ ಅಂಗದಲ್ಲಿ ಮುತ್ತಿನಲಿ ಶೋಭಿಪ
ಹಾರ ಹೊಂದಿಹುದಲ್ಲಿ ವಿಸ್ತಾರದಲ್ಲಿ ॥
ವಾರವಾರಕೆ ಪೂಜೆಗೊಂಬುವ
ಹಾರ ಮುಕುಟಾಭರಣ ಕುಂಡಲ -
ಧಾರಿ ಭುಜಕೇಯೂರಭೂಷಿತ
ಮಾರಪಿತ ಗುಣಮೋಹನಾಂಗ ॥
ಚಾರುಪೀತಾಂಬರಕಟಿಯ ಕರ -
ವೀರ ಕಲ್ಹಾರಾದಿ ಹೂವಿನ
ಹಾರ ಕೊರಳೊಳು ಎಸೆಯುತಿರೆ ವದ -
ನಾರವಿಂದನು ನಗುತ ನಲಿಯುತ ॥ ೧ ॥
ಎಲ್ಲ ಭಕುತರಭೀಷ್ಟ ಕೊಡುವುದಕೆ ತಾ ಕೈ -
ವಲ್ಯ ಸ್ಥಾನವ ಬಿಟ್ಟ ಶೇಷಾದ್ರಿ ಮಂದಿರ -
ದಲ್ಲಿ ಲೋಲುಪದಿಟ್ಟ ಸೌಭಾಗ್ಯನಿಧಿಗೆದು -
ರಿಲ್ಲ ಭುಜಬಲಪುಷ್ಟ ಕಸ್ತೂರಿಯಿಟ್ಟ ॥
ಚೆಲ್ವ ಫಣೆಯಲಿ ಶೋಭಿಸುವ ಸಿರಿ -
ವಲ್ಲಭನ ಗುಣ ಪೊಗಳದಿಹ ಜಗ -
ಖುಲ್ಲರೆದೆದಲ್ಲಣ ಪರಾಕ್ರಮ
ಮಲ್ಲಮರ್ದನ ಮಾತುಳಾಂತಕ ॥
ಫಲ್ಗುಣನ ಸಖ ಪ್ರಕಟನಾಗಿಹ
ದುರ್ಲಭನು ಅಘದೂರ ಬಹುಮಾಂ -
ಗಲ್ಯ ಹೃದಯನು ಸೃಷ್ಟಿಗೆ
ಉಲ್ಲಾಸಕೊಡುತಲಿ ಚಂದದಿಂದಲಿ ॥ ೨ ॥
ಪದಕ ಕೌಸ್ತುಭಹಾರ ಸರಿಗೆಯ ಕಂಧರ
ಸುದರ್ಶನದರಧಾರ ಸುಂದರ ಮನೋಹರ
ಪದಯುಗದಿ ನೂಪುರ ಇಟ್ಟಿಹನು ಸನ್ಮುನಿ -
ಹೃದಯಸ್ಥಿತ ಗಂಭೀರ ಬಲುದಾನಶೂರ ॥
ವಿಧಿಭವಾದ್ಯರ ಪೊರೆವ ದಾತನು
ತುದಿಮೊದಲು ಮಧ್ಯಾಂತರಹಿತನು
ಉದುಭವಾದಿಗಳೀವ ಕರ್ತನು
ತ್ರಿದಶಪೂಜಿತ ತ್ರಿಭುವನೇಶ॥
ಸದುವಿಲಾಸದಿ ಸ್ವಾಮಿತೀರ್ಥದಿ
ಉದಿಸುತಿರೆ ಸಿರಿಮಹಿಳೆ ಸಹಿತದಿ
ಪದುಮನಾಭ ಪುರಂದರವಿಠಲ ನು
ಮುದದಿ ಬ್ರಹ್ಮೋತ್ಸವದಿ ಮೆರೆಯುತ ॥ ೩ ॥
****
ರಾಗ ಮಧ್ಯಮಾವತಿ ಖಂಡಛಾಪುತಾಳ (raga, taala may differ in audio)
ರಾಗ ಮಧ್ಯಮಾವತಿ. ಅಟ ತಾಳ
Bandu nindiha nodi bhutaladi venkata indireya oda kudi
oppuva nirantara pondi bhajaneya madi Ananda kudi
Vandisuta manadolage ivanadi dvandava bhajisalu banda bhayahara
indudhara sura vrndanuta govinda ghana daya sindhu shri hari
Dvaradeda baladalli jaya vijayaribbaru seri seviparalli sanakadinuta
shrngaradi angadalli muttinali shobhipa hara pondihudalli vistaradalli
vara varake puje kombuva hara mukutabharana kundala
dara puja keyura bhusita marapita guna mohananga
caru pitambara katiya kara vira kalharadi huvina
hara koralolu esevutire vada naravindanu naguta naliyuta||1||
ella bhakutarabhista koduvudake ta kaivalya sthanava bittu
shesadri mandiradalli lolupaditta saubhagya nidhigidirilla
bhujabala pusta kasturiyitta celva phanryali shobhisuva siri
vallabhana guna pogaladiha jaga khullarededallana parakrama
mallamardana madulari phalguna sakha prakatanagiha durlabanu
aghadura bahu mangalya hrdayanu shrstige ullasa kodutali chandadindali||2||
padaka kaustubhadhara sarigeya kandara su-darushanadharadara
sundara manohara padayugadi nupura ittihanu sanmuni hrdayasthita
gambhira bahu danashura vidhi bhavatyara poreva datanu tudi modalu
madhyama virahitanu udubhavadigaliva kartanu tridasha pujita
tribhuvanesha saduvilasadi svami tirttadi udisutire siramahile sahitadi
padumanabha purandara vittala mudadi prahmotsavadi merayutha||3||
***
pallavi
bandu nindiha nODi bhUtaLadi vEnkaTa indireya oDa kUDi oppuva nirantara pondi bhajaneya mADi Ananda kUDi
anupallavi
vandisuta manadoLage ivanaDi dvandava bhajisalu banda bhayahara indudhara sura vrndanuta gOvinda ghana dayA sindhu shrI hari
caraNam 1
dvAradeDa baladalli jaya vijayaribbaru sEri sEviparalli sanakAdinuta
shrngArAdi angadalli muttinali shObhipa hAra pondihudalli vistAradalli
vAra vArake pUje kombuva hAra mukuTAbharaNa kuNDala
dAra pUja kEyura bhUSita mArapita guNa mOhanAnga
cAru pItAmbara kaTiya kara vIra kalhArAdi hUvina
hAra koraLoLu esevutire vada nAravindanu naguta naliyuta
caraNam 2
ella bhakutarAbhISTa koDuvudake tA kaivalya sthAnava biTTu
shESAdri mandiradalli lOlupadiTTa saubhAgya nidhigidirilla
bhujabala puSTa kastUriyiTTa celva phaNryali shObhisuva siri
vallabhana guNa pogaLadiha jaga khullarededallana parAkrama
mallamardana mAduLAri phalguNa sakha prakaTanAgiha durlabanu
aghadUra bahu mAngalya hrdayanu shrSTige ullAsa koDutali candadindali
caraNam 3
padaka kaustubhadhAra sarigeya kandara su-darushanadharadAra
sundara manOhara padayugadi nUpura iTTihanu sanmuni hrdayasthita
gambhIra bahu dAnashUra vidhi bhavAtyara poreva dAtanu tudi modalu
madhyama virahitanu udubhavAdigaLIva kartanu tridasha pUjita
tribhuvanEsha saduvilAsadi svAmi tIrttadi udisutire siramahiLe sahitadi
padumanAbha purandara viTTala mudadi prahmOtsavadi merayuta
***
ಬಂದು ನಿಂದಿಹ ನೋಡಿ
ಭೂತಳದಿ ವೆಂಕಟ
ಇಂದಿರೆಯ ಒಡಗೂಡಿ
ಒಪ್ಪುವ ನಿರಂತರ
ಪೊಂದಿ ಭಜನೆಯ ಮಾಡಿ ಆನಂದಗೂಡಿ || ಪ||
ವಂದಿಸುತ ಮನದೊಳಗೆ ಇವನಡಿ
ದ್ವಂದವ ಭಜಿಸಲು ಬಂದ ಭಯಹರ
ಇಂದುಧರ ಸುರ ವೃಂದನುತ ಗೋ-
ವಿಂದ ಘನ ದಯಾ ಸಿಂಧು ಶ್ರೀ ಹರಿ ||ಅ||
ದ್ವಾರದೆಡಬಲದಲ್ಲಿ
ಜಯ ವಿಜಯರಿಬ್ಬರು
ಸೇರಿ ಸೇವಿಪರಲ್ಲಿ
ಸನಕಾದಿನುತ ಶೃಂ-
ಗಾರನಿಧಿ ಅಂಗದಲ್ಲಿ
ಮುತ್ತಿನಲಿ ಶೋಭಿಪ
ಹಾರ ಪೊಂದಿಹುದಲ್ಲಿ
ವಿಸ್ತಾರದಲ್ಲಿ |
ವಾರವಾರಕೆ ಪೂಜೆಗೊಂಬುವ
ಹಾರ ಮುಕುಟಾಭರಣ ಕುಂಡಲ
ಧಾರ ಭುಜಕೇಯೂರ ಭೂಷಿತ
ಮಾರಪಿತ ಗುಣ ಮೋಹನಾಂಗ
ಚಾರುಪೀತಾಂಬರಕಟಿ ಕರ-
ವೀರ ಕಲ್ಹಾರಾದಿ ಪೂವಿನ
ಹಾರ ಕೊರಳೊಳು ಎಸೆವುತಿರೆ ವದ-
ನಾರವಿಂದನು ನಗುತ ನಲಿಯುತೆ ||
ಎಲ್ಲ ಭಕುತರಭೀಷ್ಟ
ಕೊಡುವುದಕೆ ತಾ ಕೈ-
ವಲ್ಯಸ್ಥಾನವ ಬಿಟ್ಟ
ಶೇಷಾದ್ರಿ ಮಂದಿರ-
ದಲ್ಲಿ ಲೋಲುಪ ದಿಟ್ಟ
ಸೌಭಾಗ್ಯನಿಧಿಗಿದಿ-
ರಿಲ್ಲ ಭುಜಬಲಪುಷ್ಟ
ಕಸ್ತೂರಿಯಿಟ್ಟ |
ಚೆಲ್ವ ಫಣೆಯಲಿ ಶೋಭಿಸುವ ಸಿರಿ
ವಲ್ಲಭನ ಗುಣ ಪೊಗಳದಿಹ ಜಗ
ಖುಲ್ಲರೆದೆದಲ್ಲಣ ಪರಾಕ್ರಮ
ಮಲ್ಲಮರ್ದನ ಮಾತುಳಾರಿ
ಫಲ್ಗುಣನ ಸಖ ಪ್ರಕಟನಾಗಿಹ
ದುರ್ಲಭನು ಅಘದೂರ ಬಹು ಮಾಂ-
ಗಲ್ಯ ಹೃದಯನು ಸೃಷ್ಟಿಗೆ
ಉಲ್ಲಾಸ ಕೊಡುತಲಿ ಚಂದದಿಂದಲಿ ||
ಪದಕ ಕೌಸ್ತುಭಧಾರ
ಸರಿಗೆಯ ಕಂದರ
ಸುದರುಶನಧರದಾರ
ಸುಂದರ ಮನೋಹರ ಪದಯುಗದಿ ನೂಪುರ
ಇಟ್ಟಿಹನು ಸನ್ಮುನಿ
ಹೃದಯಸ್ಥಿತ ಗಂಭೀರ
ಬಹು ದಾನಶೂರ |
ವಿಧಿಭವಾತ್ಯರ ಪೊರೆವ ದಾತನು
ತುದಿಮೊದಲು ಮಧ್ಯಮವಿರಹಿತನು
ಉದುಭವಾದಿಗಳೀವ ಕರ್ತನು
ತ್ರಿದಶಪೂಜಿತ ತ್ರಿಭುವನೇಶ
ಸದುವಿಲಾಸದಿ ಸ್ವಾಮಿತೀರ್ಥದಿ
ಉದಿಸುತಿರೆ ಸಿರಿಮಹಿಳೆ ಸಹಿತದಿ
ಪದುಮನಾಭ ಪುರಂದರವಿಠಲ
ಪ್ರತಿ ವರುಷ ಬ್ರಹ್ಮೋತ್ಸವದಿ ಮೆರೆಯುತ ||
*********
ಬಂದು ನಿಂತಿಹ ನೋಡಿ ಭೂತಳದಿ ವೆಂಕಟ
ಇಂದಿರೆಯ ಒಡಗೂಡಿ ಒಪ್ಪುವ ನಿರಂತರ
ಪೊಂದಿ ಭಜನೆಯ ಮಾಡಿ ಆನಂದಗೂಡಿ
ವಂದಿಸುತ ಮನದೊಳಗೆ ಇವನಡಿ
ದ್ವಂದ್ವ ಭಜಿಸಲು ಬಂದ ಭಯಹರ
ಇಂದುಧರ ಸುರವೃಂದನುತ ಗೋ-
ವಿಂದ ಘನ ದಯಾಸಿಂಧು ಶ್ರೀಹರಿ
ದ್ವಾರದೆಡಬಲದಲ್ಲಿ ಜಯವಿಜಯರಿಬ್ಬರು
ಸೇರಿ ಸೇವಿಪರಲ್ಲಿ ಸನಕಾದಿನುತ ಶೃಂ-
ಗಾರ ನಿಧಿ ಅಂಗದಲ್ಲಿ ಮುತ್ತಿನಲಿ ಶೋಭಿಪ
ಹಾರ ಪೊಂದಿಹುದಲ್ಲಿ ವಿಸ್ತಾರದಲ್ಲಿ
ವಾರವಾರಕೆ ಪೂಜೆಗೊಂಬುವ
ಹಾರ ಮುಕುಟಾಭರಣ ಕುಂಡಲಧಾರ ಭುಜ ಕೇ-
ಯೂರಭೂಷಿತ ಮಾರಪಿತ ಗುಣ ಮೋಹನಾಂಗ
ಚಾರು ಪೀತಾಂಬರ ಕಟಿ ಕರವೀರ ಕ-
ಲ್ಹಾರಾದಿ ಪೂವಿನ ಹಾರ ಕೊರಳೊಳು ಎಸೆವು-
ತಿರೆ ವದನಾರವಿಂದನು ನಗುತ ನಲಿಯುತ
ಎಲ್ಲ ಭುಕುತರಭೀಷ್ಟ ಕೊಡುವುದಕೆ ತಾ ಕೈ-
ವಲ್ಯಸ್ಥಾನವ ಬಿಟ್ಟ ಶೇಷಾದ್ರಿ ಮಂದಿರ
ದಲ್ಲಿ ಲೋಲುಪ ದಿಟ್ಟ ಸೌಭಾಗ್ಯನಿಧಿಗೆದು-
ರಿಲ್ಲ ಭುಜಬಲ ಪುಷ್ಪ ಕಸ್ತೂರಿಯಿಟ್ಟ
ಚೆಲ್ವ ಫಣಿಯಲಿ ಶೋಭಿಸುವ ಸಿರಿ-
ವಲ್ಲಭನ ಗುಣ ಪೊಗಳದಿಹ ಜಗ ಖುಲ್ಲರೆದೆದಲ್ಲಣ ಪರಾಕ್ರಮ
ಮಲ್ಲಮರ್ದನ ಮಾತುಳಾರಿ ಫಲ್ಗುಣನ ಸಖ ಪ್ರಕಟನಾಗಿಹ
ದುರ್ಲಭನು ಅಘದೂರ ಬಹುಮಾಂಗಲ್ಯು ಹೃದಯನು ಸೃಷ್ಟಿಗೆ
ಉಲ್ಲಾಸ ಕೊಡುತಲಿ ಚಂದದಿಂದಲಿ
ಪದಕ ಕೌಸ್ತುಭಧಾರ ಸರಿಗೆಯ ಕಂಧರ
ಸುದರುಶನದರಧಾರ ಸುಂದರ ಮನೋಹರ
ಪದಯುಗದಿ ನೂಪುರ ಇಟ್ಟಿಹನು
ಸನ್ಮುನಿ ಹೃದಯಸ್ಥಿತ ಗಂಭೀರ ಬಹು ದಾನಶೂರ
ವಿಧಿ ಭವಾದ್ಯರ ಪೊರೆವ ದಾತನು
ತುದಿ ಮೊದಲು ಮಧ್ಯಮ ವಿರಹಿತನು ಉದುಭವಾದಿಗಳೀವ ಕರ್ತನು
ತ್ರಿದಶಪೂಜಿತ ತ್ರಿಭುವನೇಶ ಸದುವಿಲಾಸದಿ ಸ್ವಾಮಿತೀರ್ಥದಿ
ಉದಿಸುತಿರೆ ಸಿರಿ ಮಹಿಳೆ ಸಹಿತದಿ ಪದುಮನಾಭ ಪುರಂದರವಿಟ್ಠಲ ಪ್ರತಿ ವರುಷ ಬ್ರಹ್ಮೋತ್ಸವದಿ ಮೆರೆಯುತ
********
No comments:
Post a Comment