ಎನಗೊಬ್ಬ ದೊರೆಯು ದೊರಕಿದನು ||ಪ||
ವನಜ ಸಂಭವ ಜನಕ ಹನುಮಂತರ್ಯಾಮಿ ||ಅ.ಪ||
ಮಾತ ಪಿತನಾದ ಭ್ರಾತೃ ಬಾಂಧವನಾದ
ಪ್ರೀತಿಯಿಂದಲಿ ತಾನೆ ನಾಥನಾದ
ಖ್ಯಾತನು ತಾನಾದ ದಾತನು ತಾನಾದ
ಭೂತೇಶ ವಂದ್ಯ ವಿಭೂತಿ ಪ್ರಿಯನಾದ ||
ಶಂಖಚಕ್ರಾಂಕಿತದ ಸಂಕರುಷಣನಾದ
ಬಿಂಕದಿಂ ಬಿರುದುಗಳ ಪೊತ್ತವನಾದ
ಪಂಕಜ ನಯನ ಮೀನಾಂಕ ಜನಕನಾದ
ಓಂಕಾರ ಮೂರುತಿ ಪುರಂದರ ವಿಠಲನಾದ ||
****
ರಾಗ ಧನಶ್ರಿ. ಝಂಪೆ ತಾಳ (raga, taala may differ in audio)
ರಾಗ : ಪಂತುವರಾಳಿ ತಾಳ : ಅಟ್ಟ
Enagobba dore dorakidanu ||pa||
Vanaja sambavanayya hanumanantarasvami ||a.pa||
Matapitanada brata bandhavanada
Pritiyimdali tane nathanada
Kyatanu tanada datanu tanada
Butesavandya vibutipradanada ||1||
Ajaramaranada aprakrutanada
Vijayagolidu nijasutanada
Bujagasayananada trijagavanditanada
Ajamilana antyakatyamta suhrudanada ||2||
Sanka chakrankita sankarshananada
Binkadimdali birudu pottavanada
Pankajanayana minanka janakanada
Omkara muruti purandaravithalanada ||3||
***
pallavi
enagobba doreyu dorakidanu
anupallavi
vanaja sambhava janaka hanumantaryAmi
caraNam 1
mAta pitanAda bhrAtru bAndhavanAda prItiyindali tAne nAthanAda
khyAtanu tAnAda dAtanu tAnAda bhUtEsha vandya vibhUti priyanAda
caraNam 2
shanka cakrAnkitada sankaruSaNanAda binkadim birudugaLa pottavanAda
pankaja nayana mInAnka janakanAda OmkAra mUruti purandara viTTalanAda
***
ಎನಗೊಬ್ಬ ದೊರೆ ದೊರಕಿದನು ।।ಪ॥
ವನಜ ಸಂಭವನಯ್ಯ ಹನುಮನಂತರಾಸ್ವಾಮಿ ।।ಅ.ಪ॥
ಮಾತಾಪಿತನಾದ ಭ್ರಾತ ಬಾಂಧವನಾದ
ಪ್ರೀತಿಯಿಂದಲಿ ತಾನೆ ನಾಥನಾದ
ಖ್ಯಾತನು ತಾನಾದ ದಾತನು ತಾನಾದ
ಭೂತೇಶವಂದ್ಯ ವಿಭೂತಿಪ್ರದನಾದ ।।೧।।
ಅಜರಾಮರನಾದ ಅಪ್ರಾಕೃತನಾದ
ವಿಜಯಗೊಲಿದು ನಿಜಸೂತನಾದ
ಭುಜಗಶಯನನಾದ ತ್ರಿಜಗವಂದಿತನಾದ
ಅಜಾಮಿಳನ ಅಂತ್ಯಕತ್ಯಂತ ಸುಹೃದನಾದ ।।೨।।
ಶಂಖ ಚಕ್ರಾಂಕಿತ ಸಂಕರ್ಷಣನಾದ
ಬಿಂಕದಿಂದಲಿ ಬಿರುದು ಪೊತ್ತವನಾದ
ಪಂಕಜನಯನ ಮೀನಾಂಕ ಜನಕನಾದ
ಓಂಕಾರ ಮೂರುತಿ ಪುರಂದರವಿಠಲನಾದ ।।೪।।
********
No comments:
Post a Comment