ರಾಗ ಸೌರಾಷ್ಟ್ರ ಅಟತಾಳ
ಕೈಮೀರಿ ಹೋದ ಮಾತಿಗೆ ಹುಡುಕಾಡಬಾರದು ||ಪ||
ಮಾತು ಕೇಳದ ಮಕ್ಕಳ ಹೆಸರು ತೆಗೆಯಬಾರದು , ತನ್ನ
ಪ್ರೀತಿ ಇಲ್ಲದ ಪತಿಯ ಕಂಡು ಹಿಗ್ಗಬಾರದು ||
ಜಾರತ್ವ ಮಾಡೊ ಪತ್ನಿಯ ಕೂಡಿ ಅಳಬಾರದು
ವೈರತ್ವ ಮಾಳ್ಪವರ ಸೊಲ್ಲು ಕೇಳಬಾರದು ||
ದುಷ್ಟೆ ಕರ್ಕಶಿ ಸ್ತ್ರೀಯಳ ಹೆಸರು ತೆಗೆಯಬಾರದು
ಹತ್ತು ಮಂದಿಗಂಜದವನ ಸ್ನೇಹಿಸಬಾರದು ||
ಪಂಕ್ತ್ಯಾಗೆ ಪರಪಂಕ್ತಿಯನ್ನು ಮಾಡಬಾರದು
ಮಂಕುಜೀವನಾಗಿ ಮುಕ್ತಿ ಬೇಡಬಾರದು ||
ಆಚಾರಹೀನ ಮನೆಯೊಳೂಟ ಮಾಡಬಾರದು
ವಿಚಾರ ಇಲ್ಲದ ಸಭೆಯೊಳು ಕೂಡ್ರಬಾರದು ||
ಪರಪುರುಷರಿದ್ದೆಡೆಯೊಳು ಒಬ್ಬಳಿರಬರದು , ಸ್ವಾಮಿ
ಪುರಂದರವಿಠಲನ ಧ್ಯಾನ ಮರೆಯಬಾರದು ||
***
ಕೈಮೀರಿ ಹೋದ ಮಾತಿಗೆ ಹುಡುಕಾಡಬಾರದು ||ಪ||
ಮಾತು ಕೇಳದ ಮಕ್ಕಳ ಹೆಸರು ತೆಗೆಯಬಾರದು , ತನ್ನ
ಪ್ರೀತಿ ಇಲ್ಲದ ಪತಿಯ ಕಂಡು ಹಿಗ್ಗಬಾರದು ||
ಜಾರತ್ವ ಮಾಡೊ ಪತ್ನಿಯ ಕೂಡಿ ಅಳಬಾರದು
ವೈರತ್ವ ಮಾಳ್ಪವರ ಸೊಲ್ಲು ಕೇಳಬಾರದು ||
ದುಷ್ಟೆ ಕರ್ಕಶಿ ಸ್ತ್ರೀಯಳ ಹೆಸರು ತೆಗೆಯಬಾರದು
ಹತ್ತು ಮಂದಿಗಂಜದವನ ಸ್ನೇಹಿಸಬಾರದು ||
ಪಂಕ್ತ್ಯಾಗೆ ಪರಪಂಕ್ತಿಯನ್ನು ಮಾಡಬಾರದು
ಮಂಕುಜೀವನಾಗಿ ಮುಕ್ತಿ ಬೇಡಬಾರದು ||
ಆಚಾರಹೀನ ಮನೆಯೊಳೂಟ ಮಾಡಬಾರದು
ವಿಚಾರ ಇಲ್ಲದ ಸಭೆಯೊಳು ಕೂಡ್ರಬಾರದು ||
ಪರಪುರುಷರಿದ್ದೆಡೆಯೊಳು ಒಬ್ಬಳಿರಬರದು , ಸ್ವಾಮಿ
ಪುರಂದರವಿಠಲನ ಧ್ಯಾನ ಮರೆಯಬಾರದು ||
***
pallavi
kai mIri hOda mAtige huDugADa bAradu
caraNam 1
mAtu kELada makkaLa hesara tegeya bAradu tanna prItiyillada patiya kaNDu higga bAradu
caraNam 2
jAratva mADo patniya kUDi Ala bAradu vairatva mALpavara sollu kELa bAradu
caraNam 3
duSTa karkashi strIyaLa hesaru tegeya bAradu hattu mandiganjadavana snEhisa bAradu
caraNam 4
bankyAge parabanktiyannu mADa bAradu manku jIvanAgi mukti bEDa bAradu
caraNam 5
AcAra hInana maneyoL Uta mADa bAradu vicAra illada sabheyoLu kUDara bAradu
caraNam 6
para puruSariddeDeyoLobbaLiralu bAradu svAmi purandara viTTalana dhyAna mareya bAradu
***
ಕೈಮೀರಿ ಹೋದ ಮಾತಿಗೆ ಮರುಗಬಾರದು | ಪ |
ಕೈಮೀರಿ ಹೋದ ಮಾತಿಗೆ ಮರುಗಬಾರದು | ಪ |
ಮಾತು ಕೇಳದ ಮಕ್ಕಳ ಹೆಸರು ತೆಗೆಯಬಾರದು |
ಪ್ರೀತಿಯಿಲ್ಲದ ಪತಿಯ ಕಂಡು ಹಿಗ್ಗಬಾರದು | ೧ |
ಜಾರತ್ವ ಮಾಡೊ ಪತ್ನಿಯ ಕೂಡಿ ಆಳಬಾರದು
ವೈರತ್ವ ಮಾಳ್ಪವರ ಸೊಲ್ಲು ಕೇಳಬಾರದು | ೨ |
ದುಷ್ಟೆ ಕರ್ಕಶಿ ಸ್ತ್ರೀಯಳ ಹೆಸರು ತೆಗೆಯಬಾರದು |
ಹತ್ತು ಮಂದಿಗಂಜದವನ ಸ್ನೇಹ ಮಾಡಬಾರದು |೩|
ಪಂಕ್ತ್ಯಾಗೆ ಪರಪಂಕ್ತಿಯನ್ನು ಮಾಡಬಾರದು |
ಮಂಕು ಜೀವನಾಗಿ ಮುಕ್ತಿ ಬೇಡಬಾರದು | ೪ |
ಆಚಾರಹೀನನ ಮನೆಯೊಳೂಟ ಮಾಡಬಾರದು |
ವಿಚಾರವಿಲ್ಲದ ಸಭೆಯೊಳು ಕೂಡ್ರಬಾರದು | ೫ |
ಪರಪುರುಷರಿದ್ದೆಡೆಯೊಳೊಬ್ಬಳಿರಲು ಬಾರದು |
ಪುರಂದರ ವಿಠಲನ ಧ್ಯಾನ ಮರೆಯಬಾರದು | ೬ |
another version
ಕೈ ಮೀರಿ ಹೋದ ಮಾತಿಗೆ ಮರುಗಬಾರದು
ಮೈ ಮೇಲೆ ಎಚ್ಚರಿಲ್ಲದೆಲೆ ತಿರುಗಬಾರದು
||ಕೈ ಮೀರಿ||
ತಂದೆ ತಾಯಿ ಮಾತು ಕೇಳದ ,ಮಕ್ಕಳಿರಲೆ ಬಾರದು
ಬಂಧು ಬಳಗದಲ್ಲಿ ಜಗಳವಾಡಬಾರದು
||ತಂದೆ ತಾಯಿ||
ನಡತೆ ಹೀನಳಾಗಿ ಹೆಣ್ಣು ಬಾಳಬಾರದು||2||
ಕಡು ವೈರತ್ವ ಮಾಡುವವನ ಮಾತು ಕೇಳಬಾರದು
ಮಾತು ಕೇಳಬಾರದು||2||
||ಕೈ ಮೀರಿ||
ಸತಿ ಸುತರಿಗೆ ಪುರುಷ ವಂಚನೆ ಮಾಡಬಾರದು
ಅತಿ ಉನ್ಮತ್ತನಾಗಿ ಧರ್ಮ ಹಳಿಯಬಾರದು
||ಸತಿ ಸುತರಿಗೆ||
ಆಚಾರವಿಲ್ಲದವರ ಮನೆಯ ಊಟಮಾಡಬಾರದು
||ಆಚಾರ||
ವಿಚಾರವಿಲ್ಲದ ಸಭೆಯಲಿ ಕೂಡಬಾರದು||2||
||ಕೈ ಮೀರಿ||
ಪಂಕ್ತಿಯೊಳಗೆ ಭೇಧಮಾಡಿ ಬಡಿಸಬಾರದು
ಬಿಂಕದಿಂದ ಪರರ ಮನಸ್ಸು ನೋಯಿಸಬಾರದು
ಸಾವುನೋವುಗಳು ಇಲ್ಲವೆಂದು ತಿಳಿಯಬಾರದು
ದೇವನೊಬ್ಬ ಇರುವನೆಂದು ಮರೆಯಬಾರದು
ಪರರ ಸಂಪತ್ತು ನೋಡಿ ಮನದಿ ಕೊರಗಬಾರದು||2||
ಗುರು ಪುರಂದರವಿಠ್ಠಲರಾಯನ
ಕೊಂಡಾಡದೇ ಇರಲೆಬಾರದು...ಇರಲೆಬಾರದು
||ಕೈ ಮೀರಿ||
***********
No comments:
Post a Comment