Friday, 6 December 2019

ಹರಿಯೆಂಬ ನಾಮಾಮೃತದ ಸುರುಸಿಯು ಪರಮ purandara vittala


ರಾಗ :  ಆರಭಿ    ತಾಳ : ಅಟ್ಟ  

ಹರಿಯೆಂಬ ನಾಮಾಮೃತದ ಸುರುಸಿಯು ಪರಮ ಭಕ್ತರಿಗಲ್ಲದೆ         ।।ಪ।।

ಅರಿಯದ ಕಡುಮೂರ್ಖ ನೀಚ ಜನರಿಗೆಲ್ಲ ಹರುಷವಾಗಬಲ್ಲದೆ          ।।ಅ.ಪ।।

ಅಂದಿಗೆ ಅರಳೆಲೆ ಇಟ್ಟರೆ ಕೊಡ ಕಂದನಾಗಬಲ್ಲುದೆ 
ಹಂದಿಗೆ ಸಕ್ಕರೆ ತುಪ್ಪ ತಿನಿಸಲು ಗಜೇಂದ್ರನಾಗಬಲ್ಲುದೆ 
ಚಂದಿರನ ಪೂರ್ಣ ಕಳೆಯನು ತೋರಲು ಅಂಧ ನೋಡಬಲ್ಲನೆ
ಇಂದಿರೆ ಅರಸನ ನಾಮದ ಮಹಿಮೆಯ ಮಂದಜ್ಞಾನಿ ಬಲ್ಲನೆ            ।।೧।।

ಉರಗಕ್ಕೆ ಕ್ಷೀರವನೆರೆಯಲು ಅದರ ವಿಷವು ಹೋಗಬಲ್ಲುದೆ 
ತ್ವರೆಯಿಂದ ನೀಲಿಯ ಕರದಲಿ ತೊಳೆಯಲು ಕರಿದು ಹೋಗಬಲ್ಲುದೆ 
ಪರಿಪರಿ ಬಂಗಾರವಿಟ್ಟರೆ ದಾಸಿಯು ಅರಸಿಯಾಗಬಲ್ಲಳೆ
ಭರದಿಂದ ಶ್ವಾನನ ಬಾಲವ ತಿದ್ದಲು ಸರಳವಾಗಬಲ್ಲುದೆ                  ।।೨।।

ಮೋಡಕೆ ಮಯೂರ ಕುಣಿವಂತೆ ಕುಕ್ಕುಟ ನೋಡಿ ಕುಣಿಯಬಲ್ಲುದೆ 
ಹಾಡಿನ ಸವಿಯನು ಬಧಿರನು ಕೇಳಿ ಹರುಷಪಡಲು ಬಲ್ಲನೆ 
ಗೋಡೆಯ ಮುಂದೆ ನಾಟ್ಯವನಾಡಲು ನೋಡಿ ಸುಖಿಸಬಲ್ಲುದೆ
ರೂಢಿಗೊಡೆಯ ನಮ್ಮ ಪುರಂದರವಿಠಲನ ಮೂಢಜ್ಞಾನಿ ಬಲ್ಲನೆ        ।।೩।।
***

Hariyemba namamrutada surusiyu parama Baktarigallade ||pa||

Ariyada kadumurka nica janarigella harushavagaballade ||a.pa||

Andige aralele ittare koda kandanagaballude
Handige sakkare tuppa tinisalu gajendranagaballude
Candirana purna kaleyanu toralu andha nodaballane
Indire arasana namada mahimeya mandaj~jani ballane ||1||

Uragakke kshiravanereyalu adara vishavu hogaballude
Tvareyimnda niliya karadali toleyalu karidu hogaballude
Paripari bangaravittare dasiyu arasiyagaballale
Baradinda svanana balava tiddalu saralavagaballude ||2||

Modake mayura kunivante kukkuta nodi kuniyaballude
Hadina saviyanu badhiranu keli harushapadalu ballane
Godeya munde natyavanadalu nodi sukisaballude
Rudhigodeya namma purandaravithalana mudhaj~jani ballane ||3||
***


pallavi

hariyemba nAmAmrtada suruciyu parama bhaktarigallade ariyada kaDu mUrkha janarige pELlu haruSavAga ballude

caraNam 1

anduge kirugejje iTTare koDaga kandanAga ballude handige tuppa sakkare uNisalu gajEndranAga ballude
candirana SODasha kalegaLella tOralu andha nODa ballane indirEshana savinAmada rucigaLa mandajnAni ballane

caraNam 2

uragake kSIrava uNisalu adhara garaLa pOgalu ballude bharadinda shvAnana bAlava tiddalu saraLavAga ballude
bharadinda nIliya karadali toLeyalu karidu pOga ballude paripari bhangAra iTTare dAsiyu arasiyAga ballane

caraNam 3

mODakke mayUra kuNivande kukkuTa nODi kuNiya ballude goDage idirAgi nATyavanADalu nODi sukhisa ballude
hADida kushalava badhiranu kELi haruSapaDalu ballane rUDhikoDeya namma purandara viTTalanna jnAni ballane
***

ರಾಗ ಆರಭಿ. ಅಟ ತಾಳ 

ಹರಿಯೆಂಬ ನಾಮಾಮೃತದ ಸುರುಚಿಯು ಪರಮ ಭಕ್ತರಿಗಲ್ಲದೆ
ಅರಿಯದ ಕಡು ಮೂರ್ಖ ಜನರಿಗೆ ಪೇಳಲು ಹರುಷವಾಗಬಲ್ಲುದೆ

ಅಂದುಗೆ ಅರಳೆಲೆ ಇಟ್ಟರೆ ಕೊಡಗ ಕಂದನಾಗ ಬಲ್ಲುದೆ
ಹಂದಿಗೆ ತುಪ್ಪ ಸಕ್ಕರೆ ಉಣಿಸಲು ಗಜೇಂದ್ರನಾಗ ಬಲ್ಲುದೆ
ಚಂದಿರನ ಪೂರ್ಣಕಳೆಯನು ತೋರಲು ಅಂಧ ನೋಡಬಲ್ಲನೆ
ಇಂದಿರೇಶನ ಸವಿನಾಮದ ರುಚಿಗಳ ಮಂದಜ್ಞಾನಿ ಬಲ್ಲನೆ

ಉರಗಕೆ ಕ್ಷೀರವ ಉಣಿಸಲು ಅಧರ ಗರಳ ಪೋಗಲು ಬಲ್ಲುದೆ
ಭರದಿಂದ ಶ್ವಾನನ ಬಾಲವ ಎಳೆಯಲು ಸರಳವಾಗಬಲ್ಲುದೆ
ಭರದಿಂದ ನೀಲಿಯ ಕರದಲಿ ತೊಳೆಯಲು ಕರಿದು ಪೋಗಬಲ್ಲುದೆ
ಪರಿಪರಿ ಬಂಗಾರ ಇಟ್ಟರೆ ದಾಸಿಯು ಅರಸಿಯಾಗಬಲ್ಲಳೆ

ಮೋಡಕ್ಕೆ ಮಯೂರ ಕುಣಿವಂತೆ ಕುಕ್ಕುಟ ನೋಡಿ ಕುಣಿಯಬಲ್ಲುದೆ
ಗೊಡೆಗೆ ಇದಿರಾಗಿ ನಾಟ್ಯವನಾಡಲು ನೋಡಿ ಸುಖಿಸಬಲ್ಲುದೆ
ಹಾಡಿದ ಕುಶಲವ ಬಧಿರನು ಕೇಳಿ ಹರುಷಪಡಲು ಬಲ್ಲನೆ
ರೂಢಿಗೊಡೆಯ ನಮ್ಮ ಪುರಂದರವಿಠಲನ್ನ ಮೂಢಜ್ಞಾನಿ ಬಲ್ಲನೆ
*********

ಹರಿಯೆಂಬ ನಾಮಾಮೃತದ ಸುರುಸಿಯು ಪರಮ ಭಕ್ತರಿಗಲ್ಲದೆ         ।।ಪ।।

ಅರಿಯದ ಕಡುಮೂರ್ಖ ನೀಚ ಜನರಿಗೆಲ್ಲ ಹರುಷವಾಗಬಲ್ಲದೆ          ।।ಅ.ಪ।।

ಅಂದಿಗೆ ಅರಳೆಲೆ ಇಟ್ಟರೆ ಕೊಡ ಕಂದನಾಗಬಲ್ಲುದೆ
ಹಂದಿಗೆ ಸಕ್ಕರೆ ತುಪ್ಪ ತಿನಿಸಲು ಗಜೇಂದ್ರನಾಗಬಲ್ಲುದೆ
ಚಂದಿರನ ಪೂರ್ಣ ಕಳೆಯನು ತೋರಲು ಅಂಧ ನೋಡಬಲ್ಲನೆ
ಇಂದಿರೆ ಅರಸನ ನಾಮದ ಮಹಿಮೆಯ ಮಂದಜ್ಞಾನಿ ಬಲ್ಲನೆ            ।।೧।।

ಉರಗಕ್ಕೆ ಕ್ಷೀರವನೆರೆಯಲು ಅದರ ವಿಷವು ಹೋಗಬಲ್ಲುದೆ
ತ್ವರೆಯಿಂದ ನೀಲಿಯ ಕರದಲಿ ತೊಳೆಯಲು ಕರಿದು ಹೋಗಬಲ್ಲುದೆ
ಪರಿಪರಿ ಬಂಗಾರವಿಟ್ಟರೆ ದಾಸಿಯು ಅರಸಿಯಾಗಬಲ್ಲಳೆ
ಭರದಿಂದ ಶ್ವಾನನ ಬಾಲವ ತಿದ್ದಲು ಸರಳವಾಗಬಲ್ಲುದೆ                  ।।೨।।

ಮೋಡಕೆ ಮಯೂರ ಕುಣಿವಂತೆ ಕುಕ್ಕುಟ ನೋಡಿ ಕುಣಿಯಬಲ್ಲುದೆ
ಹಾಡಿನ ಸವಿಯನು ಬಧಿರನು ಕೇಳಿ ಹರುಷಪಡಲು ಬಲ್ಲನೆ
ಗೋಡೆಯ ಮುಂದೆ ನಾಟ್ಯವನಾಡಲು ನೋಡಿ ಸುಖಿಸಬಲ್ಲುದೆ
ರೂಢಿಗೊಡೆಯ ನಮ್ಮ ಪುರಂದರವಿಠಲನ ಮೂಢಜ್ಞಾನಿ ಬಲ್ಲನೆ        ।।೩।।
***

No comments:

Post a Comment