Monday 6 September 2021

ಧಣಿಯ ನೋಡಿದೆನೋ ವೆಂಕಟನ ಮನ ದಣಿಯೆ purandara vittala DHANIYA NODIDENO VENKATANA MANA DANIYA




ಧಣಿಯ ನೋಡಿದೆನೋ ವೆಂಕಟನ , ಮನ-
ದಣಿಯೆ ನೋಡಿದೆ ಶಿಖಾಮಣಿ ತಿರುಮಲನ ||

ಚರಣದಂದುಗೆ ಗೆಜ್ಜೆಯವನ , ಪೀತಾಂ-

ಬರ ಉಡಿಗೆ ಒಡ್ಯಾಣವಿಟ್ಟವನ
ಮೆರೆಯುವ ಮಾಣಿಕ್ಯದವನ , ಚೆನ್ನ
ಸರ ಹಾರ ಪದಕ ಕೌಸ್ತುಭ ಧರಿಸಿದವನ ||

ಕೊರಳೊಳು ವೈಜಯಂತಿ ಇಹನ , ಕಿರು

ಬೆರಳ ಮುದ್ರಿಕೆ ಭುಜಕೀರ್ತಿಲೊಪ್ಪುವನ
ಅರಳುಕಂಗಳ ನೋಟದವನ , ಸುಳಿ-
ಗುರುಳು ನೊಸಲು ಪಟ್ಟಿ ನಾಮ ಹಚ್ಚಿಹನ ||

ಶಂಖಚಕ್ರವ ಪಿಡಿದವನ , ಕೈ-

ಕಂಕಣ ತೋಳ್ಬಂದಿ ಬಾಪುರಿಯವನ
ಶಂಖನೂದುವ ಸರ್ವೋತ್ತಮನ , ಭೂ –
ವೈಕುಂಠವಿದೆಂದು ಹಸ್ತದಿ ತೋರಿಸುವನ ||

ಕೇಸಕ್ಕಿ ಅನ್ನ ಉಂಬುವನ , ಬಡ್ಡಿ

ಕಾಸು ಬಿಡದ ಹಾಗೆ ಕೂಡಿ ಹಾಕುವನ
ಘೋಷಾನಾದಕ್ಕೆ ಒಲಿದಿಹನ , ಮೈಯೊಳ್
ಸೂಸುವ ಗಂಧ ಕಸ್ತೂರಿ ಲೇಪಿತನ ||

ನೀಟಾದ ವಲ್ಲಿ ಹೊದ್ದಿಹನ , ಹೊರ

ಬೇಟೆಯಾಡಿ ಅಂದದಿಂದ ಬರುವನ
ನೋಟದಿ ಬಂದು ನಿಂತಿಹನ , ಈ
ಸೃಷ್ಟಿಗೊಡೆಯ ಪುರಂದರವಿಟ್ಠಲನ ||
****


ರಾಗ ಕಾಪಿ ಅಟತಾಳ - raga in audio may differ

Daniya nodidhano venkatana mana
Daniya nodide shikamani tirumalana ||

Kesakki annava unbuvana baddi
Kasu bidade honna galisuvana
Dose annava marisuvana tanna
Dasara myaladi kunidadutihana ||1||

Gantinalli huduvavana hora
Hontu hogi beteyadvana
Gante nadake naliyuvana bhuvai
Kunthavidendu hastava torutihana ||2||

Bettadolage irutihana mana
Mutti bhajiparige ishtava salisuvana
Kotta varava tappadavana
Srushtigadhipa shriPurandara vittalana ||3||
***

pallavi

daNiya nODidEnO vEnkaTana mana daNiya nODide shikhAmaNI tirumalana

caraNam 1

caraNadanduge gejjeyavana pItAmbara uDige oDyANa viTTihana
mereyuva mANikyadavana cenna sar hAra padaka kaustubha darisidana

caraNam 2

kopraLoLu vaijayanti ihana kiru beraLa mudrike bhuja kIrtiloppuvana
araLu kangaLa nODadavana suLi guLuru nosanu paTTi nAma haccihana

caraNam 3

shankha cakrava piDidihana kai kankaNa tOLbandi bApuriyavana
shankhanUduva sarvOttamana bUvai kuNDavidendu hastadi tOrisuvana

caraNam 4

nIDAda valli hoddihana hora beTeyADi andadinda baruvana
nODadi bandu nindihana I shrSTi koDeya purandara viTTalana
***

ಧಣಿಯ ನೋಡಿದೆನೋ ವೆಂಕಟನ 
ಮನದಣಿಯೆ ನೋಡಿದೆ ಶಿಖಾಮಣಿಯ ನಿರ್ಮಲನ ಪ

ಕೇಸಕ್ಕಿಅನ್ನ ಉಂಬುವನ ದುಡ್ಡುಕಾಸು ಬಿಡದೆ ಹೊನ್ನುಗಳಿಸಿಕೊಂಬುವನ ||ದೋಸೆ ಅನ್ನವ ಮಾರಿಸುವನತನ್ನ ದಾಸರ ಮೇಳದಿ ಕುಣಿದಾಡುತಿಹನ 1

ಗಂಟಿನೊಲ್ಲಿಯ ಹೊದ್ದಿಹನ-ಹೊರಹೊಂಟು ಹೋಗಿ ಬೇಟೆಯಾಡುತಲಿಹನ ||ಗಂಟೆ ನಾದಕೆ ಒಲಿಯುವನ ಭೂವೈ-ಕುಂಠವಿದೆಂದು ಹಸ್ತವ ತೋರಿದವನ 2

ಬೆಟ್ಟದೊಳಗೆ ಇದುತಿಹನ ಮನಮುಟ್ಟೆ ಭಜಿಪ ಭಕುತರಿಗೊಲಿದವನ ||ಕೊಟ್ಟ ವರವ ತಪ್ಪದವನ ಈಸೃಷ್ಟಿಗಧಿಕಪುರಂದರವಿಠಲನ3

****

No comments:

Post a Comment