Monday, 1 November 2021

ಅಪಮಾನವಾದರೆ ಒಳಿತು ಅಪರೂಪ ಹರಿನಾಮ ಜಪಿಸುವ purandara vittala APAMAANAVAADARE OLITU APAROOPA HARINAMA JAPISUVA



ಅಪಮಾನವಾದರೆ ಒಳ್ಳಿತು
ಅಪರೂಪ ಹರಿನಾಮ ಜಪಿಸುವ ಮನುಜಗೆ ||ಪ||

ಮಾನದಿಂದ ಅಭಿಮಾನ ಪುಟ್ಟುವುದು
ಮಾನದಿಂದ ತಪ ಹಾನಿಯಾಗುವುದು
ಮಾನಿ ದುರ್ಯೋಧನಗೆ ಹಾನಿಯಾಯಿತು ಅನು-
ಮಾನವಿಲ್ಲ ಮಾನಾಪಮಾನಸಮನಿಗೆ ||

ಅಪಮಾನದಿಂದಲಿ ತಪ ವೃದ್ಧಿಯಾಗುವುದು
ಅಪಮಾನದಿಂದ ಪುಣ್ಯ ಸಫಲವಾಗುವುದು
ಅಪಮಾನದಿಂದಲಿ ನೃಪ ಧ್ರುವರಾಯಗೆ
ಕಪಟ ನಾಟಕ ಕೃಷ್ಣ ಅಪರೋಕ್ಷನಾದನು ||

ನಾನೇನು ಮಾಡಲಿ ಯಾರಲ್ಲಿ ಪೋಗಲಿ
ಕಾನನಚರರಾರಾಧ್ಯ ನೀನಿರಲು
ದೀನ ರಕ್ಷಕ ನಮ್ಮ ಪುರಂದರ ವಿಠಲ
ಏನು ಬೇಡೆನಗಪಮಾನವೇ ಇರಲಿ ||
****


ರಾಗ ಪೂರ್ವಿ ಅಟ ತಾಳ (raga, taala may differ in audio)

ಅಪಮಾನವಾದರೆ ಒಳಿತು |
ಅಪರೂಪ ಹರಿನಾಮ ಜಪಿಸುವ ಮನುಜಗೆ ಪ

ಮಾನದಿಂದಲಿ ಅಭಿಮಾನ ಪುಟ್ಟವುದು |ಮಾನದಿಂದಲಿ ತಪ ಹಾನಿಯಾಯಿತು ಹಾನಿಯಾಗುವುದು ||ಮಾನಿ ಕೌರವನಿಗೆ ಹಾನಿಯಾಯಿತು-ಅನು-|ಮಾನವಿಲ್ಲವು ಮಾನ-ಅಪಮಾನ ಸಮರಿಗೆ 1

ಅಪಮಾನದಿಂದಲಿ ತಪವೃದ್ಧಿಯಾಹುದು |ಅಪಮಾನದಿಂ ಪುಣ್ಯ ಸಫಲವಾಗುವುದು ||ಅಪಮಾನದಿಂದಲಿನೃಪಧ್ರುವರಾಯಗೆ |ಕಪಟನಾಟಕ ಕೃಷ್ಣ ಅಪರೋಕ್ಷನಾದನು2

ನಾನೇನ ಮಾಡಲಿ ಆರಲ್ಲಿ ಪೋಗಲಿ |ಕಾನನಚರರಾರಾಧ್ಯ ನೀನಿರಲು ||ದೀನರಕ್ಷಕ ನಮ್ಮ ಪುರಂದರವಿಠಲನೆ |ಏನು ಬೇಡೆನಗಪಮಾನವೆ ಇರಲಿ 3
*********

No comments:

Post a Comment