ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ ||ಪ||
ಆನೆ ಕುದುರೆ ಒಂಟೆ ಲೊಳಲೊಟ್ಟೆ , ಬಹು
ಸೇನೆ ಭಂಡಾರವು ಲೊಳಲೊಟ್ಟೆ
ಮಾನಿನಿಯರ ಸಂಗ ಲೊಳಲೊಟ್ಟೆ , ದೊಡ್ಡ
ಕ್ಷೋಣೀಶನೆಂಬುದು ಲೊಳಲೊಟ್ಟೆ ||
ಮುತ್ತು ಮಾಣಿಕ್ಯ ಲೊಳಲೊಟ್ಟೆ , ಚಿನ್ನ
ಛತ್ರ ಚಾಮರ ಧ್ವಜ ಲೊಳಲೊಟ್ಟೆ
ಸುತ್ತಗಲ ಕೋಟೆ ಲೊಳಲೊಟ್ಟೆ , ಮತ್ತೆ
ಉತ್ತಮಪ್ರಭುತ್ವ ಲೊಳಲೊಟ್ಟೆ ||
ಕಂಟಕರೆಂಬೋದು ಲೊಳಲೊಟ್ಟೆ , ನಮ್ಮ
ನೆಂಟರು ಇಷ್ಟರು ಲೊಳಲೊಟ್ಟೆ
ಉಂಟಾದ ಗುಣನಿಧಿ ಪುರಂದರವಿಠಲನ್ನ
ಬಂಟನಾಗದವ ಲೊಳಲೊಟ್ಟೆ ||
****
ರಾಗ ಶಂಕರಾಬಾರಣ ಅಟತಾಳ (raga, taala may differ in audio)
ರಾಗ : ಪೂರ್ವಕಲ್ಯಾಣಿ ತಾಳ : ಅಟ್ಟ
Lolalotte ella lolalotte ||pa||
Ane kudure onte lolalotte bahu
Sene bandaravu lolalotte
Maniniyara sanga lolalotte dodda
Kshonisanembudu lolalotte ||1||
Muttu manikya lolalotte , cinna
Catra camara dhvaja lolalotte
Suttagalu kote lolalotte
Matte uttama prabutva lolalotte ||2||
Kantakaremboru lolalotte ninna
Nantaru ishtaru lolalotte
Untada gunanidhi purandaravithala
Bantanagadava lolalotte ||3||
***
pallavi
loLaloTTe ellA loLaloTTe
caraNam 1
Ane kudure oNTe loLaloTTe balu sEne bhaNDAravu loLaloTTe
mAniniyara sanga loLaloTTe doDDa kSONIshanembudu loLaloTTe
caraNam 2
muttu mANikya loLaloTTe cinna chatra cAmara loLaloTTe
suttagala koTe loLaloTTe matte uttama prabhutva loLaloTTe
caraNam 3
kaNTakarembodu loLaloTTe namma neNTaru iSTaru loLaloTTe
uNTAda guNanidhi purandara viTTalanna baNDanAgadava loLaloTTe
***
ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ ||ಪ||
ಆನೆ ಕುದುರೆ ಒಂಟೆ ಲೊಳಲೊಟ್ಟೆ
ಸೇನೆ ಭಂಡಾರವು ಲೊಳಲೊಟ್ಟೆ
ಮಾನಿನಿಯರ ಸಂಗ ಲೊಳಲೊಟ್ಟೆ
ದೊಡ್ಡ ಕ್ಷೋಣೀಶನೆಂಬುದು ಲೊಳಲೊಟ್ಟೆ ||೧||
ಮುತ್ತು ಮಾಣಿಕ್ಯ ಲೊಳಲೊಟ್ಟೆ
ಚಿನ್ನ ಛತ್ರ ಚಾಮರ ಧ್ವಜ ಲೊಳಲೊಟ್ಟೆ
ಸುತ್ತಗಲ ಕೋಟೆ ಲೊಳಲೊಟ್ಟೆ
ಮತ್ತೆ ಉತ್ತಮಪ್ರಭುತ್ವ ಲೊಳಲೊಟ್ಟೆ ||೨||
ಕಂಟಕರೆಂಬೋದು ಲೊಳಲೊಟ್ಟೆ
ನಮ್ಮ ನೆಂಟರು ಇಷ್ಟರು ಲೊಳಲೊಟ್ಟೆ
ಉಂಟಾದ ಗುಣನಿಧಿ ಪುರಂದರವಿಠಲನ
ಬಂಟನಾಗದವ ಲೊಳಲೊಟ್ಟೆ ||೩||
***
ಪುರಂದರದಾಸರು
ಲೊಳಲೊಟ್ಟೆ ಬದುಕು ಲೊಳಲೊಟ್ಟೆ ಪ.
ಆನೆ ಕುದುರೆ ಮಂದಿ ಲೊಳಲೊಟ್ಟೆ - ಬಲು |
ಸೈನ್ಯ ಭಂಡಾರವು ಲೊಳಲೊಟ್ಟೆ ||
ಮಾನನಿಯರ ಸಂಗ ಲೊಳಲೊಟ್ಟೆ - ಮಹಾ |
ಮಾನ್ಯ - ವಿಜಯರೆಲ್ಲ ಲೊಳಲೊಟ್ಟೆ 1
ಮುತ್ತು - ಮಾಣಿಕ - ಚಿನ್ನ ಲೊಳಲೊಟ್ಟೆ - ಬಲು |
ಛತ್ರ - ಚಾಮರಗಳು ಲೊಳಲೊಟ್ಟೆ ||
ಸುತ್ತಗಳು ಕೋಟೆಯು ಲೊಳಲೊಟ್ಟೆ - ಅಲ್ಲಿ |
ಸುತ್ತುವ ಜನವೆಲ್ಲ ಲೊಳಲೊಟ್ಟೆ 2
ನೆಂಟರು - ಇಷ್ಟರು ಲೊಳಲೊಟ್ಟೆ - ದೊಡ್ಡ |
ಕಂಟಕಾನಾಹೊದು ಲೊಳಲೊಟ್ಟೆ ||
ಉಂಟಾದ ಗುಣನಿಧಿ ಪುರಂದರವಿಠಲನ |
ಬಂಟನಾಗದವ ಲೊಳಲೊಟ್ಟೆ 3
****
No comments:
Post a Comment