Sunday, 5 December 2021

ಪೂರ್ವಜನ್ಮದ ಕರ್ಮ ಹಣೆಯಲಿ ಬರೆದುದಕೆ purandara vittala POORVA JANMADA KARMA HANEYALI BAREDUDAKE



ಪೂರ್ವಜನ್ಮದ ಕರ್ಮ, ಪೂರ್ವಜನ್ಮದ ಕರ್ಮ
ಪೂರ್ವ ಜನ್ಮದ ಕರ್ಮ ಹಣೆಯಲಿ ಬರೆದುದಕೆ
ಯಾರೇನು ಮಾಡುವರು ಅವನಿಯೊಳಗೆ||2||
                                       ||ಪೂರ್ವಜನ್ಮದ||

ಮಾಡಿದಡುಗೆಯು ಕೆಡಲು, 
ಮನೆಯ ಗಂಡನು ಬಿಡಲು||ಮಾಡಿದ||
ಕೂಡಿದ್ದ ಸತಿ ತಾನು ಕುಣಿಸ್ಯಾಡಲು||2||
ಗೋಡೆಗೆ ಬರೆದ ಹುಲಿ 
ಗುಡು ಗುಡಿಸಿ ತಿನ ಬರಲು||ಗೋಡೆಗೆ||
ಆಡದ ಮಾತುಗಳ||2||
ಅಖಿಲರು ನಿಜವೆನಲು
ಯಾರೇನು ಮಾಡುವರು ಅವನಿಯೊಳಗೆ||2||

ಹೆತ್ತ ತಾಯಿ ಮಕ್ಕಳಿಗೆ 
ಹಿಡಿದು ವಿಷ ಹಾಕಿದರೇ...ಆ...||ಹೆತ್ತ||
ಮತ್ತೆ ತಂದೆಯು ಹೊರಗೆ ಮಾರಿದರೆ
                                    ||ಹೆತ್ತ ತಾಯಿ||
ತೊತ್ತು ಅರಸಿಗೆ ಪ್ರತಿ ಉತ್ತರವನಾಡಿದರೆ||2||
ಕತ್ತಲೆಯು ಬೆನ್ನಟ್ಟಿ||2||
ಕರಡ್ಯಾಗಿ ಕಚ್ಚಿದರೆ
ಯಾರೇನು ಮಾಡುವರು ಅವನಿಯೊಳಗೆ||2||

ಹೊಲ ಬೇಲಿ ಮೆದ್ದರೆ, ಮೊಲವೆದ್ದು ಹಿರಿದರೇ....||2||
ತಲೆಗೆ ತನ್ನ ಕೈ ಪೆಟ್ಟು ತಾಕಿದರೆ||2||
ನೆರಳು ಹಾವಾದರೆ , ಗೆಳೆಯ ರಿಪುವಾದರೆ||2||
ಕಲಸಿದ ಅವಲಕ್ಕಿ||2||
ಕಲಪರಟಿ ನುಂಗಿದರೆ
ಯಾರೇನು ಮಾಡುವರು ಅವನಿಯೊಳಗೆ||2||

ಏರಿಕುಳಿತ ಕೊಂಬೆ ಎರಡಾಗಿ ಮುರಿದರೆ||2||
ಮೇರೆತಪ್ಪಿ ವಿಧಿಯು ಮೀರಿದರೆ||ಏರಿಕುಳಿತ||
ಆರಿದ್ದ ಇದ್ದಲಿಯು ಅಗ್ನಿಯಾಗಿ ಉರಿದರೆ||2||
ಧೀರ ಪುರಂದರವಿಠ್ಠಲ||2||
ನಿನ್ನ ದಯ ತಪ್ಪಿದರೆ
ಯಾರೇನು ಮಡುವರು ಅವನಿಯೊಳಗೆ||2||
                                  ||ಪೂರ್ವ ಜನ್ಮದ ||

No comments:

Post a Comment