ಹರಿಯಧಿಕ ಹರನಧಿಕನೆಂದು ಬಡೆದಾಡದಿರಿ
ಹರಿಹರ ಭಕುತರೆ ಇದಕೆ ಸಾಕ್ಷಿ ||ಪ||
ಹರಿಯು ಬಾಗಿಲ ಕಾಯ್ದು ಬಲಿ ಭಾಗ್ಯವಂತನಾದ
ಹರನು ಬಾಗಿಲ ಕಾಯ್ದು ಬಾಣನಳಿದ
ಹರಿಯೊಲಿದು ಭೀಮನಿಗೆ ಪರಿಪೂರ್ಣ ವರವಿತ್ತ
ಹರನೊಲಿದು ಜರಾಸಂಧ ಹತನಾದುದರಿಯ ||
ಹರಿಯ ನೆನೆದು ಪ್ರಹ್ಲಾದ ಬಂದ ದುರಿತವ ಗೆದ್ದ
ಹರನ ನೆನೆದವನ ಪಿತ ಹತನಾದನು
ಹರಿಯ ನೆನೆದು ವಿಭೀಷಣ ಪೂರ್ಣ ವರ ಪಡೆದ
ಹರನ ವರ ಪಡೆದ ರಾವಣ ಹತನಾದನರಿಯ ||
ಹರನ ವರ ಪಡೆದ ಭಸ್ಮಾಸುರನು ಗರ್ವದಲಿ
ಹರನ ಶಿರದಲಿ ಕರವಿಡಲು ಬರಲು
ಹರಿ ನೀನೇ ಗತಿಯೆಂದು ತ್ರಿಪುರಾರಿ ಮೊರೆಯಿಡಲು
ವರದ ಪುರಂದರವಿಠಲ ಕಾಯ್ದನರಿಯ ||
***
ರಾಗ ಕಾಂಭೋಜ. ಝಂಪೆ ತಾಳ (raga, taala may differ in audio)
Hariyadhika haranadhika endu horadadiri
Hari-harara baktare sakshi lokadolu ||pa||
Hariyendu prahlada banda duritava gelida
Haranendu avana pita tane alida
Hariyendu vibishananu sthira-pattavaidida
Haranendu ravananu hatanadanayya ||1||
Hariyendu bima paripurnakamanu Ada
Haranenda A jarasandha hatanada
Hariya bagila kayda bali bagyavantanada
Harana bagila kayda bananalida ||2||
Harana varavanu padeda basmasuranu avana
Siradalli tanna karavidalu baralu
Hari nine gatiyendu tripurari moreyidalu
Varada purandara vithala kayda-dariya ||3||
***pallavi
hariyadhika haranadhikanendu baDEdADadiri harihara bhakutare idage sAkSi
caraNam 1
hariyu bAgila kAidu bali bhAgyavantanAda haranu bAgila kAidu bANanaLida
hariyolidu bhImanige paripUrNa varavitta haranolidu jarAsandha hatanAdudariya
caraNam 2
hariya nenedu prahlAda banda duritava gedda harana nenedavana pita hatanAdanu
hariya nenedu vibhISaNa pUrNa vara paDeda harana vara paDeda rAvaNa hatanAdanariya
caraNam 3
harana vara paDeda bhasmASuranu garvadali harana shiradali karaviDalu baralu
hari nInE gatiyendu tripurAri moreyiDalu varada purandara viTTala kAidanariya
***
ಹರಿಯಧಿಕ ಹರನಧಿಕ ಎಂದು ಹೋರಾಡದಿರಿ
ಹರಿ–ಹರರ ಭಕ್ತರೇ ಸಾಕ್ಷಿ ಲೋಕದೊಳು ||ಪ||
ಹರಿಯೆಂದು ಪ್ರಹ್ಲಾದ ಬಂದ ದುರಿತವ ಗೆಲಿದ
ಹರನೆಂದು ಅವನ ಪಿತ ತಾನೆ ಅಳಿದ
ಹರಿಯೆಂದು ವಿಭೀಷಣನು ಸ್ಥಿರ–ಪಟ್ಟವೈದಿದ
ಹರನೆಂದು ರಾವಣನು ಹತನಾದನಯ್ಯ ||೧||
ಹರಿಯೆಂದು ಭೀಮ ಪರಿಪೂರ್ಣಕಾಮನು ಆದ
ಹರನೆಂದ ಆ ಜರಾಸಂಧ ಹತನಾದ
ಹರಿಯ ಬಾಗಿಲ ಕಾಯ್ದ ಬಲಿ ಭಾಗ್ಯವಂತನಾದ
ಹರನ ಬಾಗಿಲ ಕಾಯ್ದ ಬಾಣನಳಿದ ||೨||
ಹರನ ವರವನು ಪಡೆದ ಭಸ್ಮಾಸುರನು ಅವನ
ಶಿರದಲ್ಲಿ ತನ್ನ ಕರವಿಡಲು ಬರಲು
ಹರಿ ನೀನೆ ಗತಿಯೆಂದು ತ್ರಿಪುರಾರಿ ಮೊರೆಯಿಡಲು
ವರದ ಪುರಂದರ ವಿಠಲ ಕಾಯ್ದ–ದರಿಯ ||೩||
********
ಹರಿ–ಹರರ ಭಕ್ತರೇ ಸಾಕ್ಷಿ ಲೋಕದೊಳು ||ಪ||
ಹರಿಯೆಂದು ಪ್ರಹ್ಲಾದ ಬಂದ ದುರಿತವ ಗೆಲಿದ
ಹರನೆಂದು ಅವನ ಪಿತ ತಾನೆ ಅಳಿದ
ಹರಿಯೆಂದು ವಿಭೀಷಣನು ಸ್ಥಿರ–ಪಟ್ಟವೈದಿದ
ಹರನೆಂದು ರಾವಣನು ಹತನಾದನಯ್ಯ ||೧||
ಹರಿಯೆಂದು ಭೀಮ ಪರಿಪೂರ್ಣಕಾಮನು ಆದ
ಹರನೆಂದ ಆ ಜರಾಸಂಧ ಹತನಾದ
ಹರಿಯ ಬಾಗಿಲ ಕಾಯ್ದ ಬಲಿ ಭಾಗ್ಯವಂತನಾದ
ಹರನ ಬಾಗಿಲ ಕಾಯ್ದ ಬಾಣನಳಿದ ||೨||
ಹರನ ವರವನು ಪಡೆದ ಭಸ್ಮಾಸುರನು ಅವನ
ಶಿರದಲ್ಲಿ ತನ್ನ ಕರವಿಡಲು ಬರಲು
ಹರಿ ನೀನೆ ಗತಿಯೆಂದು ತ್ರಿಪುರಾರಿ ಮೊರೆಯಿಡಲು
ವರದ ಪುರಂದರ ವಿಠಲ ಕಾಯ್ದ–ದರಿಯ ||೩||
********
No comments:
Post a Comment