ಯಾರು ಬರುವರು ನಿನ್ನ ಹಿಂದೆ ||ಪ||
ಇತ್ತ ಬಾರೆಂದು ಯಮಭಟರು ಸೆಳೆದೊಯ್ಯುವಾಗ ||ಅ||
ಸತಿಸುತರುಗಳು ಬರುವುದಿಲ್ಲ, ನಿನ್ನ
ಹಿತವಾದ ಬಂಧು ಸ್ನೇಹಿತರು ಬರುವುದಿಲ್ಲ
ಕ್ಷಿತಿಮಾನ್ಯಕ್ಷೇತ್ರವು ಬರುವುದಿಲ್ಲ
ಲಕ್ಷ್ಮೀಪತಿಯೆಂಬವನಲ್ಲದೆ ಗತಿಯೊಬ್ಬರಿಲ್ಲ ||
ತುರಗ ಗಜಗಳು ಬರುವುದಿಲ್ಲ, ನಿನ್ನ
ಮೆರವಣಿಗೆ ಮಾಡುವ ಈ ತನು ನಿನ್ನದಲ್ಲ
ನರಪತಿಯ ಸೇವೆ ಸ್ಥಿರವಲ್ಲ ನರ-
ಹರಿಯೊಬ್ಬನಲ್ಲದೆ ಪರಗತಿಯಿಲ್ಲ ||
ಧನಧಾನ್ಯಗಳು ಬರುವುದಿಲ್ಲ, ನಿನ್ನ
ಅನುವಾದ ನವಸಾಧನಗಳು ಬರುವುದಿಲ್ಲ
ಜನನಿಜನಕರು ಬರುವುದಿಲ್ಲ, ನಮ್ಮ
ಹನುಮನಯ್ಯನ ಹೊರತು ಬೇರೆ ಗತಿಯಿಲ್ಲ ||
ಈ ದೇಹ ನೀ ಬಿಟ್ಟ ಬಳಿಕ, ಅವರ
ಬಾಧೆಗೋಸ್ಕರ ಬೆಂಕಿ ಹಾಕಿ ಸುಡುತಿಹರೊ
ಬೂದಿ ನೀರೊಳು ಚೆಲ್ಲುತಿಹರೊ, ಬಂದು
ಬೀದಿಯಲಿ ನಿಂತು ಬೊಬ್ಬೆಯ ಮಾಡುತಿಹರೊ ||
ಇನ್ನಾದರು ತಿಳಿದುಕೊಂಡು, ಮತ್ತೆ
ಮುನ್ನಾದರು ಅನ್ಯ ಗತಿಯಿಲ್ಲವಂದು
ಎನ್ನೊಡೆಯ ನೀನೆ ಗತಿಯೆಂದು, ಬೇಡು
ಮನ್ನಿಸಿ ಪುರಂದರವಿಠಲ ಸಲಹೆಂದು ||
***
pallavi
yAru baruvaru ninna hinde
anupallavi
itta bArendu yamabhaTaru seLedoyyuvAga
caraNam 1
sati sutarugaLu baruvudilla ninna hitavAda bandhu snEhidaru baruvudilla
kSiti mAnya kSEtravu baruvudilla lakSmIpatiyembavanallade gatiyobbarilla
caraNam 2
turaga gajagaLu baruvudilla ninna meravaNige mADuva I tanu ninnadalla
nara patiya sEve sthiravalla narahariyobbanallade para gatiyilla
caraNam 3
dhana dhAnyagaLu baruvudilla ninna anuvAda navasAdhanagaLu baruvudilla
janani janakaru baruvudilla namma hanumanayyana horadu bEre gatiyilla
caraNam 4
I dEha nI biTTa baLiga avaru bAdhegOskara bengi hAki suDutiharo
bUdi nIroLu cellutiharo bandu bIdiyali nintu bobbeya mADutiharo
caraNam 5
innAdaru tiLidukoNDu matte munnAdaru anya gatiyillavandu
ennoDeya nIne gatiyendu bEDu mannisi purandara viTTala salahendu
***
ಯಾರು ಬರುವರು ನಿನ್ನ ಹಿಂದೆ ||2||
ಯಾರು ಬರುವರು ನಿನ್ನ ಹಿಂದೆ ||2||
ಇತ್ತ ಬಾರೆಂದು ಯಮಭಟರು
ಎಳೆದೊಯ್ಯುವಾಗ ||ಯಾರು||
ಸತಿಸುತರುಗಳು ಬರುವುದಿಲ್ಲ, ನಿನ್ನ
ಹಿತವಾದ ಬಂಧು ಸ್ನೇಹಿತರು ಬರುವುದಿಲ್ಲ
||ಸತಿಸುತರು||
ಕ್ಷಿತಿಮಾನ್ಯ ಕ್ಷೇತ್ರ ಬರುವುದಿಲ್ಲ||2||
ಲಕ್ಷ್ಮೀಪತಿಯೆಂಬವನಲ್ಲದೆ ಗತಿಯೊಬ್ಬರಿಲ್ಲ
||ಯಾರು||
ಧನಧಾನ್ಯಗಳು ಬರುವುದಿಲ್ಲ, ನಿನ್ನ
ಅನುವಾದ ನವಸಾಧನಗಳು ಬರುವುದಿಲ್ಲ
||ಧನಧಾನ್ಯಗಳು||
ಜನನಿಜನಕರು ಬರುವುದಿಲ್ಲ, ನಮ್ಮ||2||
ಹನುಮನಯ್ಯನ ಹೊರತು ಬೇರೆ ಗತಿಯಿಲ್ಲ
||ಯಾರು|
ಇನ್ನಾದರು ತಿಳಿದುಕೊಂಡು, ಮತ್ತೆ
ಮುನ್ನಾದರು ಅನ್ಯ ಗತಿಯಿಲ್ಲವೆಂದು
||ಇನ್ನಾದರು||
ಎನ್ನೊಡೆಯ ನೀನೆ ಗತಿಯೆಂದು, ಬೇಡು||2
ಮನ್ನಿಸಿ ಪುರಂದರವಿಠಲ ಸಲಹೆಂದು
****
ರಾಗ ಯದುಕುಲಕಾಂಭೋಜ. ತ್ರಿಪುಟ ತಾಳ (raga tala may differ in audio)
No comments:
Post a Comment